ಯಡಿಯೂರಪ್ಪನವರ ಬಗ್ಗೆ ಈ ಸ್ವಾಮೀಜಿ ಹೇಳಿದ್ದಾದರೇನು? ಸ್ವಾಮೀಜಿಗಳ ಒಲವು ಯಾರ ಪರ?ಸರ್ಕಾರದ ಚುಕ್ಕಾಣಿ ಹಿಡಿದಾಗ ಹೇಗೆ ಆಡಳಿತ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೋರಿಸಿಕೊಟ್ಟಿದ್ದಾರೆ. ಸರ್ವ ಜನಾಂಗ, ಸರ್ವ ಧರ್ಮಗಳ ಶ್ರೇಯೋಭಿವೃದ್ಧಿಗಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಯಡಿಯೂರಪ್ಪ ಶ್ರಮಿಸುತ್ತಿರುವುದುರಿಂದ ಅವರ ಬೆಂಬಲಕ್ಕೆ ಎಲ್ಲರೂ ಇದ್ದಾರೆ ಎಂಬುದು ಗೊತ್ತಾಗಿದೆ. ಸಮಸ್ತ ಸಮುದಾಯದ, ಮಠಗಳ ಆಶೀರ್ವಾದ ಯಡಿಯೂರಪ್ಪ ಆವರ ಮೇಲಿದೆ ಎಂದರು.

ಮ್ಯಾನ್ ಆಟ್‌ದ ಟಾಪ್ ಆಲ್ವೇಸ್ ಲೋನ್ಲಿ, ಯಡಿಯೂರಪ್ಪ ಅವರು ಯಾವಾಗಲೂ ಮೌನಿಯಾಗಿರುತ್ತಾರೆ. ಏಕಾಂಗಿಯಾಗಿರಬೇಕು ಎಂಬ ಕಾರಣಕ್ಕೆ ಒಂಟಿಯಾಗಿರುವುದಿಲ್ಲ, ಆಡಳಿತ ನಡೆಸುವ ವರು ಹೇಗಿರಬೇಕು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ ಎಂದರು. ವಿಧಾನಸೌಧದ ಕೆಂಪೇಗೌಡ ಸಂಸ್ಥೆ ಏರ್ಪಡಿಸಿದ್ದ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಮುಖ್ಯ ಸಮಾರಂಭದಲ್ಲಿ ಮಂತ್ರಿ ಚಾಲನೆ ನೀಡಿದ್ದಾರೆ. ಕೆಂಪೇಗೌಡರ ವಿವಿ ಸ್ಥಾಪನೆಯಾಗಬೇಕು ಎಂಬುದೂ ಬಹು ದಿನಗಳ ಬೇಡಿಕೆ ಯಾಗಿದೆ. ಇದು ಈಡೆರಬೇಕೆಂದರು.