‘ಮೋದಿ’ ಹೆಸರಿನ ಈ ಕುರಿ ; ಈ ಕುರಿಯ ಬೆಲೆ ಕೇಳಿದರೆ ಒಂದು ಕ್ಷಣ ದಂಗಾಗೋದು ಖಂಡಿತ!



ಸಾಂಗ್ಲಿ: ಈ ಚಿತ್ರದಲ್ಲಿ ಕಾಣುತ್ತಿರುವ ಕುರಿ ಸಾಮಾನ್ಯವಾಗಿ ಎಲ್ಲ ಕುರಿಗಳಿಗಿಂತಲೂ ಭಿನ್ನವಾದದ್ದು. ನೋಡಲು ತುಂಬಾ ಆಕರ್ಷಕ, ಸುಂದರ ಆಗಿರುವುದು ಮಾತ್ರವಲ್ಲದೇ ಇದರ ಗುಣಮಟ್ಟವೂ ಉತ್ಕೃಷ್ಟವಾಗಿದ್ದು, ಸಂತಾನೋತ್ಪತ್ತಿಯಲ್ಲಿಯೂ ಎತ್ತಿದ ಕೈ. ನೋಡಲು ಇತರ ಕುರಿಗಳಿಂತಲೂ ದಪ್ಪವಾಗಿ, ಎತ್ತರವಾಗಿ, ಮಾಂಸದಲ್ಲಿಯೂ ಅಷ್ಟೇ ಗುಣಮಟ್ಟದ್ದುಳ್ಳದ್ದಾಗಿರುವ ಈ ಕುರಿಯೀಗ ಭಾರಿ ಸುದ್ದಿ ಮಾಡುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಡ್ಗ್ಯಾಲ್ ತಳಿಯ ಕುರಿ ಇದಾಗಿದೆ. ಈ ಕುರಿಯನ್ನು 70 ಲಕ್ಷ ರೂಪಾಯಿ ಕೊಟ್ಟು ಗ್ರಾಹಕರೊಬ್ಬರು ಮಾಲೀಕನಿಂದ ಖರೀದಿ ಮಾಡಿಕೊಂಡು ಹೋಗಿದ್ದಾರೆ. ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತಹಸೀಲ್‌ನ ಬಾಬು ಮೆಟ್ಕಾರಿ ಇದರ ಮಾಲೀಕ. ಈ ಕುರಿಗೆ ಈತ ಆರಂಭದಲ್ಲಿ ಇಟ್ಟಿದ್ದ ಹೆಸರು ಸರ್ಜಾ. ನಂತರ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಕ್ಕೆ ಒಳಗಾಗಿ, ಅವರ ಕಾರ್ಯವೈಖರಿಯನ್ನು ಮೆಚ್ಚಿದ ಈತ ತನ್ನ ಅತ್ಯಂತ ಪ್ರಿಯವಾಗಿರುವ ಈ ಕುರಿಗೂ ಮೋದಿ ಎಂದು ಮರುನಾಮಕರಣ ಮಾಡಿದ್ದ.

