ಮನೆಗೆ ಬರುತ್ತಿದ್ದ ಯುವತಿ ; ಸಿಸಿಟಿವಿಯಲ್ಲಿ ಸೆರೆಯಾಯ್ತು ಅತೀ ಭೀಕರ ದೃಶ್ಯ!ನವದೆಹಲಿ: ವಾಯುವ್ಯ ದೆಹಲಿಯ ಆದರ್ಶ್ ನಗರದಲ್ಲಿ ಮಾರುಕಟ್ಟೆಯಿಂದ ಮನೆಗೆ ಬರುತ್ತಿದ್ದಾಗ ಯುವತಿ ಮೇಲೆ ಕಳ್ಳನೋರ್ವ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚೈನ್ ಸ್ನ್ಯಾಚರ್ನಿಂದ ಯುವತಿ ಮೇಲೆ ಹಲ್ಲೆ
ಕಳ್ಳನೋರ್ವ ಯುವತಿಯ ಚೈನ್ ಕದಿಯಲು ಯತ್ನಿಸಿದಾಗ ಆಕೆ ಪ್ರತಿರೋಧವೊಡ್ಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಖದೀಮ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದಾಳೆ.

ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಕಳ್ಳನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.