ಸಿಎಂ ಬದಲಾವಣೆ : ಕೇವಲ ಹಾಸ್ಯದ ತುಣುಕು! ಇನ್ನೂ ಎರಡು ವರ್ಷಗಳ ಕಾಲ ರಾಜಾಹುಲಿಯೇ ಸಿಎಂ?ಚಿತ್ರದುರ್ಗ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಾಗುವುದಿಲ್ಲ ಇದೊಂದು ಕುಚೇಷ್ಟೆ ಎಂದು ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಹೇಳಿದರು. ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸುವಯಾವುದೇ ಯೋಚನ ಹೈಕಮಾಂಡ್ ಮುಂದಿಲ್ಲ. ಈ ಬಗ್ಗೆ ಯಾರಾದರೂ ದಹಲಿಗೆ ಹೋಗಿ ಬಂದರೆ ಅದು ಅವರ ಹುಚ್ಚುತನ. ಮುಖ್ಯಮಂತ್ರಿ ಸ್ಥಾನ ಪಲ್ಲಟ ಆಗುವುದಿಲ್ಲ. ಭಿನ್ನಮತ ಶಮನ ಖಂಡಿತ ಆಗುತ್ತದೆ ಎಂದು ಮಂಗಳವಾರ ತಿಳಿಸಿದರು.

ಯಡಿಯೂರಪ್ಪ ಅವರು ನಿನ್ನೆಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ಒಂದು ದಿನ ವಿಶ್ರಾಂತಿ ಬಯಸದೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟದ ದಿನದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದು ಅನಾಗರಿಕತನವಾಗುತ್ತದೆ . ಈ ಬಗ್ಗೆ ಯಾರೂ ಮಾತನಾಡಬಾರದು. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಸ್ವಾಮೀಜಿಗಳ ಬಗ್ಗೆ ಮಾತನಾಡಲ್ಲ. ಆದರೆ ಸ್ವಾಮೀಜಿಗಳು ರಾಜಕಾರಣ ಮಾಡಬಾರದು. ಸಮಾಜ ಸೇವೆ ಮಾಡಬೇಕು.

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ರಾಜಕಾರಣ ಮಾಡಲು ಸಂಘ ಪರಿವಾರದ ಅಡಿಯಲ್ಲಿ ಬೆಳೆದಿರುವ ಬಿಜೆಪಿ ಇದೆ. ಸ್ವಾಮೀಜಿ ಹಿಡಿತದಲ್ಲಿ ಯಡಿಯೂರಪ್ಪ, ಯಡಿಯೂರಪ್ಪನ ಹಿಡಿತದಲ್ಲಿ ಸ್ವಾಮೀಜಿಗಳಿದ್ದಾರೆ. ಎಂಬುದು ತಪ್ಪು ಕಲ್ಪನೆ ಎಂದು ತಿಳಿಸಿದರು.