ತೆಲುಗು ಚಿತ್ರ ರಂಗದ ಖ್ಯಾತ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ಕಾಜಲ್ ಅಗರವಾಲ್ ರವರು ಇತ್ತೀಚೆಗೆ ಕಳೆದ ಕೆಲವು ತಿಂಗಳುಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಉದ್ಯಮಿ ಹಾಗೂ ಹಲವಾರು ವರ್ಷಗಳ ಗೆಳೆಯ ಗೌತಮ್ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕಾಜಲ್ ಅಗರ್ವಾಲ್ ರವರು ಮಾಲ್ಡೀವ್ಸ್ ಗೆ ಹನಿಮೂನ್ ಗಾಗಿ ಕೂಡ ತೆರಳಿದ್ದರು, ಈ ಸುದ್ದಿ ಎಲ್ಲೆಡೆ ಪ್ರಸಾರವಾಗಿತ್ತು.
ಮಾಲ್ಡೀವ್ಸ್ ಗೆ ಹೋದಾಗ ಸಾಕಷ್ಟು ಕಡೆ ವಿವಿಧ ರೀತಿಯಲ್ಲಿ ಫೋಟೋ ಗಳನ್ನು ತೆಗೆಸಿ ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಅಪ್ಲೋಡ್ ಮಾಡುತ್ತಾ, ಮಾಲ್ಡಿವ್ಸ್ ಪ್ರವಾಸದ ಸಂಪೂರ್ಣ ವಿವರಗಳನ್ನು ನೀಡುತ್ತಿದ್ದ ಕಾಲಾಳ್ ಅಗರ್ವಾಲ್ ರವರು ಅಂಡರ್ ವಾಟರ್ ರೂಮ್ನಲ್ಲಿ ಯು ಕೂಡ ಪತಿ ಗೌತಮ್ ರವರ ಜೊತೆ ಫೋಟೋ ತೆಗೆದು ಕೊಂಡು ಪ್ರವಾಸದ ವಿವರಗಳನ್ನು ಕಾಲಕಾಲಕ್ಕೆ ಶೇರ್ ಮಾಡುತ್ತಿದ್ದರು.
ಇವರು ಹೋಗಿದ್ದ ಪ್ರತಿಯೊಂದು ಸ್ಥಳಗಳು ಹಾಗೂ ಮಾಡಿದ ಅಡ್ವೆಂಚರ್ ಗಳು ನಿಜಕ್ಕೂ ಅದ್ಭುತವಾಗಿತ್ತು, ಹೀಗೆ ವಿವಿಧ ರೀತಿಯ ಐಷಾರಾಮಿ ಹೋಟೆಲ್ ಗಳಲ್ಲಿ ಹಾಗೂ ಸ್ಥಳಗಳಲ್ಲಿ ಕಾಲ ಕಳೆದ ನವ ದಂಪತಿಗಳು ಕೇವಲ ತಮ್ಮ ಹನಿಮೂನ್ ಗಾಗಿ 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಆಂಧ್ರ ಪ್ರದೇಶದ ಖ್ಯಾತ ಟ್ರಾವಲಿಂಗ್ ಸಂಸ್ಥೆಯೊಂದು ಟ್ರಿಪ್ಪಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿತ್ತು, ಈ ಸಂಸ್ಥೆ ಇದೀಗ 5 ಕೋಟಿ ರೂಪಾಯಿ ಬಿಲ್ ನೀಡಿದೆ ಎನ್ನಲಾಗಿದೆ.