ಪಟಾಕಿ ಮಾರದಂತೆ ಮುಸ್ಲಿಂ ಪಟಾಕಿ ಅಂಗಡಿಗಳಿಗೆ ನುಗ್ಗಿ ಖಡಕ್ ವಾರ್ನಿಂಗ್ ನೀಡಿದ ಕೇಸರಿಗಳು! ; ವಿಡಿಯೋ ಈಗ ಪುಲ್ ವೈರಲ್.ಭೋಪಾಲ್: ಕರೊನಾ ಸಮಯದಲ್ಲಿ ಪಟಾಕಿ ಸಿಡಿಸುವುದರಿಂದ ಸೋಂಕಿತರ ಆರೋಗ್ಯ ಇನ್ನಷ್ಟು ಹದಗೆಡುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಆಯಾ ರಾಜ್ಯ ಸರ್ಕಾರಗಳು ಪಟಾಕಿ ಮಾರಾಟಕ್ಕೆ ನಿರ್ಬಂಧ ಹೇರಲಾರಂಭಿಸಿವೆ. ಆದರೆ ಮಧ್ಯಪ್ರದೇಶದ ನಗರವೊಂದರಲ್ಲಿ ಪಟಾಕಿ ಅಂಗಡಿ ಇಟ್ಟುಕೊಂಡಿದ್ದ ಮುಸ್ಲಿಂ ಮಾಲೀಕರಿಗೆ ಹಿಂದೂ ಯುವಕರು ವಾರ್ನಿಂಗ್ ಕೊಟ್ಟಿದ್ದು, ಈ ವಿಡಿಯೋ ಇದೀಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಅಂಗಡಿಯಲ್ಲಿದ್ದ ಮುಸ್ಲಿಂ ಮಾಲೀಕರ ಬಳಿ ಬರುವ ಹಿಂದೂ ಯುವಕರು, ‘ಈ ಕೂಡಲೇ ಅಂಗಡಿಯಲ್ಲಿ ಪಟಾಕಿ ಮಾರಾಟ ನಿಲ್ಲಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ನಡೆಯಬಾರದ್ದು ನಡೆಯುತ್ತದೆ’ ಎಂದು ಧಮಕಿ ಹಾಕುತ್ತಾರೆ. ಮಾಲೀಕ ಮತ್ತು ಯುವಕರ ನಡುವೆ ಒಂದಿಷ್ಟು ಮಾತಿನ ಚಕಮಕಿ ನಡೆಯುತ್ತದೆ. ಕೊನೆಯಲ್ಲಿ ಅಂಗಡಿಯಿಂದ ವಾಪಾಸು ಹೋಗುವ ಯುವಕರಲ್ಲಿ ಒಬ್ಬಾತ ಫ್ರಾನ್ಸ್ನಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿಚಾರಕ್ಕಾದ ಪ್ರಕರಣವನ್ನು ನೆನಪಿಸುತ್ತಾನೆ.

ಕೇಸರಿ ಶಾಲು ಧರಿಸಿದ್ದ ಯುವಕರ ಗುಂಪು ಈ ರೀತಿಯ ಎಚ್ಚರಿಕೆ ನೀಡಿದ್ದು, ಧಾರ್ಮಿಕ ದ್ವೇಷಕ್ಕೆ ತಿರುಗಲು ಕಾರಣವಾಗಿದೆ. ಲಕ್ಷ್ಮೀ ಬಾಂಬ್, ಗಣೇಶ ಬಾಂಬ್ನಂತಹ ಪಟಾಕಿ ಮಾರುವಂತಿಲ್ಲ ಎನ್ನುವ ಎಚ್ಚರಿಕೆಯನ್ನು ಯುವಕರು ನೀಡಿದ್ದಾರೆ. ಹಿಂದೂ ದೇವರಿರುವ ಪಟಾಕಿ ಮಾರಾಟ ಮಾಡಿದರೆ ಬೇರೆಯದ್ದೇ ರೀತಿಯಲ್ಲಿ ಬುದ್ಧಿ ಕಲಿಸುವುದಾಗಿ ಅವರು ಹೇಳಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ರಾಜ್ಯಾದ್ಯಂತ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಂ ಅಂಗಡಿಯನ್ನೇ ಗುರಿ ಮಾಡಿ ಎಚ್ಚರಿಕೆ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ದೇವರ ಚಿತ್ರವಿರುವ ಪಟಾಕಿಗಳ ಮಾರಾಟಕ್ಕೆ ಈಗಾಗಲೇ ಮಧ್ಯಪ್ರದೇಶ ರಾಜ್ಯಸರ್ಕಾರ ನಿರ್ಬಂಧ ಹೇರಿದೆ. ಹೀಗಿರುವಾಗ ಈ ಘಟನೆ ನಡೆದಿರುವುದರ ಹಿಂದಿನ ಉದ್ದೇಶ ಏನು ಎನ್ನುವುದು ಬೆಳಕಿಗೆ ಬರಬೇಕಿದೆ.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938