ಶಿವರಾತ್ರಿ ಆಚರಿಸಬೇಡಿ ಎಂದ ಸೋನು ಸೂದ್! ಬಯಲಾಯ್ತು ಸೋನು ಸೂದ್ ಹಿಂದೂ ವಿರೋಧಿ ಮುಖ!ಕಳೆದ ವರ್ಷ ಕೊರೋನಾ ಅಬ್ಬರದಲ್ಲಿ ದೇಶ ಲಾಕ್ ಡೌನ್ ಆಗಿತ್ತು. ಈ ಸಂದರ್ಭದಲ್ಲಿ ಹಲವಾರು ಬಡ ಕುಟುಂಬಗಳು ಊಟಕ್ಕೆ ಸಹ ಪರದಾಡುವಂತಾಗಿತ್ತು. ಹಲವಾರು ಜನರು ಲಾಕ್ ಡೌನ್ ಮಧ್ಯೆ ತಮ್ಮ ಊರಿಗೆ ಹೋಗಲು ಸಹ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದರು.

ಈ ಸಮಯದಲ್ಲಿ ಸಾಮಾನ್ಯ ಜನರ ಪಾಲಿಗೆ ನಿಜವಾಗಿ ಹೀರೋ ಆಗಿ ನಿಂತಿದ್ದು ಮಾತ್ರ ಬಾಲಿವುಡ್ ನಟ ಸೋನು ಸೂದ್. ಲಾಕ್ ಡೌನ್ ಸಮಯದಲ್ಲಿ ಕಷ್ಟದಲ್ಲಿರುವವರನ್ನು ಗಮನಿಸಿ ಖುದ್ದಾಗಿ ಸೋನು ಸೂದ್ ಅವರೇ ಸಹಾಯ ಹಸ್ತ ನೀಡಿದ್ದಾರೆ. ಎಷ್ಟೋ ಜನ ತಮ್ಮ ಊರಿಗೆ ಹೋಗಲು ಆಗದೇ ಜಾಲತಾಣದಲ್ಲಿ ಸೋನು ಸೂದ್ ಅವರನ್ನು ಟ್ಯಾಗ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಸೋನು ಸೂದ್ ಹಲವಾರು ವಿದ್ಯಾರ್ಥಿಗಳನ್ನು ಜನರನ್ನು ತಮ್ಮ ತಮ್ಮ ಊರಿಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡಿದ್ದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಇಷ್ಟೆಲ್ಲ ಒಳ್ಳೆಯ ಕೆಲಸಗಳಿಂದ ಗುರುತಿಸಿಕೊಂಡಿರುವ ಸೇನಾ ಸೂದ್ ಅವರು ಮಹಾಶಿವರಾತ್ರಿಯ ದಿನವಾದ ಇಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಟ್ವೀಟ್ ಮಾಡಿರುವ ಸೋನು ಸೂದ್ “ಬರೀ ಶಿವನ ಫೋಟೋ ಶೇರ್ ಮಾಡಿ ಶಿವರಾತ್ರಿ ಆಚರಿಸಬೇಡಿ, ಇನ್ನೊಬ್ಬರಿಗೆ ಸಹಾಯ ಮಾಡಿ ಆಚರಿಸಿ” ಎಂದು ಹೇಳಿದ್ದರು. ಅರೇ ಇದರಲ್ಲೇನು ವಿವಾದ ಎಂದು ನೀವು ಹುಡುಕುತ್ತಿರಬಹುದು. ಆದರೇ ಇದೇ ಸೋನು ಸೂದ್ ಕ್ರಿಸ್ಮಸ್ ಹಾಗೂ ಈದ್ ಹಬ್ಬಗಳು ಬಂದಾಗ ಮಾತ್ರ ಸ್ವತಃ ತಾವೇ ಸಾಂತಾ ಕ್ಲಾಸ್ ವೇಷ ಧರಿಸಿ ಶುಭಾಶಯ ಕೋರಿದ್ದರು. ಈದ್ ಮಿಲಾದ್ ಗೆ ಮಸೀದಿಯ ಫೋಟೋ ಹಾಕಿ ಶುಭಾಶಯ ಕೋರಿದ್ದಾರೆ. ಈ ರೀತಿಯ ಡಬಲ್ ಸ್ಟಾಂಡರ್ಡ್ ಜನರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಸೋನು ಸೂದ್ ಮಾಡಿರುವ ಹಲವಾರು ಒಳ್ಳೆಯ ಕೆಲಸಗಳೂ ಸಹ ಇಂಥಹ ಒಂದು ಉದ್ಧಟತನದಿಂದ ಕಾಣಿಸದೆಯೂ ಇರಬಹುದು! ನಿಮಗೂ ಇದು ಸರಿ ಎನಿಸಿದರೇ ಶೇರ್ ಮಾಡಿ!