ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧದ ಬಗ್ಗೆ ಮಹತ್ವದ ಸುಳಿವು ನೀಡಿದ ಸಿ.ಟಿ.ರವಿ ಟ್ವೀಟ್!

ಬೆಂಗಳೂರು: ಗೋ ಹತ್ಯೆ ನಿಷೇಧ ಕಾನೂನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂಬ ಬಹುಜನರ ಬೇಡಿಕೆ ಈಡೇರುವ ಸಮಯ ಸಮೀಪದಲ್ಲಿದೆ. ಹೀಗೊಂದು ಸುಳಿವನ್ನು ರಾಜ್ಯದ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶುಕ್ರವಾರ ನೀಡಿದ್ದಾರೆ. ‘ದ ಕರ್ನಾಟಕ ಪ್ರಿವೆನ್ಶನ್ ಆಫ್ ಸ್ಲಾಟರ್ ಆಯಂಡ್ ಪ್ರಿವೆನ್ಶನ್ ಆಫ್ ಕ್ಯಾಟಲ್ ಬಿಲ್’ ಅನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಪಶು ಸಂಗೋಪಾನ ಸಚಿವ ಪ್ರಭು ಚವಾಣ್ ಅವರಲ್ಲಿ ವಿನಂತಿ ಮಾಡಿದ್ದೇನೆ.

ಅವರೂ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಈ ಕೆಲಸ ನಡೆಯಲಿದೆ ಎಂದು ಸಿ.ಟಿ.ರವಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಿ.ಟಿ. ರವಿ ಕೆಲವು ದಿನಗಳ ಹಿಂದೆ ಲವ್ ಜಿಹಾದ್ ತಡೆಗೆ ಅಲಹಾಬಾದ್ ಹೈ ಕೋರ್ಟ್ ಆದೇಶದ ಅಂಶಗಳನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಮತಾಂತರ ಮಾಡುವುದಕ್ಕಾಗಿ ನಮ್ಮ ಸೋದರಿಯರನ್ನು ಪ್ರೀತಿ, ಪ್ರೇಮದ ಬಲೆಗೆ ಕೆಡವಿ ಬಲವಂತದ ಮತಾಂತರ ಮಾಡವುದನ್ನು ನೋಡುತ್ತ ಸುಮ್ಮನಿರಲಾಗದು. ಇಂತಹ ಕೆಲಸದಲ್ಲಿ ನಿರತರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇ ಬೇಕು ಎಂದು ಆಗ್ರಹಿಸಿದ್ದರು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.

http://www.uralsayurveda.in https://www.facebook.com/DrUrals/

ಇದನ್ನೂ ಓದಿ :  MUST READ: ಪುಲ್ವಾಮ ದಾ'ಳಿಯ ಬಗ್ಗೆ ರವಿ ಬೆಳಗೆರೆ ರವರ ವಿಶ್ಲೇಷಣೆ ಓದಿದ್ದೀರಾ?! ; ಇಲ್ಲಿದೆ ಬೆಳಗೆರೆಯವರ ಆ ದುರ್ಘ'ಟನೆಯ ಸಂಪೂರ್ಣ ವಿಶ್ಲೇಷಣೆ!