ವೆರಿಕೋಸ್ ವೇಯ್ನ್ ಗೆ ಸಂಪೂರ್ಣ ಆಯುರ್ವೇದ ಚಿಕಿತ್ಸೆ ಈಗ ಬೆಂಗಳೂರಿನಲ್ಲಿ, ಇಲ್ಲಿದೆ ಸಂಪೂರ್ಣ ಮಾಹಿತಿ!ವೆರಿಕೋಸ್‌ ವೇಯ್ನ್‌ಗೆ ಡಾ. ಎಂ. ವಿ ಉರಾಳ್ ಅವರ ಆಯುರ್ವೇದ ಚಿಕಿತ್ಸೆ ಈಗ ಬೆಂಗಳೂರಿನ ಜಯನಗರದಲ್ಲಿ

ಜಟಿಲ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದ ಪರಿಹಾರ ನೀಡುವ ಮೂಲಕ ಭಾರತೀಯ ವೈದ್ಯಕೀಯ ಪದ್ಧತಿಯ ಮೇಲೆ ಜನರಿಗಿರುವ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದವರು ಆಯುರ್ವೇದದ ಜನಪ್ರಿಯ ವೈದ್ಯ, ಶೃಂಗೇರಿಯ ಡಾ. ಎಂ. ವಿ ಉರಾಳ್.

ಡಾ. ಎಂ. ವಿ ಉರಾಳ್ ಮೂಲತಃ ಮಣೂರಿನವರು. ಚಿಕ್ಕಮಗಳೂರಿನ ಎ ಎಲ್‌ ಎನ್‌ ರಾವ್‌ ಮೆಮೋರಿಯಲ್‌ ಆಯುರ್ವೇದ ಮೆಡಿಕಲ್‌ ಕಾಲೇಜಿನಲ್ಲಿ ತಮ್ಮ ಬಿಎಎಂಎಸ್‌ ಪದವಿ ಮುಗಿಸಿರುವ ಇವರು ಮಲೆನಾಡು ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಅನನ್ಯ ಸಾಂಪ್ರದಾಯಕ ಚಿಕಿತ್ಸಾ ತಂತ್ರಗಳನ್ನು ಕಲಿತವರು. ದೀರ್ಘಕಾಲಿಕ ರೋಗಗಳ ನಿರ್ವಹಣೆ ಮತ್ತು ಗುಣಪಡಿಸುವಿಕೆಗೆ ನಮ್ಮ ಸುತ್ತಮುತ್ತ ಸಿಗುವ ಗಿಡಮೂಲಿಕೆಗಳನ್ನೇ ಬಳಸಿ, ಕೈಗೆಟುಕುವ ದರದಲ್ಲಿ ಔಷಧಗಳನ್ನು ಸಿದ್ಧಪಡಿಸುವ ಅಪೂರ್ವ ಜ್ಞಾನ ಸಂಪಾದಿಸಿಕೊಂಡವರು.

ಅವರು ತಮ್ಮ ಪದವಿಯ ಬಳಿಕ, 1998ರಲ್ಲಿ ತಾವು ಸಂಪಾದಿಸಿದ ಚಿಕಿತ್ಸಾ ಜ್ಞಾನವನ್ನು ಹೊಸ ರೀತಿಯಲ್ಲಿ ಪ್ರಯೋಗಿಸಲು ಆರಂಭಿಸಿದರು. ಫಲಿತಾಂಶವೂ ಅದ್ಭುತವಾಗಿತ್ತು. ದೀರ್ಘಕಾಲಿಕ, ರಕ್ತನಾಳಕ್ಕೆ ಸಂಬಂಧಿಸಿದ ವೆರಿಕೋಸ್‌ ವೇಯ್ನ್‌, ಡಿವಿಟಿ ಮತ್ತು ಗುಣಪಡಿಸಲಾಗದ ಅಲ್ಸರ್‌ಗಳಿಗೆ ಇವರು ನೀಡುವ ಚಿಕಿತ್ಸೆ ಸಾಕಷ್ಟು ಜನಪ್ರಿಯವಾಯಿತು. ಸಾಂಪ್ರದಾಯಕ ಚಿಕಿತ್ಸೆಗಳಾದ ಶಸ್ತಚಿಕಿತ್ಸೆ, ಲೇಸರ್‌ ಥೆರಪಿ ಮೊದಲಾದವುಗಳ ನಂತರ ಎದುರಾಗುವ ತೊಡಕುಗಳನ್ನು ನಿವಾರಿಸುವ ಕಲೆ ಇವರಿಗೆ ಕರಗತವಾಯಿತು.

