ಅಪ್ಪ ಮಕ್ಕಳ ಸಿಡಿ ಸಹ ರಿಲೀಸ್!? ರಾಜಕೀಯದಲ್ಲಿ ಮತ್ತೆ ಭೂಕಂಪ!ಅಪ್ಪಮಕ್ಕಳ ಸಿಡಿ ಸಹ ಕೆಲವರ ಬಳಿಯಿದ್ದು, ಆ ಸಿಡಿಗಳನ್ನು ಸಹ ಇಷ್ಟರಲ್ಲಿಯೇ ಬಿಡುಗಡೆ ಮಾಡುತ್ತಾರೆ. ಸಿಡಿ ಇಟ್ಟುಕೊಂಡೇ ಬ್ಲ್ಯಾಕ್ಮೇಲ್ ಮಾಡುವ ಎರಡು ಪಕ್ಷಗಳ ಕೆಲ ರಾಜಕೀಯ ನಾಯಕರು ನಮ್ಮ ರಾಜದಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾನು ಬೇರೆ ಸಿಡಿಗಳು ನನ್ನ ಬಳಿ ಇವೆ ಎಂದಿದ್ದೆ. ಆದರೆ ಬಿಡುಗಡೆಯಾಗಿದ್ದೇ ಬೇರೆ ಸಿಡಿ. ಇನ್ನೂ ಉಳಿದ ಸಿಡಿಗಳು ಸಹ ಸದ್ಯದಲ್ಲಿಯೇ ಬರುತ್ತವೆ. ರಮೇಶ್ ಜಾರಕಿಹೊಳಿಯವರ ಸಿಡಿ ಇವರು ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಸುಮ್ಮನಿರುವುದಿಲ್ಲ. ರಮೇಶ್ ಜಾರಕಿಹೊಳಿ ಬಳಿ ಸಹ ಕೆಲ ಸಿಡಿಗಳು ಇರುಬಹುದು. ಇನ್ನೂ 23 ಸಿಡಿಗಳು ಇವೆಯೆಂಬ ಮಾಹಿತಿಯಿದ್ದು, ಒಂದೊಂದೇ ಸಿಡಿಗಳು ಬಿಡುಗಡೆಯಾಗುತ್ತವೆ. ಯಾವುದು ಉಳಿಯುವುದಿಲ್ಲ. ನಾನು ಸತ್ಯದರ್ಶನ ಬಿಡುಗಡೆ ಎಂದು ಹೇಳಿಕೆ ನೀಡಿದ್ದೆ. ಅದರಂತೆ ಎಲ್ಲವೂ ಬಿಡುಗಡೆ ಆಗುತ್ತವೆ. ಸತ್ಯ ಎಂದಾದರೂ ಹೊರಗೆ ಬರಲೇಬೇಕು. ನನ್ನ ಬಳಿ ಯಾವ ಸಿಡಿಗಳೂ ಇಲ್ಲ ಎಂದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ವಿಧಾನಸಭೆಯಲ್ಲಿ ಮೀಸಲಾತಿ ಕುರಿತು ಚರ್ಚೆಗೆ ಸ್ಪೀಕರ್ ನನಗೂ ಚರ್ಚೆಗೆ ಅವಕಾಶ ನೀಡಿದ್ದರು. ಮೀಸಲಾತಿ ಹೋರಾಟ ಕುರಿತು ಸಿಎಂ ನಿನ್ನೆ ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದರಾದರೂ ಇಂದು ಮೀಸಲಾತಿ ಕುರಿತ ಚರ್ಚೆಯಲ್ಲಿ ಮಾತ್ರ ಸಿಎಂ ಭಾಗವಹಿಸದೇ ಕಾನೂನು ಸಚಿವ ಬೊಮ್ಮಾಯಿ ಮೂಲಕ ಸದನದಲ್ಲಿ ಮೀಸಲಾತಿ ಕುರಿತ ಪ್ರಶ್ನೆಗೆ ಉತ್ತರ ಕೊಡಿಸಿರುವುದು ಅಸಮಾಧಾನ ತಂದಿದೆ ಎಂದರು.