ಬಿಗ್ ಬಾಸ್ ಮನೆಯ ಫೋಟೋ ರಿವೀಲ್! ಒಳಗೆ ಏನೆಲ್ಲಾ ಇದೆ?‘ಬಿಗ್‌ ಬಾಸ್‌ ಕನ್ನಡ ಸೀಸನ್‌ 8’ ಆರಂಭಕ್ಕಾಗಿ ಕಿರುತೆರೆ ಪ್ರೇಕ್ಷಕರು ಕಾದಿದ್ದಾರೆ. ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಫೆ.28ರಂದು ಅದ್ದೂರಿಯಾಗಿ ಲಾಂಚ್‌ ಆಗಲಿರುವ ಈ ರಿಯಾಲಿಟಿ ಶೋ ಬಗ್ಗೆ ಭಾರಿ ನಿರೀಕ್ಷೆ ಮನೆ ಮಾಡಿದೆ. ಸ್ಪರ್ಧಿಗಳು ಯಾರು ಎಂಬುದರ ಜೊತೆಗೆ ಈ ಬಾರಿ ಬಿಗ್‌ ಬಾಸ್‌ ಮನೆ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಕೂಡ ನಿರ್ಮಾಣ ಆಗಿದೆ. ಆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌.
ಪ್ರತಿ ವರ್ಷವೂ ಬಿಗ್‌ ಬಾಸ್‌ ಮನೆಯ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆ ಮಾಡಲಾಗುತ್ತದೆ. ಅದರಿಂದ ನೋಡುಗರಿಗೆ ಹೊಸತನದ ಫೀಲ್‌ ಸಿಗುತ್ತದೆ. ಈ ಸೀಸನ್‌ನಲ್ಲಿ ಮನೆಯ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅಡುಗೆ ಮನೆಯ ಒಂದು ಫೋಟೋವನ್ನು ಪರಮೇಶ್ವರ್‌ ಗುಂಡ್ಕಲ್‌ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಹಿಂದೆಂದಿಗಿಂತಲೂ ಆಕರ್ಷಕವಾಗಿ ಮನೆಯನ್ನು ಸಿದ್ಧಪಡಿಸಲಾಗಿದೆ. ಅಂದಹಾಗೆ, ಈ ಬಾರಿ ಕೋವಿಡ್‌ 19 ಹಾವಳಿ ಇರುವುದರಿಂದ ಅದಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಟಾಸ್ಕ್‌ಗಳು ನಿಯಮಗಳಲ್ಲೂ ಕೂಡ ಬದಲಾವಣೆ ಕಾಣಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಪರಮೇಶ್ವರ್‌ ಗುಂಡ್ಕಲ್‌ ಹಂಚಿಕೊಂಡಿರುವ ಈ ಫೋಟೋ ಕಂಡು ವೀಕ್ಷಕರು ಫಿದಾ ಆಗಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಮನೆಯಲ್ಲಿ ಇನ್ನೂ ಏನೆಲ್ಲ ವಿಶೇಷತೆಗಳಿವೆ ಎಂಬುದು ಫೆ.28ರಂದು ಬಹಿರಂಗ ಆಗಲಿದೆ. ಸಂಭಾವ್ಯ ಸ್ಪರ್ಧಿಗಳ ಕುರಿತಂತೆ ಈಗಾಗಲೇ ಭಾರಿ ಗುಸುಗುಸು ಕೇಳಿಬರುತ್ತಿದೆ. ಅನೇಕರ ಹೆಸರುಗಳು ಹರಿದಾಡುತ್ತಿವೆ. ‘ಬ್ರಹ್ಮಗಂಟು’ ಗೀತಾ ಭಾರತಿ ಭಟ್‌, ನಟ ಸುನೀಲ್ ರಾವ್‌, ‘ಸರಿಗಮಪ’ ಹನುಮಂತ, ನಟಿ ಅನುಷಾ ರಂಗನಾಥ್‌ ಮುಂತಾದವರು ಈ ಸಲ ದೊಡ್ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಆದರೆ ಈ ಕೌತುಕಕ್ಕೆ ಫೆ.28ರ ರಾತ್ರಿಯೇ ತೆರೆ ಬೀಳಬೇಕಿದೆ