ಬಾದಾಮಿ ಮುಗಿಯಿತು ಈಗ ಚಾಮರಾಜಪೇಟೆಚುನಾವಣೆ ಅಂದರೆ ಗೆಲುವೊಂದೇ ಮುಖ್ಯ. ಎಲ್ಲಾ ರೀತಿಯ ಪ್ರಭಾವ ಇದ್ದವರು ಮಾತ್ರ ಚುನಾವಣೆಯಲ್ಲಿ ಜಯಿಸುವುದು ಅಷ್ಟೇ ವಾಸ್ತವ. ಕೆಲವೊಮ್ಮೆ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸುವ ಫಲಿತಾಂಶ ಬಂದಿರುವುದಕ್ಕೂ ರಾಜ್ಯ ರಾಜಕೀಯದಲ್ಲಿ ನಿದರ್ಶನವಿದೆ. ಹೀಗಾಗಿ ವಿಧಾನಸಭೆ ಚುನಾವಣೆ ಇನ್ನೂ ಎರಡು ವರ್ಷ ಇರುವಾಗಲೇ ಸುರಕ್ಷಿತ ಕ್ಷೇತ್ರ ಆರಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ ಮುಖ್ಯಮಂತ್ರಿ ಆಗಿದ್ದಾಗಲೇ ತವರುಜಿಲ್ಲೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಅನಿರೀಕ್ಷಿತ ಪರಾಭವ ಅನುಭವಿಸಿದ್ದ ಸಿದ್ದರಾಮಯ್ಯ ಮೊದಲೇ ಸುಳಿವರಿತು ಉತ್ತರ ಕರ್ನಾಟಕದ ಬಾದಾಮಿಯಿಂದ ಕಣಕ್ಕಿಳಿದಿದ್ದ ಕಾರಣಕ್ಕೆ ವಿಧಾನಸಭೆ ಪ್ರವೇಶ ಖಾತರಿಯಾಗಿತ್ತು. ಹಾಗೆಂದು ಬಾದಾಮಿಯಲ್ಲೂ ಶ್ರೀರಾಮುಲು ವಿರುದ್ಧ ದೊಡ್ಡ ಅಂತರದ ಗೆಲುವು ಅದಾಗಿರಲಿಲ್ಲ ಎಂಬುದು ಉಲ್ಲೇಖಾರ್ಹ.

ಬೆಂಗಳೂರಿನ ಚಾಮರಾಜಪೇಟೆ ಈ ಹಿಂದೆ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿದ್ದ ಪ್ರತಿಷ್ಠಿತ ಕ್ಷೇತ್ರ. ಹಾಗೆಂದು ಇದೇನು ಕಾಂಗ್ರೆಸ್ ಭದ್ರಕೋಟೆಯೂ ಅಲ್ಲ. ಅಲ್ಪಸಂಖ್ಯಾತರ ನಿರ್ಣಾಯಕ ಎನ್ನುವುದು ಪ್ಲಸ್‌ ಪಾಯಿಂಟ್. ಹಾಲಿ ಶಾಸಕ ಜಮೀರ್ ಅಹ್ಮದ್ ಕಳೆದ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಒತ್ತಾಯಿಸುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ.

ಪ್ರಾಯೋಜಿತ ಬಹುತೇಕ ಎಲ್ಲ ಸಭೆ, ಸಮಾರಂಭ, ನೆರವು ನೀಡುವ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಮೊದಲ ಅತಿಥಿ, ಶನಿವಾರ ಕ್ಷೇತ್ರದಲ್ಲಿ ಕೊರೋನಾ ಸಂಕಷ್ಟದಲ್ಲಿನ ಜನರಿಗೆ ಆಹಾರ ಕಿಟ್ ವಿತರಿಸುವ ಸಮಾರಂಭದಲ್ಲಿ ನೆರೆದಿದ್ದವರು ಚಾಮರಾಜ ಪೇಟೆ ಯಿಂದಲೇ ಬರುವ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ದೊಡ್ಡ ಧ್ವನಿಯ ಬೇಡಿಕೆ ಇಟ್ಟಿದ್ದು ವಿಶೇಷವಾಗಿತ್ತು. ಸಿದ್ದರಾಮಯ್ಯ ಆಯ್ತು ಎನ್ನುವ ಸಕಾರಾತ್ಮಕ ಮಾತನಾಡಿದ್ದಾರೆ. ಇನ್ನೂ ಸಮಯವಿದೆ ಈಗಲೇ ಸ್ಪರ್ಧೆ ಎಲ್ಲಿಂದ ಎಂಬ ಮಾತೇಕೆ ಎನ್ನುವುದು ಸಿದ್ದರಾಮಯ್ಯ ಅವರ ಮಾತಾದರೂ ಆಂತರ್ಯದಲ್ಲಿ ಕ್ಷೇತ್ರ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದು ಆಪ್ತವಲಯದ ಮಾತು. ಭವಿಷ್ಯದ ಕ್ಷೇತ್ರ ಯಾವುದು ಎಂದರೆ ಚಾಮರಾಜಪೇಟೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಸಧ್ಯದ ವಿದ್ಯಮಾನಗಳನ್ನು ಗಮನಿಸದರೆ ರಾಜಧಾನಿಯತ್ತ ಮಾಜಿ ಸಿಎಂ ಚುನಾವಣಾ ಪಯಣ ಸಾಗುತ್ತಿರುವುದು ಮಾತ್ರ ಅವರೂ ಬಿಡಿ ನೋಡೋಣ ‘ ನಿಜಸಂಗತಿ.