ದಿನೇಶ್ ಕಲ್ಲಹಳ್ಳಿ ಮುಂದಿನ ಟಾರ್ಗೆಟ್ ಕುಮಾರಸ್ವಾಮಿ! ದಿನೇಶ್ ಹೇಳಿದ್ದಿಷ್ಟು!ರಾಮನಗರ: ಕುಮಾರಸ್ವಾಮಿ ಅವರ ಹೇಳಿಕೆಯಿಂದ ನಾನು ಈ ಪ್ರಕರಣದಿಂದ ಹಿಂದೆ ಸರಿಯಬೇಕಾಗಿದೆ. ಕುಮಾರಸ್ವಾಮಿ ಅವರ ಆರೋಪದ ವಿರುದ್ಧ ನಾನು ಈಗ ಹೋರಾಟ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಕಾನೂನು ಹೋರಾಟ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೋ ಕೂತುಕೊಂಡು ಕುಮಾರಸ್ವಾಮಿ ಅವರು ಈ ರೀತಿ ಆರೋಪ ಮಾಡಬಾರದು. ಅವರ ಬಳಿ ಆಧಾರ ಇದ್ದರೆ ಪೊಲೀಸರ ಮುಂದೆಯೋ ಮಾಧ್ಯದ ಮುಂದೆಯೇ ನೀಡಬೇಕು. ಇದನ್ನು ಬಿಟ್ಟು ಹಿಟ್ ಅಂಡ್ ರನ್ ಮಾಡಬಾರದು ಎಂದು ತಿಳಿಸಿದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ನಾನು ಸಿಡಿ ಪ್ರಕರಣದಲ್ಲಿ ನೀಡಿರುವ ಹೇಳಿಕೆ ಹಾಗೂ ಮಾಹಿತಿ ಎಲ್ಲವೂ ಸತ್ಯವಾಗಿದೆ. ನನ್ನ ಹೇಳಿಕೆಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಮೊದಲು ನಾನು ಶುದ್ಧನಿದ್ದೇನೆ ಎಂದು ಸಾಬೀತು ಪಡಿಸಬೇಕು. ನಂತರ ಸಿಡಿ ವಿಚಾರವಾಗಿ ಹೋರಾಟ ಮಾಡಬೇಕು. ಹೀಗಾಗಿ ನಾನು ಕೇಸ್‍ನ್ನು ಹಿಂಪಡೆಯುತ್ತಿದ್ದೇನೆ. ತನಿಖಾ ಅಧಿಕಾರಿಗಳು ನಾನು ಬಂದು ದೂರು ವಾಪಸ್ ಪಡೆಯಬೇಕು ಎಂದರೆ ನಾನು ಹೋಗುತ್ತೇನೆ. ನಾನು ಯಾರ ಬೆದರಿಕೆಗೂ ಹಾಗೂ ಆಮಿಷಕ್ಕೂ ಒಳಗಾಗಿಲ್ಲ. ನನ್ನ ಹೋರಾಟ ನಿರಂತವಾಗಿ ಇರುತ್ತದೆ ಎಂದು ದಿನೇಶ್ ಹೇಳಿದರು.