ಅತೀ ದೊಡ್ಡ ಸುಳ್ಳು ಹೇಳಿ ಸಿಕ್ಕಿಬಿದ್ದು ಪೇಚಿಗೆ ಸಿಲುಕಿದ ಕಾಂಗ್ರೆಸ್, ಪ್ಯಾಕ್ಟ್ ಚೆಕ್ ಮೂಲಕ ಬಯಲು!ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಣಾ ತಂಡದ ಉಪಾಧ್ಯಕ್ಷೆ ಪಂಖುಡೀ ಪಾಠಕ್ ಅವರು 2 ಫೋಟೋಗಳನ್ನು ಟ್ವೀಟ್‌ ಮಾಡಿದ್ದರು. ಹೆಲ್ಮೆಟ್‌ ಧರಿಸಿದ್ದ ವ್ಯಕ್ತಿಯೊಬ್ಬ ರಸ್ತೆ ಮಧ್ಯದಲ್ಲಿ ಇರುವ ಗುಂಡಿಗಳನ್ನು ತೋರಿಸುವ ಫೋಟೋ ಅದು. ಈ ದೃಶ್ಯಗಳು ಉತ್ತರ ಪ್ರದೇಶದ ರಸ್ತೆಗಳ ಸ್ಥಿತಿಗತಿ ತೋರಿಸುತ್ತವೆ ಎಂದು ಪಂಖುಡೀ ಬರೆದುಕೊಂಡಿದ್ದರು.

ಪಂಖುಡೀ ಅವರ ಈ ಟ್ವೀಟ್‌ನಲ್ಲಿ ಇದ್ದ ಫೋಟೋಗಳನ್ನೇ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಟ್ವೀಟ್‌ ಮಾಡಿದ್ದರು. ಹಾಗೆ ನೋಡಿದ್ರೆ, ಈ ಚಿತ್ರಗಳು ಉತ್ತರ ಪ್ರದೇಶದಲ್ಲ, ಪಶ್ಚಿಮ ಬಂಗಾಳದ್ದು. ರಸ್ತೆ ಗುಂಡಿ ವಿರೋಧಿ ಹೋರಾಟದ ಅಂಗವಾಗಿ ತೆಗೆದ ಫೋಟೋಗಳು ಅವು.

ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ತಂತ್ರಜ್ಞಾನ ಬಳಸಿ ಹುಡುಕಿದಾಗ aanavandi.com ಎಂಬ ವೆಬ್‌ಸೈಟ್‌ ಲಭ್ಯವಾಯ್ತು. ಈ ವೆಬ್‌ಸೈಟ್‌ನಲ್ಲಿ ಈ ಚಿತ್ರಗಳನ್ನು ಬಳಸಲಾಗಿತ್ತು. ಇದೇ ಚಿತ್ರಗಳನ್ನು ಪಾಠಕ್ ಹಾಗೂ ಕಾಂಗ್ರೆಸ್ ಬೆಂಬಲಿಗರು ಬಳಸಿಕೊಂಡಿದ್ದರು. ಈ ಫೋಟೋಗಳು ಅಕ್ಟೋಬರ್ 14, 2019ರಲ್ಲಿ ಪ್ರಕಟವಾಗಿದ್ದವು. ಪಶ್ಚಿಮ ಬಂಗಾಳದ ಕೆಟ್ಟ ರಸ್ತೆಗಳ ವಿರುದ್ಧ ವಾಹನ ಸವಾರರು ನಡೆಸಿದ ಅಭಿಯಾನದ ಪೋಸ್ಟರ್‌ಗೆ ತೆಗೆದ ಫೋಟೋ ಇದಾಗಿತ್ತು.

ಈ ಫೋಟೋಗಳನ್ನು ತೆಗೆದಿರುವ ಸ್ಥಳದಲ್ಲಿ ಮಮತಾ ಬ್ಯಾನರ್ಜಿ ಅವರ ಬ್ಯಾನರ್, ಬಂಗಾಳಿ ಭಾಷೆಯ ಬೋರ್ಡ್‌ಗಳು ಸೇರಿದಂತೆ ಹಲವು ಸಾಕ್ಷ್ಯಗಳು ಇವೆ. ಇವೆಲ್ಲವೂ ಈ ಚಿತ್ರ ತೆಗೆದದ್ದು ಪಶ್ಚಿಮ ಬಂಗಾಳದಲ್ಲಿ ಎಂದು ಸಾರಿ ಹೇಳುತ್ತಿವೆ. ಇವು ಉತ್ತರ ಪ್ರದೇಶದ ದೃಶ್ಯಗಳಲ್ಲ ಅನ್ನೋದಕ್ಕೆ ಇವುಗಳೇ ಸಾಕ್ಷಿಯಾಗಿವೆ. ಟೈಮ್ಸ್‌ ಫ್ಯಾಕ್ಟ್‌ ಚೆಕ್‌ನ ಸಮಗ್ರ ಅಧ್ಯಯನದ ಬಳಿಕ ಹೇಳೋದಾದ್ರೆ, ಪಶ್ಚಿಮ ಬಂಗಾಳ ರಾಜ್ಯದ ಕಳಪೆ ರಸ್ತೆಗಳ ಫೋಟೋಗಳನ್ನು ಉತ್ತರ ಪ್ರದೇಶದ ರಸ್ತೆಗಳ ದುಸ್ಥಿತಿ ಎಂದು ತಪ್ಪಾಗಿ ಕಾಂಗ್ರೆಸ್ ಪಕ್ಷ ಬಿಂಬಿಸಿತ್ತು. ಕೃಪೆ : ವಿಕ