ಎಬಿವಿಪಿ ಕರ್ನಾಟಕ ಹಾಗೂ ಎಸ್.ಎಫ್.ಡಿ. ಸಂಘಟನೆಯಿಂದ ಪರಿಸರ ರಕ್ಷಣೆಗಾಗಿ ಮಹತ್ವದ ನಿರ್ಧಾರಎಬಿವಿಪಿ ಕರ್ನಾಟಕ ಹಾಗೂ ಎಸ್.ಎಫ್.ಡಿ. ಸಂಘಟನೆಯಿಂದ ಪರಿಸರದ ರಕ್ಷಣೆಗಾಗಿ, ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಅಭಿಯಾನ ಹಮ್ಮಿಕೊಂಡಿದ್ದಾರೆ.

ಅಭಿಯಾನದ ಆಯಾಮ-
5-ಜೂನ್
5-ಸಸಿಗಳನ್ನು ನೇಡಬೇಕು
5-ದಿನಗಳ ಅಭಿಯಾನ
5-ಲಕ್ಷ ಸಸಿ ನೆಡುವ ಅಭಿಯಾನ
5- ಸ್ನೇಹಿತರಿಗೆ ಚಾಲೆಂಜ ಮಾಡಬೇಕು.

ಎಬಿವಿಪಿ ಕರ್ನಾಟಕ ಹಾಗೂ ಎಸ್.ಎಫ್.ಡಿ. ವತಿಯಿಂದ #OXYGENCHALLENGE ಅಭಿಯಾನ ಕೈಗೊಳ್ಳಲಾಗಿದೆ. ಈ ಅಭಿಯಾನಕ್ಕೆ ಕೈ ಜೋಡಿಸೋಣ. ಗಿಡ ಬೆಳೆಸಿ ಸಮೃದ್ಧ ಪರಿಸರ ನಿರ್ಮಾಣ ಮಾಡೋಣ. #OxygenChallenge ಅಭಿಯಾನದಲ್ಲಿ ನೀವು ಪಾಲ್ಗೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೂ ಭಾಗವಹಿಸಲು ತಿಳಿಸಿ.

ರಾಜ್ಯದ ಎಲ್ಲ ಭಾಗಗಳಲ್ಲಿ ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಈ 5 ದಿನಗಳಲ್ಲಿ ಭಾಗವಹಿಸಿ ಅಭಿಯಾನವನ್ನು ಯಶ್ವಸಿಗೊಳಿಸಬೇಕು.ಈ ಅಭಿಯಾನದಲ್ಲಿ ಕಾಲೇಜುಗಳು, ಶಿಕ್ಷಣಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನಕ್ಕೆ ಕೈ ಜೋಡಿಸುವುದು.ಸರ್ಕಾರದಿಂದ ಜಾರಿಯಲ್ಲಿರುವ covid-19 ನಿಯಮಾವಳಿಗಳನ್ನು ಪಾಲಿಸಿ (ಮಾಸ್ತ್ರ ಧರಿಸುವುದು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಇತ್ಯಾದಿಗಳೊಂದಿಗೆ) ಅಭಿಯಾನದಲ್ಲಿ ಭಾಗವಹಿಸಿ ನಾವು ನೆಟ್ಟ ಗಿಡವನ್ನು 1 ವರ್ಷ ನಾವೇ ಕಾಪಾಡಬೇಕು ಹಾಗೂ ನೆಟ್ಟ ಗಿಡವನ್ನು ಭಾವ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ #OxygenChallenge & #ABVPForEnvironment Hashtag ಗಳನ್ನು ಬಳಸಬೇಕು.

ಇದನ್ನೂ ಓದಿ :  ಬಿಎಸ್ ವೈ ಮೇಲೆ ಮತ್ತೆ ಅಸಮಾಧಾನದ ಹೊಗೆ