MUST READ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೊಳಗಾದ ಕಾಂಗ್ರೆಸ್ ನ ಟಾಪ್ 7 ಕ್ರಿಮಿನಲ್ ಪ್ರಕರಣಗಳು!ಬೆಂಗಳೂರು: ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೇಳಿಬರುತ್ತಿರುವುದರಿಂದ ಪಕ್ಷಕ್ಕೆ ತೀವ್ರ ಮುಜುಗರವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಿನ್ನಡೆಯಾಗುವ ಆತಂಕವೂ ಕಾಡುತ್ತಿದೆ. ಕ್ರಿಮಿನಲ್ ಪ್ರಕರಣಗಳ ಹಿಂದೆ ರಾಜಕೀಯ ಹುನ್ನಾರ ಇದೆ ಎಂಬ ಆರೋಪ ಇದೆಯಾದರೂ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೆ ಸಿಬಿಐ ಮತ್ತು ಪೊಲೀಸ್ ತನಿಖೆಗಳು ಭಾರೀ ಇರಿಸುಮುರಿಸು ಉಂಟು ಮಾಡಿವೆ. 01. ಕೆಜಿಹಳ್ಳಿ ಹಾಗೂ ಡಿಜೆಹಳ್ಳಿ ಗುಂಪು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‍ನ ಬಿಬಿಎಂಪಿ ಸದಸ್ಯರಾದ ಮಾಜಿ ಮೇಯರ್ ಸಂಪತ್‍ರಾಜ್ ಹಾಗೂ ಪಾಲಿಕೆ ಮಾಜಿ ಸದಸ್ಯ ಜಾಕಿರ್ ಅವರ ಹೆಸರು ಕೇಳಿ ಬಂದಿದೆ. ಈ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಅದರಲ್ಲಿ ಈ ಇಬ್ಬರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಸಂಪತ್‍ರಾಜ್ ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರೆ, ಜಾಕಿರ್ ಕೂಡ ತಲೆ ಮರೆಸಿಕೊಂಡಿದ್ದಾರೆ. 02. ಇನ್ನು ಧಾರವಾಡದ ಕಾಂಗ್ರೆಸ್‍ನ ಪ್ರಭಾವಿ ನಾಯಕ ವಿನಯ್‍ಕುಲಕರ್ಣಿ ಬಿಜೆಪಿಯ ಜಿಪಂ ಸದಸ್ಯಯೋಗೇಶ್‍ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದಾರೆ. ವಿನಯ್ ಕುಲಕರ್ಣಿ ಅವರ ಬಂಧನದ ಹಿಂದೆ ರಾಜಕೀಯವಿದೆ ಎಂಬ ಆರೋಪಗಳಿವೆ. ಯೋಗೇಶ್‍ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿತ್ತು. 03. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಕೂಡ ಸಲ್ಲಿಕೆಯಾಗಿತ್ತು. ಎಫ್‍ಐಆರ್‍ನಲ್ಲಾಗಲಿ, ದೋಷಾರೋಪಣ ಪಟ್ಟಿಯಲ್ಲಾಗಲಿ ವಿನಯ್‍ಕುಲಕರ್ಣಿ ಅವರ ಹೆಸರು ಇರಲಿಲ್ಲ. ರಾಜಕೀಯ ಒತ್ತಡದಿಂದಾಗಿ ಸಿಬಿಐ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದೆ ಎಂದು ಕಾಂಗ್ರೆಸಿಗರು ಆರೋಪಿಸುತ್ತಿದ್ದಾರೆ.ಸತ್ಯಾಂಶ ಏನೇ ಇದ್ದರೂ ಸದ್ಯ ಸಿಬಿಐ ವಿಚಾರಣೆಯಿಂದ ಕಾಂಗ್ರೆಸ್‍ಗೆ ಮುಜುಗರವಾಗಿರುವುದಂತೂ ನಿಜ. 04. ಇನ್ನು ಬಹುಕೋಟಿ ಹಗರಣ ಎಂದೇ ಬಿಂಬಿಸಲಾಗಿರುವ ಐಎಂಎ ಪ್ರಕರಣದಲ್ಲೂ ಕೂಡ ಸಿಬಿಐ ತನಿಖೆ ನಡೆಯುತ್ತಿದೆ. ಸಾವಿರಾರು ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಐಎಂಎ ಆಡಳಿತ ಮಂಡಳಿಯ ಪ್ರಮುಖರಷ್ಟೇ ಅಲ್ಲದೆ ಕಾಂಗ್ರೆಸ್‍ನ ಕೆಲವು ಪ್ರಭಾವಿಗಳ ಹೆಸರೂ ಕೇಳಿ ಬರುತ್ತಿದೆ.

