ಮೋದಿಗೆ ಬುದ್ದಿ ಕಲಿಸಲು ಹೋಗಿ ಭಾರಿ ಮುಖಭಂಗಗೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್?!ನವದೆಹಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಕೇಂದ್ರ ಕೃಷಿ ಕಾನೂನುಗಳ ಜಾರಿಗೆ ತಾವೂ ವಿರೋಧ ವ್ಯಕ್ತಪಡಿಸುವ ಮೂಲಕ ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೃಷಿ ಕಾನೂನುಗಳ ಪ್ರತಿಯನ್ನು ಹರಿದು ಹಾಕುವ ಮೂಲಕ ತಮ್ಮ ಅಭಿಮಾನಿಗಳ ಶಹಬ್ಬಾಸ್ ಪಡೆದುಕೊಂಡಿದ್ದರು. ಕೃಷಿ ಕಾನೂನುಗಳ ಜಾರಿ ವಿರೋಧಿಸಿ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು, ಇದು ರೈತರಿಗೆ ಮಾರಕ, ರೈತರ ಪಾಲಿಗೆ ಈ ಕಾನೂನುಗಳು ಬ್ರಿಟಿಷರ ಕಾನೂನುಗಳಷ್ಟೇ ಘೋರ ಎಂದು ಆಕ್ರೋಶಭರಿತರಾಗಿ ಹೇಳುವ ಮೂಲಕ ಪ್ರತಿಯನ್ನು ಹರಿದು ಹಾಕಿದ್ದರು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯಿಂದ ಭಾರಿ ಸುದ್ದಿಯಾಗುತ್ತಿದ್ದು, ರೈತರ ಪರ ಎಂದು ಹೇಳಿಕೊಳ್ಳುವವರೆಲ್ಲರೂ ಕೇಜ್ರಿವಾಲ್ ಅವರಿಗೆ ಬೆನ್ನುತಟ್ಟಿದರು, ಹಾಡಿ ಹೊಗಳಿದ್ದರು. ಆದರೆ ಇದೇ ಘಟನೆ ಅರವಿಂದ ಕೇಜ್ರಿವಾಲ್ ಅವರಿಗೆ ಈಗ ಭಾರಿ ಮುಖಭಂಗ ಆಗುವಂತೆ ಮಾಡಿದ್ದು, ಸಕತ್ ಟ್ರೋಲ್ ಆಗುತ್ತಿದ್ದಾರೆ.

ಇದಕ್ಕೆ ಕಾರಣ, ಮೂರು ವರ್ಷಗಳ ಹಿಂದಷ್ಟೇ ಇದೇ ಕೃಷಿ ಕಾನೂನುಗಳನ್ನು ಅವರು ಬೆಂಬಲಿಸಿದ್ದು! ಅಷ್ಟೇ ಆದರೆ ಪರವಾಗಿರಲಿಲ್ಲ, ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದ ಬೆನ್ನಲ್ಲೇ ಕೇಜ್ರಿವಾಲ್​ ಸರ್ಕಾರ ಕೂಡ ಆ ಮೂರು ಕಾಯ್ದೆಗಳಿಗೆ ನವೆಂಬರ್‌ನಲ್ಲೇ ಅನುಮೋದನೆ ನೀಡಿತ್ತು! ಮೂರು ವರ್ಷಗಳ ಹಿಂದೆ ಅಂದರೆ, 2017ರಲ್ಲಿ ಹಲವು ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಈಗಿನ ಕೃಷಿ ಕಾನೂನಿನಲ್ಲಿ ಏನೇನು ಇವೆಯೋ ಅವುಗಳನ್ನೇ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳುವ ಮೂಲಕ ತಾವು ಈ ರೀತಿ ರೈತಪರ ಕಾನೂನು ತರುವುದಾಗಿ ಘೋಷಣೆ ಮಾಡಿದ್ದರು. ಕಾಂಗ್ರೆಸ್​ ಕೂಡ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಕಾನೂನುಗಳನ್ನು ತರುವ ಕುರಿತಾಗಿ ಹೇಳಿದಂತೆ ಕೇಜ್ರಿವಾಲ್​ ಕೂಡ ಹೇಳಿದ್ದರು. ಆದರೆ ಸಾಮಾನ್ಯ ರಾಜಕಾರಣಿಗಳಂತೆ ಅವರು ಅದನ್ನು ಈಗ ಮರೆತರೋ ಅಥವಾ ಜನರಿಗೆ ಆ ಬಗ್ಗೆ ನೆನಪು ಇರುವುದಿಲ್ಲ ಎಂದೋ ಗೊತ್ತಿಲ್ಲ, ಒಟ್ಟಿನಲ್ಲಿ ನಿನ್ನೆ ಕೃಷಿ ಕಾನೂನು ಸಂಬಂಧಿತ ಪ್ರತಿಯನ್ನು ಹರಿದುಹಾಕಿ ಇದೀಗ ಮುಜುಗರ ಪಟ್ಟುಕೊಳ್ಳುವಂತಾಗಿದೆ.

ಪಂಜಾಬ್‌ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಕೇಜ್ರಿವಾಲ್​ ಅವರ ಆಮ್‌ ಆದ್ಮಿ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಹೂಡಿಕೆಗೆ ಒತ್ತು ನೀಡಲಾಗುವುದು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ರೈತರು ರಾಜ್ಯದ ಹೊರಗೂ ಉತ್ಪನ್ನ ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿತ್ತು. ಮಾತ್ರವಲ್ಲದೇ, ಈ ಕಾಯ್ದೆಗಳಿಗೆ ನವೆಂಬರ್‌ನಲ್ಲೇ ಅನುಮೋದನೆ ನೀಡಿತ್ತು. ಅರವಿಂದ ಕೇಜ್ರಿವಾಲ್‌ ಅವರು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಅವರು ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ ಟೀಕಿಸಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/