ʼಡಾ. ಉರಾಳ್ಸ್ ವೆರಿಕೋಸ್‌ ವೇಯ್ನ್ ಆಯುರ್ವೇದ ಕ್ಯೂರ್‌ʼ ನಲ್ಲಿ ವೆರಿಕೋಸ್‌ ವೆಯ್ನ್‌ಗೆ ಇವರು ನೀಡುತ್ತಿರುವ ಚಿಕಿತ್ಸೆ ಪರಿಣಾಮಕಾರಿ ಎನಿಸಿದೆ. ಸಾಕಷ್ಟು ಪ್ರಯೋಗಗಳ ಬಳಿಕ ಇವರು ʼಅಮೃತ ವೆರಿಕೋಸ್‌ ಸಿರಪ್‌ʼ ಆವಿಷ್ಕರಿಸಿದ್ದಾರೆ. ಈ ಔಷಧಿ ವೆರಿಕೋಸ್‌ ವೇಯ್ನ್‌ನಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳ ಉಬ್ಬುವಿಕೆ, ಚರ್ಮ ಕಪ್ಪಾಗುವಿಕೆ, ಕಾಲು ನೋವು, ಕಾಲು ಭಾರವಾಗುವುದು, ಊದಿಕೊಳ್ಳುವಿಕೆ, ತುರಿಕೆ ಮತ್ತು ಕೊನೆಯ ಹಂತವಾದ ವೀನಸ್‌ ಅಲ್ಸರ್‌ ಅನ್ನೂ ಗುಣಪಡಿಸಲು ಶಕ್ತವಾಗಿದೆ.

ಡಾ. ಎಂ. ವಿ ಉರಾಳ್ ತಮ್ಮ ಅನನ್ಯ ಚಿಕಿತ್ಸಾ ವಿಧಾನಗಳಿಂದ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುವವರಿಗೆ ಆಶಾಕಿರಣವೆನಿಸಿದರು. ಅವರ ಚಿಕಿತ್ಸಾ ವಿಧಾನ ನಮ್ಮ ದೇಶದ ಅನೇಕ ರಾಜ್ಯಗಳೂ ಸೇರಿದಂತೆ ವಿದೇಶಗಳಲ್ಲೂ ಜನರ ಗಮನ ಸೆಳೆದಿವೆ. ಇದೀಗ ಡಾ. ಎಂ. ವಿ ಉರಾಳ್ ಅವರ ವೆರಿಕೋಸ್‌ ವೈನ್‌ ಕ್ಲಿನಿಕ್‌ ಈಗ ನಮ್ಮ ಬೆಂಗಳೂರಿನ ಜಯನಗರದಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌ ಎದುರು ಆರಂಭವಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

  • ಶ್ರೀ ಆಯುರ್ವೇದ, ಲಕ್ಷ್ಮೀ ಕಾಂಪ್ಲೆಕ್ಸ್‌, ಜಯನಗರ 4ನೇ ಬ್ಲಾಕ್‌, ಬೆಂಗಳೂರು-11,
  • ಫೋನ್‌ : 9980362370
  • ವೆಬ್‌ಸೈಟ್‌ : http://www.uralsayurveda.in
  • ಫೇಸ್‌ಬುಕ್‌: https://www.facebook.com/DrUrals/