05. ಐಪಿಎಸ್, ಐಎಎಸ್ ಅಧಿಕಾರಿಗಳ ಹೆಸರೂ ಕೂಡ ಇದೆ. ಐಎಂಎ ಪ್ರಕರಣದಲ್ಲಿ ತನಿಖೆ ಇನ್ನೂ ಚುರುಕುಗೊಂಡಿಲ್ಲ. ಒಂದು ವೇಳೆ ಸಿಬಿಐ ತನಿಖೆಯ ವೇಗ ಹೆಚ್ಚಿಸಿದರೆ ಅದರಲ್ಲಿ ಬಹಳಷ್ಟು ಮಂದಿ ಕಾಂಗ್ರೆಸಿಗರು ವಿಚಾರಣೆ ಎದುರಿಸಬೇಕಾಗುತ್ತದೆ. ಜೈಲು ಪಾಲಾಗುವ ಆತಂಕವೂ ಇದೆ. ಚುನಾವಣೆ ಸಂದರ್ಭದಲ್ಲೆನಾದರು ಬಂಧನದ ಪ್ರಕ್ರಿಯೆಗಳು ನಡೆದರೆ ಕಾಂಗ್ರೆಸ್‍ಗೆ ದೊಡ್ಡ ಹೊಡೆತವೇ ಬೀಳಲಿದೆ. 06. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಹಠಕ್ಕೆ ಬಿದ್ದಂತೆ ಮುಗಿ ಬಿದ್ದಿವೆ. ಸರಿಯಾಗಿ ಚುನಾವಣಾ ಕಾಲದಲ್ಲೇ ದಾಳಿಯಾಗುತ್ತಿವೆ. ಶೋಧಾ ಕಾರ್ಯಾಚರಣೆ ನಡೆಯುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗುತ್ತಿದೆ. 07. ಡಿ.ಕೆ.ಶಿವಕುಮಾರ್ ವಿರುದ್ಧ ನಡೆಯುತ್ತಿರುವ ತನಿಖೆ ಮತ್ತು ಕಾರ್ಯಾಚರಣೆಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬ ಆರೋಪಗಳು ವ್ಯಾಪಕವಾಗಿದ್ದು, ಜನಸಾಮಾನ್ಯರೂ ಕೂಡ ಪ್ರತಿಭಟನೆ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಕರಣಗಳ ವಾಸ್ತವತೆ ಏನೇ ಇದ್ದರೂ ಪ್ರತಿ ಬಾರಿ ವಿಚಾರಣೆ ಮತ್ತು ಬಂಧನಗಳಾದಾಗ ಕಾಂಗ್ರೆಸ್ ಆರೋಪಿ ಸ್ಥಾನದಲ್ಲೇ ನಿಲ್ಲುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದ ಟೀಕೆಗಳು ವ್ಯಕ್ತವಾಗುತ್ತದೆ. ಅದಕ್ಕೆ ಉತ್ತರ ನೀಡಲಾಗದೆ ಕಾರ್ಯಕರ್ತರು ಪರದಾಡುವಂತಾಗಿದೆ. ರಾಜಕೀಯ ದ್ವೇಷಗಳಿಗೆ ಮುಂದಿನ ದಿನಗಳಲ್ಲಿ ನಾವು ಅಧಿಕಾರಕ್ಕೆ ಬಂದಾಗ ತಕ್ಕ ಉತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳು ಹೇಗೋ ಏನೋ ಸದ್ಯಕ್ಕಂತೂ ನಮಗೆ ಮುಜುಗರದಿಂದ ಪಾರಾಗಲಾಗುತ್ತಿಲ್ಲ ಎಂದು ಕಾಂಗ್ರೆಸಿಗರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938