ವ್ಯಾಪಕ ಆಕ್ರೋಶಕ್ಕೆ ಒಳಗಾಗಿದ್ದ ವೈರಲ್ ವಿಡಿಯೋ ನಿಜವಾದ ಘಟನೆಯೇ ಅಲ್ಲ! ಇಲ್ಲಿದೆ ಅಸಲಿಯತ್ತುಜೊಮ್ಯಾಟೊ ಡೆಲಿವರಿ ಬಾಯ್ ಘಟನೆ ದೇಶಾದ್ಯಂತ ಖಂಡನೆ ಗುರಿಯಾಗಿತ್ತು. ಡೆಲಿವರಿ ಬಾಯ್ ಲೇಟ್ ಬಂದ ಕಾರಣ ಊಟವನ್ನು ಉಚಿತವಾಗಿ ಕೇಳಿದ್ದೂ ಅಲ್ಲದೇ ತನಗೆ ತಾನೇ ಹಲ್ಲೆ ಮಾಡಿಕೊಂಡು ರಂಪಾಟ ಮಾಡಿದ್ದ ಮಹಿಳೆಯ ವಿರುದ್ಧ ಹಲವಾರು ಜನ ಉಗಿದು ಉಪ್ಪಿನಕಾಯಿ ಹಾಕಿದ್ದರು.

ಇದರ ಬೆನ್ನಲ್ಲೇ ಹೆಣ್ಣು ಮಕ್ಕಳು ಮಾಡುವ ಆರೋಪವೆಲ್ಲಾ ನಿಜವಲ್ಲ ಎಂಬ ದೃಷ್ಟಿಯಲ್ಲಿ ಸ್ಕೂಟಿ ಓಡಿಸುವ ಯುವತಿಯ ವಿಡಿಯೋ ಹರಿಬಿಡಲಾಗಿತ್ತು. ಇದರಲ್ಲಿ ಆಕೆ ಯರ್ರಾಬಿರ್ರಿ ಗಾಡಿ ಓಡಿಸಿ ಯುವಕನ ಕೈಗೆ ತಗಲಾಕ್ಕೋತಾಳೆ. ನಂತರ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳುತ್ತಾಳೆ. ಆದರೆ ಈ ವಿಡಿಯೋ ಹಿಂದಿನ ನಿಜವಾದ ಸತ್ಯವೇ ಬೇರೆ ಇದೆ!


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಹೌದು,ವಿಡಿಯೋದಲ್ಲಿರುವ ಯುವತಿಗೆ ವ್ಯಾಪಕ ಟೀಕೆಗಳ ಸುರಿಮಳೆ ಸುರಿದ ಮೇಲೆ ಆಕೆ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋದಲ್ಲಿ ಯುವತಿ ” ನೀವು ನೋಡಿದ್ದ ಈ ವಿಡಿಯೋ ಸಂಪೂರ್ಣ ಸುಳ್ಳು. ಇದು ಒಂದು ಪೂರ್ವ ತಯಾರಿ ಮಾಡಿಕೊಂಡು ನಡೆಸಿದ ವಿಡಿಯೋಶೂಟ್. ನನಗೆ ಒಬ್ಬ ಯೂಟ್ಯೂಬರ್ ಫೇಸ್ಬುಕ್ ಮೆಸೆಂಜರ್ ಮೂಲಕ ಮೆಸೇಜ್ ಮಾಡಿ ಒಂದು ವಿಡಿಯೋ ಶೂಟ್ ಇದೆ ಎಂದು ಹೇಳಿದ್ದ. ಅದರ ಪ್ರಕಾರ ಈ ಎಲ್ಲ ಘಟನೆಗಳು ನಡೆದಿದೆ.” ಎಂದು ಹೇಳಿದ್ದಾಳೆ. ಸಂಪೂರ್ಣ ವಿಡಿಯೋ ಇಲ್ಲಿ ನೋಡಿ