ತಮ್ಮ ಹೊಸ ಕಾರಿಗೆ ಸಗಣಿ ಬಳಿದುಕೊಂಡೇ ಓಡಾಡುವ ಮಹಿಳೆ! ಸಗಣಿ ಬಳಿದಿದ್ದು ಯಾಕೆ ಗೊತ್ತಾ?ಸಾಮಾನ್ಯವಾಗಿ ಎಲ್ಲರು ಸಹ ಹೊಸ ಬೈಕ್ ಮತ್ತು ಕಾರುಗಳಿಗೆ ಸ್ಟಿಕರ್ ಡಿಸೈನ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರಿಗೆ ಸಗಣಿ ಅಲಂಕಾರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ಈ ಮಹಿಳೆ ಕಾರಿಗೆ ಸಗಣಿಯಿಂದ ಮಾಡಿರುವ ಅಲಂಕಾರ ಪೋಟೋಗಳು ಈಗ ಎಲ್ಲಾ ಕಡೆ ಬಹಳ ವೈರಲ್ ಆಗಿದೆ..

ಇನ್ನೂ ಈ ಮಹಿಳೆ ಕಾರಿಗೆ ಯಾಕೆ ಸಗಣಿಯಿಂದ ಅಲಂಕಾರ ಮಾಡಿದ್ದಾರೆ ಇದರ ಹಿಂದಿರುವ ಕಾರಣವೇನು ಎಂಬುದನ್ನು ತಿಳಿಯೋಣ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಿಸಿಲಿನ ತಾಪ ಇರುತ್ತದೆ.. ಈಗಾಗಿ ಪ್ರಯಾಣಿಕರು ಕಾರಿನಲ್ಲಿ ಏಸಿಯನ್ನು ಹಾಕಿಕೊಂಡು ಪ್ರಯಾಣ ಮಾಡುತ್ತಾರೆ.‌. ಅಥವಾ ಮನೆಯ ಹತ್ತಿರ ಕಾರನ್ನು ನಿಲ್ಲಿಸುವಾಗ ನೆರಳಿ‌ನಲ್ಲಿ ನಿಲ್ಲಿಸುತ್ತಾರೆ. ಇನ್ನೂ ಕಾರಿಗೆ ಸಗಣಿ ಬಳಿದಿರುವ ಮಹಿಳೆ ಶಾಜಿಲ್ ಶಾಹಿ ಮೂಲತಃ ಅಹಮದಾಬಾದ್ ನವರು.. ಇವರು ತಮ್ಮ ಕಾರಿಗೆ ಸಂಪೂರ್ಣವಾಗಿ ಸಗಣಿಯನ್ನು ಬಳೆದು ಅಲಂಕಾರ ಮಾಡಿ. ಎಲ್ಲರು ಒಮ್ಮೆ ಇವರ ಕಾರನ್ನು ತಿರುಗಿ ನೋಡುವಂತೆ ಮಾಡಿದ್ದಾರೆ.

ಈ ಮಹಿಳೆ ಸಗಣಿಯಲ್ಲೇ ಏಕೆ ಅಲಂಕಾರ ಮಾಡಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇದೇ ನೋಡಿ. ಬಿಸಿಲಿನ ತಾಪ ಹೆಚ್ಚಾದ ಕಾರಣ ಕಾರಿಗೆ ಸಗಣಿಯನ್ನು ಬಳೆದಿದ್ದೇನೆ ಎಂದು ಆ ಮಹಿಳೆಯ ಮಾತಾಗಿದೆ.. ಕಾರಿಗೆ ಸಗಣಿ ಬಳೆಯುವುದರಿಂದ ಕಾರಿ‌ನ ತಾಪಮಾನವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದಿದ್ದಾರೆ. ಬೇಸಿಗೆಯಲ್ಲಿ ಕಾರು ತಂಪಾಗಿದ್ದರೆ.. ಚಳಿಗಾಲದಲ್ಲಿ ಕಾರಿನ ತಾಪಮಾನ ಹೆಚ್ಚಾಗಿರುತ್ತದೆ ಅನ್ನುವುದು ಶಾಜಿಲ್ ಶಾಹಿ ಅವರ ನಂಬಿಕೆ‌.. ಇನ್ನೂ ಈ ರೀತಿ ಮಾಡುವುದರಿಂದ ಕಾರಿನ ನಿಜವಾದ ಬಣ್ಣಕ್ಕೆ ಹಾನಿಯಾಗುವುದಿಲ್ಲ, ಗೆರೆಗಳು ಬೀಳುವುದಿಲ್ಲ ಎಂದಿದ್ದಾರೆ.

ಇನ್ನೊಂದು ಅಚ್ಚರಿ ಸಂಗತಿ ಏನೆಂದರೆ ಶಾಜಿಲ್ ಶಾಹಿ ಅವರು ಕಾರನ್ನು ಖರೀದಿ ಮಾಡಿದ ದಿನದಿಂದ, ಇದುವರೆಗೂ ಒಂದು ದಿನವೂ ಕೂಡ ಏಸಿ ಆನ್ ಮಾಡಿಲ್ಲ ಎಂದು ಹೇಳಿದ್ದಾರೆ. ಅಹಮದಾಬಾದ್ ನಲ್ಲಿ ಬೇಸಿಗೆಯಲ್ಲಿ ಹೆಚ್ಚಾದ ತಾಪಮಾನ ಇದ್ದು ಹಲವು ಪ್ರಯಾಣಿಕರು ಕಾರಿನಲ್ಲಿ ಏಸಿ ಹಾಕಿಕೊಂಡು ಪ್ರಯಾಣಿಸುತ್ತಾರೆ.. ಆರೋಗ್ಯ ದೃಷ್ಟಿಯಿಂದ ನೋಡಿದರೆ ಏಸಿ ಒಳ್ಳೆಯದಲ್ಲ. ಈ ಕಾರಣಕ್ಕೆ ನಾನು ಸಗಣಿಯ ಉಪಾಯ ಕಂಡು ಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ..