ರಾಜಕೀಯದಲ್ಲಿ ಭಾರೀ ವಿವಾದಕ್ಕೀಡಾಗಿದೆ ಪಂಚಾಯತ್‌ ರಾಜ್‌ ಸಚಿವ ಸುಬ್ರತಾ ಮುಖರ್ಜಿ ರವರ ಈ ಹೇಳಿಕೆ?!ಕೋಲ್ಕತಾ: ಇದಾಗಲೇ ಬಹುತೇಕ ಕಡೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ, ಇದೀಗ ಪಶ್ಚಿಮ ಬಂಗಾಳದತ್ತ ಕಣ್ಣಿಟ್ಟಿರುವ ಬೆನ್ನಲ್ಲೇ, ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಅರೋಪ ಜೋರಾಗಿದೆ. ಒಂದು ವೇಳೆ ಬಿಜೆಪಿ ಏನಾದರೂ 2021ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೊಲೆ ಮಾಡುತ್ತದೆ. ಈ ಕೃತ್ಯ ಎಸಗಲು ಹೊರಗಿನವರನ್ನು ಕರೆಸುತ್ತದೆ ಎಂದು ಟಿಎಂಸಿ ಹಿರಿಯ ನಾಯಕ, ಪಂಚಾಯತ್‌ ರಾಜ್‌ ಸಚಿವ ಸುಬ್ರತಾ ಮುಖರ್ಜಿ ಹೇಳಿದ್ದಾರೆ. ಮಮತಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಅವರನ್ನು ರಹಸ್ಯವಾಗಿ ಹತ್ಯೆ ಮಾಡಲು ಸಂಚು ರೂಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರಿನ ಮೇಲೆ ಬಿಜೆಪಿಯವರೇ ದಾಳಿ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಬಿಜೆಪಿ ಹೊರಗಿನಿಂದ ಜನರನ್ನು ಕರೆಸಿ ಪಶ್ಚಿಮ ಬಂಗಾಳದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದೆ. ತಾನು ಕೃತ್ಯವೆಸಗಿ ಬೇರೆಯವರ ಮೇಲೆ ಆಪಾದನೆ ಹೊರಿಸಲು ಮುಂದಾಗಿದೆ.

ಅವರ ಈ ನಾಟಕ ಹೆಚ್ಚು ಕಾಲ ಉಳಿಯುವುದಿಲ್ಲ. ಅದಕ್ಕೆ ಪಶ್ಚಿಮ ಬಂಗಾಳದ ಜನರು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳದ ಕೋಟ್ಯಂತರ ಮಂದಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಾಯಿಯಂತೆ ಪೂಜಿಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆ, ಸಮಸ್ಯೆ ಆಗಲು ನಾವು ಬಿಡುವುದಿಲ್ಲ. ಅವರಿಗೆ ಏನಾದರೂ ತೊಂದರೆಯಾದರೆ ಅದನ್ನು ತಡೆಯಲು ನಾವು ರಕ್ತ ಹರಿಸಲೂ ಸಿದ್ಧರಿದ್ದೇವೆ ಸುಬ್ರತಾ ಹೇಳಿದ್ದಾರೆ. ಇವೆಲ್ಲವೂ ಚುನಾವಣೆಯಲ್ಲಿ ಮತಗಿಟ್ಟಿಸಿಕೊಳ್ಳುವ ಗಿಮಿಕ್​ ಎಂದು ಬಿಜೆಪಿ ವ್ಯಂಗ್ಯವಾಡಿದೆ. ವಿನಾಕಾರಣ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಈ ಮೂಲಕ ಮತದಾರರ ಸಹಾನುಭೂತಿ ಪಡೆಯಲು ಯೋಜನೆ ರೂಪಿಸಲಾಗುತ್ತಿದೆ. ಸೋಲುವ ಭೀತಿಯಲ್ಲಿರುವ ಟಿಎಂಸಿ ಬಿಜೆಪಿ ವಿರುದ್ಧ ಈ ರೀತಿ ಹೇಳುತ್ತಿರುವುದು ಹೊಸದೇನಲ್ಲ ಎಂದಿದ್ದಾರೆ ಬಿಜೆಪಿ ನಾಯಕರು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/