ಪಾಕ್ ಪರ ಘೋಷಣೆ ಕೂಗಿದ್ರಾ ಬಿಜೆಪಿಯ ಪವನ್? ಸ್ಪಷ್ಟನೆ ನೀಡಿದ ಪವನ್ ಶೆಟ್ಟಿ!ಉಜಿರೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೀಟು ಗೆದ್ದಿದ್ದ ಎಸ್ ಡಿ ಪಿ ಐ ರ್ಯಾಲಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದರು. ಇದಕ್ಕೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಈ ಘೋಷಣೆ ಕೂಗಿರುವುದು ಬಿಜೆಪಿಯ ಕಾರ್ಯಕರ್ತ ಪವನ್ ಶೆಟ್ಟಿ ಎಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗಿತ್ತು. ಇದಕ್ಕೆ ಸ್ವತಃ ಪವನ್ ಶೆಟ್ಟಿ ಸ್ಪಷ್ಟನೆ ನೀಡಿದರು.

ಬೆಳ್ತಂಗಡಿಯಲ್ಲಿ ಮಾತನಾಡಿದ ಅವರು “ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ. ನಾನು ಎಂದಿಗೂ ಪಾಕ್ ಪರ ಘೋಷಣೆ ಹಾಕಿದವನಲ್ಲ ಹಾಕುವುದು ಇಲ್ಲ. ಆ ದಿನ ನಾನು ನೀಲಿ ಶರ್ಟ್ ಧರಿಸಿದ್ದೆ. ಅದಕ್ಕೆ ಬಿಳಿ ಶರ್ಟ್ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ. ಇದೊಂದು ಶುದ್ಧ ಸುಳ್ಳು “ಎಂದು ಸ್ಪಷ್ಟನೆ ನೀಡಿದರು

ಜಾಹಿರಾತು : ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ನನ್ನ ವಿರುದ್ಧ ಇಲ್ಲಸಲ್ಲದ ಹಾಗೂ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಪರಿಹಾರಕ್ಕಾಗಿ ಕೇಸ್ ಹಾಕುತ್ತೇನೆ ಎಂದು ಪವನ್ ಶೆಟ್ಟಿ ಹೇಳಿದ್ದಾರೆ.