ಅಂದು ಪಟಾಕಿ ಹಚ್ಚಬೇಡಿ ಎಂದು ಹೇಳಿ ಈಗ ತಗಲಾಕ್ಕೊಂಡ ಜಸ್ಪ್ರೀತ್ ಬುಮ್ರಾ!?ಪಟಾಕಿಗೂ ಹಾಗೂ ಭಾರತದ ಕೆಲವು ಸೆಲೆಬ್ರಿಟಿಗಳಿಗೂ ಬಹಳ ನಂಟಿದ್ದ ಹಾಗೇ ಕಾಣುತ್ತದೆ. ದೀಪಾವಳಿ ಬಂತೆಂದರೆ ಸಾಕು ಕೆಲವು ಸೆಲೆಬ್ರಿಟಿಗಳು ಪಟಾಕಿ ಹೊಡೆಯದೇ ದೀಪಾವಳಿ ಆಚರಿಸಿ ಎಂದು ಜಾಲತಾಣದಲ್ಲಿ ಪೋಸ್ಟ್ ಹಾಕ್ತಾರೆ. ತಮ್ಮದೇ ಮನೆಯ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸಿರುತ್ತಾರೆ.

ಇದೀಗ ಇಂತಹ ಡಬಲ್ ಸ್ಟಾಂಡರ್ಡ್ ಮುಖ ಕಳಚಿಕೊಂಡಿದ್ದು ಜಸ್ಪ್ರೀತ್ ಬುಮ್ರಾ ಅವರದ್ದು. ಇತ್ತೀಚೆಗೆ ತಮ್ಮ ಜಾಲತಾಣ ಖಾತೆಯಲ್ಲಿ ತಮ್ಮ ಬಾಳ ಸಂಗಾತಿಯಾಗುವವರ ಜೊತೆಗಿದ್ದ ಫೋಟೋ ಶೇರ್ ಮಾಡಿದ್ದರು. ಇದರ ಹಿಂದಿಯಲ್ಲಿ ನಕ್ಷತ್ರ ಕಡ್ಡಿ ಆಡು ಭಾಷೆಯಲ್ಲಿ ಸುರ್ ಸುರ್ ಬತ್ತಿ ಮತ್ತು ಪಟಾಕಿಗಳ ಪ್ರಯೋಗವಾಗಿತ್ತು. ಇದನ್ನು ನೋಡಿದ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರು ದೀಪಾವಳಿ ಸಮಯದಲ್ಲಿ ಪಟಾಕಿ ರಹಿತ ದೀಪಾವಳಿ ಎಂದು ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು. ಈಗ ಅವರ ಮದುವೆ ಸಮಯದಲ್ಲಿ ತೆಗೆದ ಈ ಫೋಟೋದಲ್ಲಿ ಪಟಾಕಿಗಳ ಪ್ರಯೋಗ ಮಾಡಿದ್ದರು. ಇದನ್ನು ನೋಡಿದ ನೆಟ್ಟಿಗರು ಬುಮ್ರಾ ಅವರ ಈ ದ್ವಿಮುಖ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.