ಬಾಂಬ್ ಸಿಡಿಸಿದ್ರಾ ಬೋಮ್ಮಾಯಿ.?ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲೂ ಅವರ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದ ವೇಳೆ ನಾಯಕತ್ವದ ನಾಯಕತ್ವದ ಬಗ್ಗೆ ಚರ್ಚೆ ನಡೆದಿರುವು ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಸ್ಸಿಗೆ ನೋವಾಗಿದೆ. ಹೀಗಾಗಿಯೇ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೊಂಡಿದ್ದಾರೆ. ಭಾನುವಾರ ಯಡಿಯೂರಪ್ಪ ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಸಚಿವ ಅಶೋಕ್ ಜೊತೆ ಸಿಎಂ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ ಬೊಮ್ಮಾಯಿ ಸುದ್ದಿಗಾರರೊಂದಿಗೆ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಅಪಸ್ವರ ಎತ್ತುತ್ತಿರುವವರು ಈ ಸರ್ಕಾರ ಅಸ್ತಿತ್ವಕ್ಕೆ ಬರಲು ತಾವು ವಹಿಸಿದ ಪಾತ್ರವೇನು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಯಡಿಯೂರಪ್ಪ ಅವರ ನಾಯಕತ್ವವೇ ನಮಗೆ ಶ್ರೀರಕ್ಷೆ ನಾಯಕತ್ವದ ವಿರುದ್ಧ ಯಾರೆಲ್ಲಾ ಕೂಗಾಡಿದರೂ ಯಡಿಯೂರಪ್ಪನವರ ಮೇಲೆ ಹೈಕಮಾಂಡ್‌ಗೆ ಅಚಲವಾದ ವಿಶ್ವಾಸವಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆಯಿಲ್ಲ, ಯಡಿಯೂರಪ್ಪ ಅವರು ಆಡಳಿತಾವಧಿ ಪೂರೈಸಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು. ಯಡಿಯೂರಪ್ಪನವರು ಗಟ್ಟಿಯಾಗಿರುವುದರಿಂದ ಸುಗಮವಾದ ಆಡಳಿತ ನೀಡುತ್ತಿದ್ದಾರೆ. ಹೋರಾಟದ ಹಾದಿಯಿಂದ ಬಂದವರು, ಜನರ ಧ್ವನಿಯಾಗಿ ಕೆಲಸ ಮಾಡಿದವರು. ಪರಿವರ್ತನಾ ಯಾತ್ರೆ ಮೂಲಕ ಹಳ್ಳಿ ಹಳ್ಳಿಗೆ ತೆರಳಿ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. ಯಡಿಯೂರಪ್ಪ ಅವರ ಹೆಸರಿನಲ್ಲಿದೆ . ಅವರ ನೇತೃತ್ವದಲ್ಲಿ ನಾವೆಲ್ಲಾ ಸುಗಮ ಆಡಳಿತ ನೀಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :  ಸಿಎಂ ಬದಲಾವಣೆ : ಕೇವಲ ಹಾಸ್ಯದ ತುಣುಕು! ಇನ್ನೂ ಎರಡು ವರ್ಷಗಳ ಕಾಲ ರಾಜಾಹುಲಿಯೇ ಸಿಎಂ?

ಸಿಎಂ ಬಿಎಸ್‌ವೈ ಮನಸಿಗೆ ನೋವಾಗಿ ರಾಜೀನಾಮೆ ಬಗ್ಗೆ ಹೇಳಿರಬಹುದು,ಏನೇ ಆಗಲಿ ಇನ್ನೂ 2 ವರ್ಷ ಬಿಎಸ್‌ವೈ ಸಿಎಂ ಆಗಿರುತ್ತಾರೆಮದು ಸಚಿವ ಬೊಮ್ಮಾಯಿ ಹೇಳಿದ್ದಾರೆ.