ಆರ್ ಆರ್ ನಗರದ ಚುನಾವಣಾಯ ಬಗ್ಗೆ ತಲೆ ಕೆಡಿಸಿಕೊಳ್ಳದ ಸಿದ್ದು , ಅಮೇರಿಕಾ ಚುನಾವಣಾಯ ಬಗ್ಗೆ ನೀಡಿದ ಹೇಳಿಕೆ ಈಗ ಸಕ್ಕತ್ ವೈರಲ್!ಮೈಸೂರು: ಅಮೆರಿಕಾದಲ್ಲಿ ಮೋದಿ ಹೆಸರು ನಡೆಯುವುದಿಲ್ಲ. ಅಲ್ಲಿ ಜನ ಮೋದಿ ಮುಖ ನೋಡಿ ಓಟ್ ಹಾಕ್ತಾರಾ? ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿಕೊಂಡು ಮತ ಕೇಳಿದ್ದರು. ಆದರೆ ಅಮೆರಿಕಾ ಚುನಾವಣೆಯೇ ಬೇರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮೆರಿಕಾದಲ್ಲಿನ ಅನಿವಾಸಿ ಭಾರತೀಯರೂ ಮೋದಿ ಮುಖ ನೋಡಿಕೊಂಡು ಮತ ಹಾಕಲ್ಲ. ಭಾರತದಲ್ಲೇ ಮೋದಿ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ. ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಯುವ ಜನರು ಮೋದಿ ವಿರುದ್ಧ ಸಿಟ್ಟು ಹೊರಹಾಕುತ್ತಿದ್ದಾರೆ. ಯುವ ಜನರು ಮೋದಿ ವಿರುದ್ಧ ಸಿಟ್ಟು ಹೊರಹಾಕುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾವಣೆಯಲ್ಲಿ ಮೋದಿ ಹೆಸರು ಬಳಕೆಯಾಗೋಲ್ಲ ಎಂದು ಅಭಿಪ್ರಾಯಪಟ್ಟರು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದಿಲ್ಲ. ಖಡಾಖಂಡಿತವಾಗಿಯೂ ಯಡಿಯೂರಪ್ಪ ಬದಲಾವಣೆಯಾಗುತ್ತಾರೆ. ನನಗೆ ದಿಲ್ಲಿಯಿಂದ ಬಂದಿರುವ ಮಾಹಿತಿ ಆಧಾರದ ಮೇಲೆ ಹೇಳುತ್ತಿದ್ದೇನೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವುದು ಸಹ ಒಂದು ಕಾರಣ ಇರಬಹುದು. ಹಲವು ದಿನದಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಇದೆ. ಹಾಗಾಗಿ ಉಪಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹೇಳಿದರು. ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಶಿರಾದಲ್ಲಿ ಜಯಚಂದ್ರ ಗೆಲ್ಲುತ್ತಾರೆ. ಆರ್ ಆರ್ ನಗರದಲ್ಲಿ ಕುಸುಮಾ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದು ಕಾಂಗ್ರೆಸ್ ಪರವಾದ ಮತಗಳಾಗಿವೆ. ಶಿರಾದಲ್ಲಿ ಕಳೆದ ಬಾರಿ ಅಪಪ್ರಚಾರ ಆಗಿತ್ತು. ಆರ್ ಆರ್ ನಗರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಇದರ ಜೊತೆಗೆ ನಾವೆಲ್ಲ ಪ್ರಚಾರ ಮಾಡಿದಾಗಲೂ ಜನರು ಕಾಂಗ್ರೆಸ್ ಪರ ಒಲವು ತೋರಿದ್ದರು. ಈ ಎಲ್ಲ ಕಾರಣದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು. ಈ ವರ್ಷ ಶಾಲೆಗಳನ್ನು ಆರಂಭಿಸುವುದು ಬೇಡ. ಇದು ಸರ್ಕಾರಕ್ಕೆ ನನ್ನ ವೈಯುಕ್ತಿಕ ಸಲಹೆ. ಈ ವರ್ಷ ಆನ್‍ಲೈನ್ ಕ್ಲಾಸ್ ಮಾಡಿ ಎಲ್ಲರನ್ನು ಪಾಸ್ ಮಾಡಲಿ. ಸಂಪೂರ್ಣ ಕೊರೋನ ಮುಕ್ತವಾದ ನಂತರ ಶಾಲೆಗಳನ್ನು ಆರಂಭಿಸಲಿ. ತರಾತುರಿಯಲ್ಲಿ ಶಾಲೆ ಆರಂಭಿಸುವುದು ಬೇಡ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಿದ ತಕ್ಷಣ ಕಾರ್ಯಕರ್ತರು ಅವರನ್ನು ಸುತ್ತುವರೆದಿದ್ದು ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲರಿಗೂ ಸುರಕ್ಷಿತ ಅಂತರದ ಪಾಠ ಮಾಡಿದರು. ಎಲ್ಲರೂ ದೂರ ಹೋಗಿ. ನನ್ನಿಂದ 6 ಅಡಿ ದೂರ ಇರಿ. ನನ್ನ ಅಕ್ಕ ಪಕ್ಕ ನಿಂತರೂ ನಾನು ಬರಲ್ಲ. ನೀವು ಅಲ್ಲಿ ನಿಂತರೆ ನಾನು ಮಾಧ್ಯಮಗಳಿಗೂ ಮಾತನಾಡಲ್ಲ ಎಂದು ಹೇಳಿ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನನ್ನು ದೂರ ಕಳುಹಿಸಿದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938