ವೀಡಿಯೋ ನೋಡಿ ; ಗಣೇಶ ಉತ್ಸವದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಡಿದನ್ನು ಕೇಳಿ ಜನ ಫುಲ್ ಫಿದಾ!ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತನ್ನ ಕಂಠಸಿರಿಯಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. 58ನೇ ಬೆಂಗಳೂರು ಗಣೇಶ ಉತ್ಸವದಲ್ಲಿ ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಅವರೊಂದಿಗೆ ಪದ್ಮ ಭೂಷಣ ಡಾ. ರಾಜ್ ಕುಮಾರ್ ಹಾಡಿರುವ ‘ಬಾನಿಗೊಂದು ಎಲ್ಲೆ ಏಲ್ಲಿದೆ’ ಎಂಬ ಗೀತೆಯನ್ನು ಹಾಡುವ ಮೂಲಕ ಪ್ರೇಕ್ಷಕರ ಮನ ರಂಜಿಸಿದ್ದಾರೆ.

ತೇಜಸ್ವಿ ಸೂರ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದು, ಅಣ್ಣಾವ್ರ ಹಾಡಿರುವ ತನ್ನ ನೆಚ್ಚಿನ ಗೀತೆ ಹಾಡಲು ಅವಕಾಶ ಮಾಡಿಕೊಟ್ಟ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ :  'ಯಡಿಯೂರಪ್ಪ ಒಬ್ಬ ನತದೃಷ್ಟ ಮುಖ್ಯಮಂತ್ರಿ'