ಡಿಸೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಆಗಲಿದೆ ಮಹತ್ವದ ಬದಲಾವಣೆ?!ಸದ್ಯ ರಾಜ್ಯದ ರಾಜಕಾರಣದಲ್ಲಿ ಬೈ ಎಲೆಕ್ಷನ್ ಹವಾ ಜೋರಾಗಿದ್ದು ರಾಜಕಾರಣಿಗಳು ಒಂದಷ್ಟು ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿಯವರು ರಾಜ್ಯ ರಾಜಕಾರಣದಲ್ಲಿ ಡಿಸೆಂಬರ್ ನಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂಬ ಬಾಂ ಬ್ ಒಂದನ್ನು ಸಿ ಡಿಸಿದ್ದಾರೆ. ಶನಿವಾರ ಸಂಜೆ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಕರೆದ ಶಿಕ್ಷಕರ ಸಭೆಯಲ್ಲಿ ಈ‌ ಭವಿಷ್ಯವನ್ನು ನುಡಿದಿರುವ ಮಾಜಿ ಸಿಎಂ ಕುಮಾರ ಸ್ವಾಮಿ ಇದರ ಜೊತೆ ಜೊತೆಗೆ ಈ ಮೊದಲು ಮಾಡಿಕೊಂಡಿದ್ದ ಮೈತ್ರಿ ಬಗ್ಗೆಯೂ ತೀವ್ರ ಪಶ್ಚಾತಾಪವನ್ನೂ ಹೊರಹಾಕಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡದ್ದು ನಾನು ಮಾಡಿದ ಅತಿ ದೊಡ್ಡ ತಪ್ಪು ಎಂದು ತನ್ನನ್ನು ತಾನು ಹಳಿದುಕೊಂಡ ಹೆಚ್ ಡಿ ಕೆ ಲೋಕಸಭೆಯಲ್ಲೂ ಅವರ ಜೊತೆ ಸೇರಿ ಇನ್ನೊಂದು ದೊಡ್ಡ ತಪ್ಪನ್ನು ಮಾಡಿದೆ, ಎಂಬೂದಾಗಿ ಶಿಕ್ಷಕರ ಮುಂದೆ ತಮ್ಮ ಮನದ ಬೇಸರವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಸಂದರ್ಭ ನನ್ನ ಪರಿಸ್ಥಿತಿ ಹೀನಾಯವಾಗಿದ್ದು ತಾನು ಮುಳ್ಳಿನ ಮೇಲೆ ಬಟ್ಟೆಯನ್ನು ಹಾಕಿ ತಪ್ಪು ಮಾಡಿದ್ದೆ, ಆ ತಪ್ಪನ್ನು ಮುಂದಿನ ದಿನಗಳಲ್ಲಿ ಸರಿಮಾಡಿಕೊಳ್ಳುವೆ ಎಂಬ ಭರವಸೆಯನ್ನೂ ಹೊರ ಹಾಕಿದ್ದಾರೆ. ನನ್ನ ಹಳೆಯ ಸ್ನೇಹಿತರು ನನ್ನ ಬಗ್ಗೆ ತುಂಬಾ ತುಚ್ಛವಾಗಿ ಮಾತನಾಡಿ ನನ್ನನ್ನು ಅವಮಾನಿಸುತ್ತಾರೆ, ನಾನು ಅವರ ಬಗ್ಗೆ ಆ ರೀತಿ ಮಾತನಾಡಲಾರೆ, ನನ್ನ ಸಹಕಾರದಿಂದ ಬೆಳೆದವರೇ ನನಗೆ ಚೂರಿ ಹಾಕುತ್ತಿದ್ದಾರೆ, ಅಂಥ ಅನ್ಯಾಯ ನಾನೇನು ಮಾಡಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಉತ್ತಮರ ಸಹವಾಸ ಮಾಡುತ್ತಿದ್ದರೆ ಈ ಹೀನ ಸ್ಥಿತಿ‌ ನನಗೆ ಬರುತ್ತಿರಲಿಲ್ಲ ಎಂದೂ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಕುಮಾರಣ್ಣ ಮೈತ್ರಿ ಸಂದರ್ಭ ಎಂಥಾ ಪೇಚಿನಲ್ಲಿ ಸಿಕ್ಕಿಕೊಂಡಿದ್ದರು ಎಂಬ ಸತ್ಯ ಈಗ ಅವರ ಬಾಯಿಯಿಂದಾನೇ ಹೊರ ಬಿದ್ದಿದ್ದು , ಮೈತ್ರಿ ಸಂದರ್ಭದಲ್ಲಿ ಕುಮರಣ್ಣ ಬರೀ ಸೂತ್ರದ ಬೊಂಬೆಯಂತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಈ ಸಂದರ್ಭದಲ್ಲಿ ತಾನು ಒಳ್ಳೆಯವರ ಸಹವಾಸ ಮಾಡಬೇಕಿತ್ತು ಎಂದಿರುವ ಮಾಜಿ ಸಿ ಎಂ , ಕಾಂಗ್ರೆಸ್ ನಲ್ಲಿರುವವರು ಅತ್ಯಂತ ದುಷ್ಟರು ಎಂಬುದಾಗಿ ಹೇಳಿದಂತಾಗಿದೆ. ಹಾಗಿದ್ದರೆ ಒಳ್ಳೆಯವರ ಸಹಾವಾಸ ಮಾಡಬೇಕಿತ್ತಾದರೆ ಆ ಒಳ್ಳೆಯವರು ಕುಮಾರ ಸ್ವಾಮಿ ಪ್ರಕಾರ ಯಾರಾಗಿದ್ದರು.. ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ, ಸದ್ಯ ಆ ಒಳ್ಳೆಯವರು ಯಡಿಯೂರಪ್ಪನವರಾಗಿದ್ದರಾ ? ಎಂಬ ಪ್ರಶ್ನೆಯೂ ಹಲವರಲ್ಲಿದೆ. ಸದ್ಯ ಅವರು ನೀಡಿರುವ ಡಿಸೆಂಬರ್ ನ ಬದಲಾವಣೆಯ ಕುರಿತ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಕುಮಾರಣ್ಣ ಮತ್ತೆ ಏನಾದರೂ ಗಾಳ ಹಾಕುವ ಕೆಲಸಕ್ಕೆ ಕೈ ಹಾಕಿದ್ದಾರ ಎಂದು ಕಾದು ನೋಡಬೇಕಿದೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800