ಲವ್ ಜಿಹಾದ್ ವಿರುದ್ಧ ಬಹುದೊಡ್ಡ ನಿರ್ಧಾರದ ಬಳಿಕ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಲು ಮುಂದಾದ ಯೋಗಿ ಸರ್ಕಾರ!ಲಖನೌ: ಮದುವೆಯ ಹೆಸರಿನಲ್ಲಿ ಮತಾಂತರ ಮಾಡುವ ಪ್ರಕ್ರಿಯೆಯ (ಲವ್ ಜಿಹಾದ್) ವಿರುದ್ಧ ಬಹುದೊಡ್ಡ ನಿರ್ಧಾರ ತೆಗೆದುಕೊಂಡು ಕಾನೂನು ಜಾರಿಗೆ ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ವಿವಾಹಕ್ಕೆ ಸಂಬಂಧಿಸಿದಂತೆಯೇ ಇನ್ನೊಂದು ಯೋಜನೆ ಇದಾಗಿದೆ. 44 ವರ್ಷಗಳ ಹಿಂದಿನ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಇದು! 1976ರಲ್ಲಿನ ಈ ಯೋಜನೆಯನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ. 1976ರಲ್ಲಿ ಜಾರಿಗೆ ತಂದ ಯೋಜನೆಯ ಅನ್ವಯ, ಅಂತರ್ಧರ್ಮೀಯ ವಿವಾಹವಾದರೆ 50 ಸಾವಿರ ರೂಪಾಯಿಗಳ ಧನಸಹಾಯ ನೀಡಲಾಗುತ್ತಿತ್ತು. ಉತ್ತರ ಪ್ರದೇಶ ರಾಷ್ಟ್ರೀಯ ಏಕೀಕರಣ ಇಲಾಖೆ ಇದನ್ನು ಶುರು ಮಾಡಿತ್ತು. ಅದನ್ನೀಗ ರದ್ದು ಮಾಡಲು ಯೋಗಿ ಸರ್ಕಾರ ಚಿಂತನೆ ನಡೆಸಿದೆ.

ಬೇರೆ ಬೇರೆ ಧರ್ಮದವರು ವಿವಾಹವಾದರೆ ಮದುವೆಯಾದ ಎರಡು ವರ್ಷಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಅರ್ಜಿ ಸಲ್ಲಿಸುವ ಮೂಲಕ ಸಹಾಯಧನವನ್ನು ಪಡೆಯಲು ಇದರಲ್ಲಿ ಅವಕಾಶ ಇದೆ. ಇಂಥ ದಂಪತಿಗೆ 50ಸಾವಿರ ರೂಪಾಯಿಗಳ ಸಹಾಯಧನ ನೀಡಲಾಗುತ್ತಿದೆ. ಈ ರೀತಿ ಅರ್ಜಿ ಬಂದರೆ ಅದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ರಾಷ್ಟ್ರೀಯ ಏಕೀಕರಣ ಇಲಾಖೆಗೆ ಕಳುಹಿಸುತ್ತಾರೆ. ನಂತರ ದಂಪತಿಗೆ ಸಹಾಯಧನ ನೀಡಲಾಗುತ್ತದೆ. 2017ರಲ್ಲಿ ಯೋಗಿ ಸರ್ಕಾರ ಈ ಯೋಜನೆಗೆ ಒಂದು ಉಪನಿಯಮ ಸೇರಿಸಿತ್ತು. ಅದೇನೆಂದರೆ ಈ ರೀತಿ ಅಂತರ್ಧರ್ಮಿಯರು ಮದುವೆಯಾದರೆ, ಮತಾಂತರಗೊಳ್ಳಲು ಸಾಧ್ಯವಿಲ್ಲ. ಹೀಗಾದರೆ ಮಾತ್ರ ಅಂಥವರಿಗೆ ಹಣ ನೀಡಲಾಗುವುದು ಎಂದು ತಿದ್ದುಪಡಿ ಮಾಡಲಾಗಿದೆ. ಕಳೆದ ವರ್ಷ 11 ದಂಪತಿ ಈ ಸಹಾಯಧನ ಪಡೆದಿದ್ದು, ನಾಲ್ಕು ಅರ್ಜಿಗಳು ಬಾಕಿ ಇವೆ. ಈ ವರ್ಷ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಇದೀಗ ಈ ಯೋಜನೆಯ ರದ್ದತಿಗೆ ಚಿಂತನೆ ನಡೆಸಲಾಗಿದೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/