ಸಿದ್ದರಾಮಯ್ಯ ‘ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು ಜಾರಿಗೆ ತರಲು ಕಾರಣವೇನೆಂದು ಬಿಚ್ಚಿಟ್ಟ ಎಂಎಲ್’ಸಿ ವಿಶ್ವನಾಥ್?!ಬೆಂಗಳೂರು: ಅರ್ಕಾವತಿ ಕೇಸ್’ನಲ್ಲಿ ಜೈಲಿಗೆ ಹೋಗುತ್ತೇನೆಂದು ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದಿದ್ದರು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಎಂಎಲ್’ಸಿ ವಿಶ್ವನಾಥ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುತ್ತಿದ್ದರು. ಅದಕ್ಕಾಗಿಯೇ ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ತಂದಿದ್ದರು. ಮತ್ತೆ ಅರ್ಕಾವತಿ ಕೇಸ್ ತೆರೆದರೆ ನೀವು ಎಲ್ಲಿರುತ್ತೀರೆಂದು ತಿಳಿಯುತ್ತದೆ ಎಂದು ಕಿಡಿಕಾರಿದರು. ಇದೇ ವೇಳೆ ನನ್ನನ್ನು ಯಾವ ಕಾರಣಕ್ಕೆ ಸೋಲಿಸಿದಿರಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಕಾರಣಕ್ಕೆ ಸೋಲು ಕಂಡೆ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಡೆಮಾಲಿಶ್ ಮಾಡಿಬಿಟ್ಟರು ಎಂದು ವ್ಯಂಗ್ಯವಾಡಿದರು.

ಸದಾ ಬೆನ್ನಿಗೆ ಚೂರಿ ಇರೀತಿದ್ದವರಿಗೆ ಈ ನೋವು ಅರ್ಥವಾಗುತ್ತಿದೆ. ಬೇರೆಯವರ ಬೆನ್ನಿಗೆ ಚೂರಿ ಇರಿದು ಆನಂದ ಪಡುತ್ತಿದ್ದರು. ವಿಘ್ನ ಸಂತೋಷಿಗಳಾಗಿದ್ದವರಿಗೆ ಈಗ ನೋವಾಗುತ್ತಿದೆ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟರು. ನಿಮ್ಮದು ಮಾತ್ರ ರಕ್ತ, ಮಾಂಸ, ಮೂಳೆ. ನಮ್ಮದು ತಗಡು ಅಥವಾ ಮರಾನಾ? ನೀವು ಚೂರಿ ಇರಿಯೂವಾಗ ಅದನ್ನು ಗಮನಿಸಲೂ ಇಲ್ಲ. ನಾವು ಎಂತಹ ನೋವು ಅನುಭವಿಸಿದೆವು ಗೊತ್ತಿದೆಯಾ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಚಾಮುಂಡೇಶ್ವರಿ ಬಿಟ್ಟು ಏಕೆ ಓಡಿ ಹೋದ್ರಿ? ನಿಮಗೆ ಸೋಲಿನ ಸುಳಿವು ತಿಳಿದ ಹಿನ್ನೆಲೆ ಓಡಿ ಹೋಗಿದ್ದೀರಿ. ನಿಮ್ಮ ಜನಪರ ಕಾರ್ಯ ಯೋಜನೆ ಏಕೆ ಕೈಹಿಡಿಯಲಿಲ್ಲ. ನೀವು ಚಾಮುಂಡೇಶ್ವರಿ ಕ್ಷೇತ್ರವನ್ನು ಕಡೆಗಣಿಸಿದ್ದೀರಿ. ನೀವು ಯಾರೋ ಕೆಲವು ಚಮಚಗಳ ಕೈಹಿಡಿದಿರಬಹುದು. ಅದಕ್ಕೆ ನೀವು ಬಾದಾಮಿ ಕ್ಷೇತ್ರದ ಕಡೆ‌ ಮುಖ‌ ಮಾಡಿದಿರಿ. ಯಾವ ಮತದಾರರೂ ನಿಮ್ಮನ್ನು ಸೋಲಿಸಲಿಲ್ಲ ಎಂದರು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/