ಮಾಜಿ ಸಿಎಂ ಸಿದ್ದರಾಮಯ್ಯಗೆ ತಲೆ ಸರಿ ಇಲ್ಲ ಎನ್ನುವುದು ಇದಕ್ಕೇ… ಬಿಜೆಪಿ ಮುಖಂಡ!ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಕರಿಯೋಗಸಿದ್ದೇಶ್ವರ ಕನ್ನಡ ಮಾಧ್ಯಮಿಕ ಶಾಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಈಶ್ವರಪ್ಪ ಮಾಧ್ಯಮಗಳ ಜೊತೆಗೆ ಮಾತನಾಡಿ, ಸಿದ್ದರಾಮಯ್ಯ ಒಬ್ಬ ವಕೀಲ ಎಂದು ಹೇಳಿಕೊಳ್ಳಲು ಅವರಿಗೆ ನಾಚಿಕೆಯಾಗಬೇಕು. ಸುಪ್ರೀಂ ತೀರ್ಪಿನ ಬಳಿಕವೂ ರಾಮ ಮಂದಿರದ ಜಾಗ ವಿವಾದಿತ ಎಂದು ಹೇಳುತ್ತಿದ್ದಾರೆ. ಹೀಗಾಗಿ ರಾಜ್ಯದ ಜನ ಸಿದ್ದರಾಮಯ್ಯನವರನ್ನು ಛೀ ಥೂ ಎಂದು ಉಗಿಯುತ್ತಿದ್ದಾರೆ ಎಂದರು.

ಸುಪ್ರೀಂ ತೀರ್ಪಿನ ಬಳಿಕವೂ ಸಿದ್ದರಾಮಯ್ಯ ಅಯೋಧ್ಯೆಯದ್ದು ವಿವಾದಿತ ಮಂದಿರ ಎಂದು ಹೇಳುತ್ತಿದ್ದಾರೆ. ಈ ಕಾರಣಕ್ಕೆ ಸಿದ್ದರಾಮಯ್ಯನವರಿಗೆ ತಲೆ ಸರಿ ಇಲ್ಲ ಎನ್ನುವುದು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ಮಾಜಿ ಸಿಎಂ ವಿರುದ್ದ ಹರಿಹಾಯ್ದಿದ್ದಾರೆ.