ಬಿಜೆಪಿ ಗೆದ್ದರೆ ಹೆಸರು ಬದಲಾಯಿಸಿ, ಹಿಂದೂಧರ್ಮಕ್ಕೆ ಮತಾಂತರಗೊಳ್ಳುವೆ! ; ಅಸಾದುದ್ದೀನ್ ಓವೈಸಿಯ ಈ ಹೇಳಿಕೆ ಎಷ್ಟು ನಿಜ?!ಬೆಂಗಳೂರು: ‘ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಚುನಾವಣೇಲಿ ಬಿಜೆಪಿ ಗೆದ್ರೆ ಹಿಂದು ಧರ್ಮಕ್ಕೆ ಮತಾಂತರಗೊಳ್ಳುವೆ. ನನ್ನ ಹೆಸರನ್ನು ಭಾಗ್ಯರಾಜ ತ್ರಿಪಾಠಿ ಅಂತ ಬದಲಾಯಿಸಿಕೊಳ್ತೇನೆ’. – ಹೀಗಂತ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚುನಾವಣಾ ಫಲಿತಾಂಶ ಬಂದಿದೆ. ಬಿಜೆಪಿ ಎರಡನೇ ಸ್ಥಾನಕ್ಕೇರಿ ಭರ್ಜರಿ ಎಂಟ್ರಿ ಕೊಟ್ಟಿದೆ. ಈಗ ಓವೈಸಿ ಮತಾಂತರದ ಹೇಳಿಕೆ ಮುನ್ನೆಲೆಬಂದಿದೆ. ವಾಸ್ತವದಲ್ಲಿ ಆಗಿದ್ದೇನು? ನಿಜಕ್ಕೂ ಓವೈಸಿ ಅಂಥದ್ದೊಂದು ಹೇಳಿಕೆ ಕೊಟ್ಟಿದ್ರಾ? ಈ ಸಂಬಂಧ ಗೂಗಲ್ನಲ್ಲಿ ಸರ್ಚ್ ಮಾಡಿದಾಗ ಅವರ ಹೇಳಿಕೆ ಎಂದು ಬಿಂಬಿಸಲ್ಪಟ್ಟ ಪೋಸ್ಟ್ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಗೋಚರಿಸಿದ್ದವು.

ಆ ಪೋಸ್ಟ್ಗಳಿಗೆ ಬಹಳಷ್ಟು ಜನ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. The UnPaid Times ಎನ್ನುವ ಟ್ವಿಟರ್ ಖಾತೆಯಲ್ಲಿ ಇದು ಮೊದಲು ಗೋಚರಿಸಿತ್ತು. ಈ ಟ್ವಿಟರ್ ಖಾತೆಯು ವಿಡಂಬನಾತ್ಮ ಸುದ್ದಿ ನೀಡಿವ ವೆಬ್ತಾಣಕ್ಕೆ ಸೇರಿದ್ದಾಗಿದೆ. ಅವರು ಇಂಥದ್ದೊಂದು ಸುದ್ದಿ ಮಾಡಿ ಓವೈಸಿಯ ನಡವಳಿಕೆಯನ್ನು ವಿಡಂಬಿಸಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳದ ಜನರು ಅದು ನಿಜವಾಗಿಯೂ ಓವೈಸಿ ನೀಡಿದ ಹೇಳಿಕೆಯೆಂದೇ ಭಾವಿಸಿ ಪ್ರತಿಕ್ರಿಯಿಸಿದ ಪರಿಣಾಮ ಇದು. ಎಐಎಂಐಎಂ ಪಕ್ಷದ ವಕ್ತಾರ ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಓವೈಸಿ ಅಂಥ ಹೇಳಿಕೆ ನೀಡಿಯೇ ಇಲ್ಲ ಎಂದಿರುವ ವರದಿಯೂ ಪ್ರಕಟವಾಗಿದೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/