ಪತ್ರಕರ್ತ ಚಿರಂಜೀವಿ ಭಟ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಪುಂಡ ಅಭಿಮಾನಿಗಳು, ಆಡಿಯೋ ವೈರಲ್!



ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಪೊಗರು ಚಿತ್ರ ವಿವಾದಕ್ಕೆ ಗುರಿಯಾಗಿದೆ. ಚಿತ್ರದಲ್ಲಿ ಬ್ರಾಹ್ಮಣ ಸಮಾಜದ ಭಾವನೆಗಳಿಗೆ ಧಕ್ಕೆ ಬರುವ ಸನ್ನಿವೇಶ ಚಿತ್ರಿಸಲಾಗಿತ್ತು.

ಪೊಗರು ಚಿತ್ರದ ಈ ದೃಶ್ಯವನ್ನು ತೆಗದು ನಿರ್ದೇಶಕರು ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕು ಎಂದು ಬ್ರಾಹ್ಮಣ ಸಂಘಟನೆಗಳು ಎಚ್ಚರಿಕೆ ಮತ್ತು ಹೋರಾಟ ಮಾಡಿದ್ದವು. ಹಾಗೂ ಚಿತ್ರದ ನಿರ್ದೇಶಕರಾದ ನಂದಕಿಶೋರ್ ಅವರು ಕ್ಷಮೆ ಕೇಳಿದ್ದಾರೆ.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಈ ಲಿಂಕ್ ಮೂಲಕ ನೀವು ಉಚಿತವಾಗಿ ಡಿಮ್ಯಾಟ್ ಅಕೌಂಟ್ ಮಾಡಬಹುದು http://tinyurl.com/y5lksvmh

ಈ ಚಿತ್ರದ ಸನ್ನಿವೇಶಗಳನ್ನು ಖಂಡಿಸಿ ಖ್ಯಾತ ಲೇಖಕ ಚಿರಂಜೀವಿ ಭಟ್ ಅವರು ವಿಡಿಯೋ ಮಾಡಿದ್ದರು. ಇದನ್ನು ನೋಡಿದ ಒಬ್ಬ ಧೃವ್ ಸರ್ಜಾ ಅಭಿಮಾನಿ ಒಬ್ಬ ಚಿರಂಜೀವಿ ಭಟ್ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಕಾಲ್ ಮಾಡಿ ಧಮ್ಕಿ ಬೇರೆ ಹಾಕಿದ್ದಾನೆ. ಕರೆ ಮಾಡಿದವನು ಹೆಸರು ಶೇಖರ್ ಎಂಬುದಾಗಿ ತಿಳಿದುಬಂದಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಚಿರಂಜೀವಿ ಭಟ್ ಅವರನ್ನು ಕೊಲೆ ಮಾಡಬೇಕು ಎಂದು ಪ್ಲಾನ್ ಹಾಕಿದ್ದಾರೆ ಧೃವ ಸರ್ಜಾ ಅಭಿಮಾನಿಗಳ ಗುಂಪೊಂದು!

ಇದನ್ನೂ ಓದಿ :  ಇವರು ಹೈಕಮಾಂಡ್ ಗೆ ಬೇಡವಾದ ಕೂಸು: ರವಿಕುಮಾರ್ ಲೇವಡಿ

ವಾಟ್ಸಾಪ್ ಗ್ರೂಪ್ ನಲ್ಲಿ ಬ್ರಾಹ್ಮಣ ವರ್ಗದ ಅವಮಾನ ಮಾಡಿದ ಸನ್ನಿವೇಶವನ್ನು ಖಂಡಿಸಿದ್ದಕ್ಕೆ ಚಿರಂಜೀವಿ ಭಟ್ ಅವರನ್ನು ಎತ್ಬಿಡ್ತೀನಿ. ಅವನು ಉಡುಪಿಯಲ್ಲಿ ಇರೋದಾದ್ರೆ ಅಲ್ಲಿ ನಮ್ಮ ಹುಡುಗ್ರಿದ್ದಾರೆ. ಅವ್ನ್ ಅ*** ಎತ್ತಿಕೊಂಡು ಬಂದು ಮಲ್ಪೆ ಬೀಚ್ ನಲ್ಲಿ ಮಲ್ಗಿಸ್ಬಿಡ್ತೀನಿ… ನಮ್ಮ ಬಾಸ್ (ಧೃವ ಸರ್ಜಾ) ಗೂ ಗೊತ್ತಾಗಬಾರದು ಎಂದು ಮಾತನಾಡಿದ ಆಡಿಯೋವನ್ನು ಚಿರಂಜೀವಿ ಭಟ್ ರವರು ಹಂಚಿಕೊಂಡಿದ್ದಾರೆ.

ಆಡಿಯೋ ಕೇಳಿ