ಯಾವುದೇ ಕಾರಣಕ್ಕೂ ಈ ಕುರಿಯನ್ನು ಮಾರಾಟ ಮಾಡಲು ಆತನಿಗೆ ಇಷ್ಟವಿರಲಿಲ್ಲವಂತೆ. ಇದು ನನ್ನ ಅದೃಷ್ಟದ ಕುರಿ’. ಮಾರಾಟ ಮಾಡುವುದು ಸಾಧ್ಯವೇ ಇಲ್ಲ ಎಂದು ತಮ್ಮ ಬಳಿಯೇ ಇಟ್ಟುಕೊಂಡಿದ್ದ. ಅಷ್ಟರಲ್ಲಿಯೇ ವ್ಯಕ್ತಿಯೊಬ್ಬರು ಬಂದು ಈ ಕುರಿಯನ್ನು ಸಾಕುವುದಕ್ಕಾಗಿ ತಮಗೆ ನೀಡಲೇಬೇಕೆಂದು ಕೋರಿದ್ದಾರೆ. ಆದರೆ ಇದೇ ತಳಿಯ ಬೇರೆ ಕುರಿಗಳು ಇರುವ ಕಾರಣ, ಈ ಕುರಿಯನ್ನು ಮಾತ್ರ ತಾನು ನೀಡುವುದೇ ಇಲ್ಲ ಎಂದಿದ್ದಾನೆ ಬಾಬು. ಆದರೆ ಆ ಗ್ರಾಹಕ ತುಂಬಾ ಒತ್ತಾಯ ಮಾಡಿದಾಗ ಈತ ಒಂದೂವರೆ ಕೋಟಿ ರೂಪಾಯಿ ಬೆಲೆ ಹೇಳಿದ್ದಾನೆ. ಅಷ್ಟೊಂದು ಹಣ ಕೊಟ್ಟು ಯಾರೂ ಖರೀದಿ ಮಾಡುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಅಷ್ಟು ಬೆಲೆ ಹೇಳಿದೆ. ಆದರೆ ಕೊನೆಯದಾಗಿ ಆ ಗ್ರಾಹಕ ನನಗೆ 70 ಲಕ್ಷ ರೂಪಾಯಿ ಕೊಡಲು ಮುಂದಾದರು, ನಾನು ಕನಸು ಮನಸಿನಲ್ಲಿಯೂ ಇಷ್ಟೊಂದು ಹಣ ಯೋಚಿಸಿರಲಿಲ್ಲ ಎನ್ನುತ್ತಾನೆ ಬಾಬು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಮುಕ್ತ ಮಾರುಕಟ್ಟೆಯಿಂದಾಗಿ ನನಗೆ ಈ ಲಾಭ ಸಿಕ್ಕಿದೆ, ಇದಕ್ಕಾಗಿ ನಾನು ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಶ್ಲಾಘಿಸಬೇಕಿದೆ ಎಂದು ಸರ್ಕಾರದ ಯೋಜನೆಯನ್ನು ಕೊಂಡಾಡಿದ್ದಾನೆ ಬಾಬು. ಹಲವಾರು ದಶಕಗಳಿಂದ ಈ ತಳಿಯ ಕುರಿಯ ಸಾಕಾಣಿಕೆ ಮಾಡುತ್ತಿದ್ದಾನೆ ಬಾಬು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಟ್‌ ತಹಸೀಲ್‌ನ ಮಡ್​ಗ್ಯಾಲ್​ ಹಳ್ಳಿಯ ಸುತ್ತಮುತ್ತ ಈ ವಿಶಿಷ್ಟ ಸ್ಥಳೀಯ ತಳಿಯ ಕುರಿಗಳು ಸಾಕಾಣಿಕೆ ಮಾಡುತ್ತಾರೆ. ಈ ತಹಸೀಲ್‌ನ ಸುತ್ತಮುತ್ತ ಬಹಳಷ್ಟು ಮಂದಿ ಈ ತಳಿ ಸಾಕಾಣೆದಾರರಿದ್ದಾರೆ. ಅದಕ್ಕಾಗಿಯೇ ಈ ತಳಿಗಳಿಗೆ ಮಡ್​ಗ್ಯಾಲ್​ ಹೆಸರನ್ನೇ ಇಡಲಾಗಿದೆ. ಇದೀಗ ಈ ಪರಿಯ ಬೆಲೆಯನ್ನು ಕಂಡು ಖುದ್ದು ಮಹಾರಾಷ್ಟ್ರ ಕುರಿ ಮತ್ತು ಆಡು ಅಭಿವೃದ್ಧಿ ನಿಗಮವೇ ದಂಗಾಗಿದೆ. ಈಗ ಈ ತಳಿಯ ಕುರಿಗಳ ಅಭಿವೃದ್ಧಿಗೆ ತಾವು ಮುಂದಾಗಿರುವುದಾಗಿ ಅದರ ಸಹಾಯಕ ನಿರ್ದೇಶಕ ಡಾ.ಸಚಿನ್​ ಟೆಕಡೆ ಹೇಳಿದ್ದಾರೆ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/