ಈ ಹದಿಹರೆಯದ ಸುಂದರ ನಟಿ ಡೇಟ್ ಮಾಡುತ್ತಿರೋದು ಎಷ್ಟು ವರ್ಷದವರನ್ನ ಅಂತ ಗೊತ್ತಾದ್ರೆ ತಲೆ ತಿರುಗುತ್ತೆ!ಸಿನಿಮಾ ರಂಗದಲ್ಲಿ ಎಲ್ಲವೂ ಸಾಧ್ಯ.. ಯಾರು ಯಾರನ್ನ ಬೇಕಿದ್ರೂ ಪ್ರೀತಿಸುತ್ತಾರೆ. ಮದುವೆಯಾಗುತ್ತಾರೆ. ದಕ್ಷಿಣ ಭಾರತದ ತುಂಬಾ ಫೇಮಸ್ ಹಾಗೂ ಯಂಗ್ ನಟಿ ಅನು ಇಮ್ಯಾನ್ಯುಯೆಲ್ ಲವ್ ಸ್ಟೋರಿ ಇದು.ಅನು ಇಮ್ಯಾನ್ಯುಯೆಲ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಅವರ ಮನಮೋಹಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅನು ಇಮ್ಯಾನ್ಯುಯೆಲ್ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಯುವ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. 23 ವರ್ಷದ ಅನು ಇಮ್ಯಾನ್ಯುಯೆಲ್ ಗೆ 40 ವರ್ಷದ ನಿರ್ದೇಶಕನ ಮೇಲೆ ಲವ್ವಿಡವ್ವಿ ಶುರುವಾಗಿದೆ ಎಂಬ ಗಾಸಿಪ್‌ ನ್ಯೂಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನಿರ್ದೇಶಕ ಜ್ಯೋತಿ ಕೃಷ್ಣ ಅವರ ಮೇಲೆ ಅನು ಇಮ್ಯಾನ್ಯುಯೆಲ್ ಪ್ರೇಮಾಂಕುರವಾಗಿದ್ದು, ಇಬ್ಬರು ಮದುವೆಯಾಗುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ನಡುವೆ 17 ವರ್ಷದ ವ್ಯತ್ಯಾಸವಿದೆ. ಆದರೆ ಹೀಗೆ 10-20 ವರ್ಷಗಳ ಅಂತರದ ಸಾಕಷ್ಟು ನಟ ನಟಿಯರು, ನಿರ್ದೇಶಕ, ನಿರ್ಮಾಪಕರನ್ನು ಮದುವೆಯಾಗಿದ್ದಾರಲ್ಲಾ ಎಂಬ ಪ್ರಶ್ನೆ ಕೂಡ ನೆಟ್ಟಿಗರಿಂದ ಹೊರಬಿದ್ದಿದೆ.

ಅನು ಅವರು ಮಲಯಾಳಂ ಚಿತ್ರದಲ್ಲಿ ಸಾಕಷ್ಟು ಫೇಮಸ್ ಆಗಿದ್ದವರು. ಕೇವಲ ಮಲಯಾಳಂ ಚಿತ್ರ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರದಲ್ಲೂ ಕೂಡ ನಟಿಸಿದ್ದಾರೆ. ಈ ನಟಿ 2011ರಲ್ಲಿ ಬಾಲ ನಟಿಯಾಗಿ ನಟಿಸಿದ್ದರು. 11 ಚಿತ್ರಗಳಲ್ಲಿ ನಟಿಸಿರುವ ಈ ನಟಿಯ ಮಹಾ ಸಮುದ್ರಂ ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ.