2 ಎಕರೆಯಲ್ಲಿ ಈತ ಸಂಪಾದಿಸುವ ಆದಾಯ 1.25 ಕೋಟಿ! ಎಲ್ಲರಿಗೂ ಇವರ ಕಥೆ ಸ್ಫೂರ್ತಿ!ಪಂಜಾಬಿನ ಸಂಜೀವ್ ಸಿಂಗ್ ಅವರು ಇಂತಹದೊಂದು ಸದ್ಬಳಕೆಯನ್ನು ಮಾಡಿಕೊಂಡಿದ್ದಾರೆ. ಪಂಜಾಬಿನ ಟಾಂಡಾ ಗ್ರಾಮದ ನಿವಾಸಿಯಾಗಿರುವ ಸಂಜೀವ್ ಸಿಂಗ್ ಅವರು 1992 ರಿಂದ ಅಣಬೆ ಬೇಸಾಯವನ್ನು ಮಾಡುತ್ತಿದ್ದು ಅಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಇವರನ್ನು ಮಶ್ರೂಮ್ ಕಿಂಗ್ ಎಂದು ಕರೆಯುವಷ್ಟು ಜನಪ್ರಿಯತೆ ಪಡೆದಿದ್ದಾರೆ. ಸಂಜೀವ್ ಸಿಂಗ್ ಅವರು ತನ್ನ 25ನೇ ವಯಸ್ಸಿನಲ್ಲಿ ಸಾಮಾನ್ಯ ಕೃಷಿಯನ್ನು ಮಾಡುತ್ತಲೇ ಅಣಬೆ ಬೇಸಾಯವನ್ನು ಕೂಡಾ ಆರಂಭಿಸಿದರು. ಇಂದು ಅವರು ತಮ್ಮ ಅಣಬೆ ಬೇಸಾಯ ದಿಂದಾಗಿ ದೇಶದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ. ಅವರ ಅಣಬೆ ಬೇಸಾಯಕ್ಕೆ ಕಾರಣವಾಗಿದ್ದು ಮಾತ್ರ ಟೆಲಿವಿಷನ್ ಎನ್ನುವುದು ಸತ್ಯ. ಸಂಜೀವ್ ಸಿಂಗ್ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಪಂಜಾಬಿನ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ‘ಮೇರಾ ಫಿಂಡ್ ಮೇರಾ ಗಾಂವ್’ ಎನ್ನುವ ಕಾರ್ಯಕ್ರಮವನ್ನು ನೋಡಿ ಅದರಿಂದ ಸ್ಪೂರ್ತಿಯನ್ನು ಪಡೆದು ಅಣಬೆ ಬೇಸಾಯವನ್ನು ಮಾಡುವ ನಿರ್ಧಾರವನ್ನು ಮಾಡಿದರು.

ಹೀಗೆ ಟಿವಿ ನೋಡಿದ ನಂತರ ಸ್ಪೂರ್ತಿ ಪಡೆದ ಸಂಜೀವ್ ಸಿಂಗ್ ಅವರು ತಾನು ಮಶ್ರೂಮ್ ಅನ್ನು ಬೆಳೆಸುವ ಪ್ರಯತ್ನವನ್ನು ಮಾಡುವುದಾಗಿ ನಿರ್ಧಾರ ಮಾಡಿದರು. ಇದಕ್ಕೆ ಪೂರ್ವ ತಯಾರಿಯಾಗಿ ಅವರು ಒಂದು ವರ್ಷ ಅಣಬೆ ಬೇಸಾಯದ ಕುರಿತಾಗಿ ಅಧ್ಯಯನವನ್ನು ನಡೆಸಿದರು. ಅಣಬೆ ಬೆಳೆಯುವ ವಿಧಾನವನ್ನು ಕಲಿತರು, ಇದರ ಮಾರುಕಟ್ಟೆಯ ಬಗ್ಗೆ ಕೂಡಾ ಮಾಹಿತಿಯನ್ನು ಸಂಗ್ರಹ ಮಾಡಿದರು. ಅಣಬೆ ಕೃಷಿಯ ಬಗ್ಗೆ ಸರಿಯಾದ ವಿಷಯವನ್ನು ತಿಳಿಯಲು ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಅಣಬೆ ಕೃಷಿಯ ಕೋರ್ಸ್ ಅನ್ನು ಮಾಡಿದರು. ಅಲ್ಲಿಯೇ ಅವರು ಕೋಣೆಯಲ್ಲಿ ಚೀಲಗಳನ್ನು ನೇತು ಹಾಕುವ ಮೂಲಕ ಕೂಡಾ ಅಣಬೆ ಬೇಸಾಯವನ್ನು ಮಾಡಬಹುದು ಎಂದು ಕಲಿತುಕೊಂಡಿದ್ದಾಗಿ ಹೇಳಿದ್ದಾರೆ. ಈ ಬೇಸಾಯಕ್ಕೆ ಬೇಕಾಗಿರುವುದು ಸಾವಯವ ಗೊಬ್ಬರವೇ ಹೊರತು ಮಣ್ಣಲ್ಲ ಎಂದು ತಿಳಿದು ಕೊಂಡರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


54 ರ ವಯಸ್ಸಿನ ಸಂಜೀವ್ ಸಿಂಗ್ ಅವರು ಹೇಳುವಂತೆ ಅವರು ಅಣಬೆ ಕೃಷಿಯನ್ನು ಆರಂಭಿಸಿದಾಗ ಅಲ್ಲಿನ ಸುತ್ತ ಮುತ್ತಲ ಪ್ರದೇಶಗಳಲ್ಲಿ ಯಾರೂ ಕೂಡಾ ಅಣಬೆ ಬೇಸಾಯ ಮಾಡುತ್ತಿರಲಿಲ್ಲ. ಆದ್ದರಿಂದ ಸ್ವತಃ ತಾನೇ ಪ್ರಯೋಗ ಮಾಡಲು ನಿರ್ಧರಿಸಿದರು, ಅಲ್ಲಿನ ಜನರಿಗೆ ಅಣಬೆಗಳ ಬಗ್ಗೆ ಅರಿವು ಇರಲಿಲ್ಲ. ಸಂಜೀವ್ ಅವರಿಗೆ ಸ್ಥಳೀಯವಾಗಿ ಅವುಗಳ ಬೀಜ ಕೂಡಾ ಸಿಗದ ಕಾರಣ ಅವರು ಅಣಬೆ ಬೇಸಾಯಕ್ಕೆ ಅಗತ್ಯ ಇರುವ ಬೀಜಗಳನ್ನು ತರಲು ದೆಹಲಿಗೆ ಹೋಗುತ್ತಿದ್ದರು. ‌ಸಂಜೀವ್ ಅವರು ಋತುವಿಗೆ ಅನುಗುಣವಾಗಿ ಮಶ್ರೂಮ್ ಬೆಳೆಯಲು ಆರಂಭಿಸಿದರು. ಅವರಿಗೆ ಸಾಮಾನ್ಯ ಕೃಷಿಯ ಜೊತೆಗೆ ಹೆಚ್ಚುವರಿ ಆದಾಯಕ್ಕೆ ಇದು ನೆರವನ್ನು ನೀಡಿತು.

ಉತ್ತಮ ಗುಣಮಟ್ಟದ ಅಣಬೆಗಳನ್ನು ಬೆಳೆಯಲು ಹಾಗೂ ಸ್ಥಿರವಾದ ಮಾರುಕಟ್ಟೆಯನ್ನು ಗಳಿಸಲು ಅವರು ಬರೋಬ್ಬರಿ ಎಂಟು ವರ್ಷಗಳ ಕಾಲ ಶ್ರಮ ಪಟ್ಟರು. 2001 ರಲ್ಲಿ ಅವರು ಕೋಣೆಯೊಂದನ್ನು ನಿರ್ಮಾಣ ಮಾಡಿಸಿ ಅಣಬೆ ಬೇಸಾಯಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕೂಡಾ ಅದರಲ್ಲಿ ಮಾಡಿದರು‌. ಅಣಬೆ ಬೆಳೆಯಲು ಅಗತ್ಯವಿದ್ದ ಗೊಬ್ಬರವನ್ನು ಖರೀದಿ ಮಾಡುತ್ತಿದ್ದರು. ಆದರೆ ಅನಂತರ ಅವರು ಗೊಬ್ಬರವನ್ನು ಖರೀದಿ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಒಂದು ಕಾಂಪೋಸ್ಟ್ ಯೂನಿಟ್ ಅನ್ನು ಆರಂಭಿಸಿದರು. ದಿನ ಕಳೆದಂತೆ ಅವರು ಅಣಬೆ ಬೀಜಗಳನ್ನು ತಯಾರಿಸಲು ಒಂದು ಪ್ರಯೋಗಾಲಯ ನಿರ್ಮಾಣ ಮಾಡಿಸಿ ಬೀಜ ಉತ್ಪಾದನೆ ಮತ್ತು ಮಾರಾಟಕ್ಕೆ ಕೂಡಾ ತೊಡಗಿಕೊಂಡರು.

ಈಗ ಸಂಜೀವ್ ಅವರ ಈ ಕಾರ್ಯ 1500 ಚದರ ಅಡಿ ಜಾಗದಲ್ಲಿ ಅಂದರೆ ಸುಮಾರು ಎರಡು ಎಕರೆ ಭೂಮಿಯಲ್ಲಿ ನಡೆಯುತ್ತಿದೆ. ಸಂಜೀವ್ ಅವರು ಹಗಲು ರಾತ್ರಿ ಶ್ರಮ ವಹಿಸಿದ್ದರ ಫಲ ಇಂದು ಅವರಿಗೆ ದಕ್ಕುತ್ತಿದೆ. ಈಗ ಅವರ ಅಣಬೆ ಉತ್ಪಾದನೆ ದಿನಕ್ಕೆ ಏಳು ಕ್ವಿಂಟಾಲ್ ಮಟ್ಟವನ್ನು ತಲುಪಿದೆ. ಅವರ ಅಣಬೆ ಬೀಜಗಳು ಹಾಗೂ ಅನ್ಯ ಉತ್ಪನ್ನಗಳ ಮಾರುಕಟ್ಟೆ ಜಮ್ಮು, ಜಲಂಧರ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಇನ್ನಿತರೆ ರಾಜ್ಯಗಳವರೆಗೂ ಕೂಡಾ ಹರಡಿದೆ. ಪ್ರಸ್ತುತ ರಾಜೀವ್ ಸಿಂಗ್ ಅವರು ವರ್ಷವೊಂದಕ್ಕೆ ಗಳಿಸುವ ಆದಾಯ ಸುಮಾರು 1.25 ಕೋಟಿಗಳಾಗಿದ್ದು ಇದೆಲ್ಲಾ ಕೂಡಾ ಅವರ ಶ್ರಮದ ಫಲವಾಗಿದೆ.