ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ ನೀಡಿದ ಶಿವಮೊಗ್ಗದ ಮುಸ್ಲಿಂ ವ್ಯಕ್ತಿ!ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮುಂದಿನ ತಿಂಗಳ ಫೆಬ್ರವರಿ 5 ರವರೆಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಹಲವಾರು ಸ್ಟಾರ್ ನಟ ನಟಿಯರು ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ನಟಿ ಪ್ರಣಿತಾ ಸುಭಾಷ್ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ರೂ ದೇಣಿಗೆ ನೀಡಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ರಾಮ ನಮ್ಮ ದೊರೆ. ಮಂದಿರ ನಿರ್ಮಾಣಕ್ಕೆ ನಿಮ್ಮ ಕೈಲಾದ ಸೇವೆ ಮಾಡಿ ಎಂದಿದ್ದಾರೆ. ಸುಮಲತಾ ಅವರು ಮಂಡ್ಯದಲ್ಲಿ ಆರೆಸ್ಸೆಸ್ ಕಛೇರಿಗೆ ತೆರಳಿ ತಮ್ಮ ದೇಣಿಗೆಯನ್ನು ನೀಡಿದರು.

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಇದನ್ನೂ ಓದಿ :  ಬಿಎಸ್ ವೈ ಮೇಲೆ ಮತ್ತೆ ಅಸಮಾಧಾನದ ಹೊಗೆ

ಶಿವಮೊಗ್ಗದ ಮುಜೀಬ್ ಎಂಬ ವ್ಯಕ್ತಿ ಸೌಹಾರ್ದ ಸಂಕೇತವಾಗಿ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ ದೇಣಿಗೆ ನೀಡಿದ್ದಾರೆ. ಮುಜೀಬ್ ಉದ್ಯಮಿಯಾಗಿದ್ದು, 93 ಮಾರ್ಕ್ ಬೀಡಿ ಮಾಲೀಕರಾಗಿದ್ದಾರೆ. ಇವರು ತಮ್ಮ ದೇಣಿಗೆಯನ್ನು ಈಶ್ವರಪ್ಪ ಅವರಿಗೆ ಚೆಕ್ ಮೂಲಕ ಹಸ್ತಾಂತರ ಮಾಡಿದರು..