ಎಚ್ಚರ; ಈ ಸುಳ್ಳು ಸುದ್ದಿ ನೀವೂ ಶೇರ್ ಮಾಡಿದ್ದರೆ ಇದನ್ನೊಮ್ಮೆ ಓದಿದೇಶದ ಯಾವುದಾದರೂ ಮೂಲೆಯಲ್ಲಿ ಮತಾಂಧರು ದೊಂಬಿ, ಹಿಂಸಾಚಾರ ಮಾಡಿದಾಗ ಜನಸಾಮಾನ್ಯರ ಗಮನವನ್ನ ಬೇರೆಡೆಗೆ ಸೆಳೆಯಲು ಇದ್ದಕ್ಕಿದ್ದಂತೆ ಇಂತಹ ಕರುಳು ಕಿತ್ತುಬರುವ ಕರುಣಾಜನಕ ಕಥೆಗಳು ಹುಟ್ಟಿಕೊಳ್ಳುತ್ತವೆ. ಮತ್ತು ಇದನ್ನ ಹುಟ್ಟು ಹಾಕುವವರು ಅವರೇ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲಾ! ವಿಪರ್ಯಾಸವೆಂದರೆ ಇಂತಹ ಸುಳ್ಳು ಸುದ್ದಿಗಳನ್ನು ಹೆಚ್ಚಾಗಿ ನಮ್ಮ ಜನಗಳು ಸತ್ಯವೆಂದು ನಂಬಿ ಹಂಚುತ್ತಾರೆ.

ಈ ಸುಳ್ಳು ಸುದ್ದಿಯ ಹಿಂದಿನ ರಿಯಲ್ ಸ್ಟೋರಿ ಇಲ್ಲಿದೆ ಓದಿ ;

ಈ ಬಾಬಾ ಬಾಯ್ ಪಠಾಣ್ ಸಮಾಜಸೇವಕನಲ್ಲಾ, ಮತ್ತೆ ಆ ಹುಡುಗಿಯರು ಅನಾಥೆಯರಲ್ಲಾ, ಆ ಹುಡುಗಿಯರ ತಾಯಿ ಇನ್ನೂ ಜೀವಂತವಾಗಿ ಇದ್ದಾಳೆ, ಆಕೆಗೆ ಒಡಹುಟ್ಟಿದ ಅಣ್ಣತಮ್ಮಂದಿರು ಇರದ ಕಾರಣ ಪ್ರತೀವರ್ಷ ಪಠಾಣ್ ನಿಗೆ ರಾಖಿ ಕಟ್ಟುತ್ತಿದ್ದಳು, ಆ ಪರಿಚಯದಿಂದಲೇ ಆತ ಮದುವೆಯಲ್ಲಿ ಪಾಲ್ಗೊಂಡಿದ್ದ ಆದರೆ ಮದುವೆಯಲ್ಲೂ ಇವನದೇನೂ ಪಾತ್ರವಿಲ್ಲಾ ಏಕೆಂದರೆ ಮದುವೆಯನ್ನು ಆಯೋಜಿಸಿದ್ದು ಆ ಯುವತಿಯರ ತಾಯಿಯೇ.

ವಾಸ್ತವ ಹೀಗಿರುವಾಗ ಬೆಂಗಳೂರಿನ ಡಿಜೆ & ಕೆಜೆ ಹಳ್ಳಿಯಲ್ಲಿ ಮತಾಂಧರು ನಡೆಸಿದ ಹಿಂಸಾಚಾರವನ್ನ ಮರೆಮಾಚಲು ಒಂದು ನೆಪ ಬೇಕಿತ್ತು ಅದಕ್ಕೇ ಈ ಕಥೆಗೆ ಉಪ್ಪು ಖಾರ ಸೇರಿಸಿ ಜನರಿಗೆ ಮನಸ್ಸಿಗೆ ಮುಟ್ಟುವಹಾಗೆ ಬರೆದು ಹಂಚಿದ್ದಾರೆ ಹಂಚಿದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ. ಸುದ್ದಿ ಶೇರ್ ಮಾಡುವ ಮುನ್ನ ಎಚ್ಚರಿಕೆಯಿಂದಿರಿ

ಮಾಹಿತಿ ಕೃಪೆ: Opindia.com