ಡಿಸಿಎಂ ಕಾರಜೋಳ ಕಾಂಗ್ರೆಸ್‌ಗೆ? ಎಸ್.ಎಸ್. ಮಲ್ಲಿಕಾರ್ಜುನ್ ಹೆಣೆದ ಬಲೆ!ಡಿಸಿಎಂ ಕಾರಜೋಳ ಕಾಂಗ್ರೆಸ್‌ಗೆ ಬಂದು ಬೆಂಬಲಿಸಲಿ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕೂಡ ಸಿಎಂ ಕುರ್ಚಿಗಾಗಿ ಇಣುಕಿ ನೋಡುತ್ತಾರೆಂಬ ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆಗೆ, ನೀವು ಕಾಂಗ್ರೆಸ್‌ಗೆ ಬಂದು ನಮ್ಮತಂದೆ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಲು ಬೆಂಬಲ ನೀಡಲಿ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರಜೋಳಗೆ ಟಾಂಗ್ ನೀಡಿದರು.

ಎಲ್ಲರಿಗೂ ಸಿಎಂ ಆಗಬೇಕೆಂದು ಆಸೆ ಇರುತ್ತದೆ. ನಮ್ಮ ತಂದೆ ರಾಜಕಾರಣಕ್ಕೆ ಪ್ರವೇಶ ಮಾಡಿದೇ ಕಾಂಗ್ರೆಸ್ ಪಕ್ಷದಿಂದ. ಹಲವು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದಾರೆ. ಸಿಎಂ ಆಗಲು ಎಲ್ಲರಿಗೂ ಆಸೆ ಇರುತ್ತದೆ. ನನಗೂ ಆಸೆಯಿದೆ. ಚುನಾವಣೆಯಲ್ಲಿ ನಿಲ್ಲದವರನ್ನೂ ಮಂತ್ರಿ ಮಾಡಿರುವ ಉದಾಹರಣೆ ಕಾಂಗ್ರೆಸ್ ಪಕ್ಷಕ್ಕಿದೆ. ಹಾಗೊಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ನ ಹಿರಿಯ ಶಾಸಕರಾದ ನಮ್ಮತಂದೆ ಡಾ.ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಆಗಲು ಡಿಸಿಎಂ ಆಗಿರುವ ಗೋವಿಂದ ಕಾರಜೋಳ ಪಕ್ಷಕ್ಕೆ ಸೇರಿ ಬೆಂಬಲ ಕೊಡುತ್ತಾರೆಯೇ ಎಂದರು.

ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಈಗ ಬೇಡ, ಪಕ್ಷ ಮೊದಲು ಅಧಿಕಾರಕ್ಕೆ ಬರಲಿ. ಕಾಂಗ್ರೆಸ್‌ನಲ್ಲಿ ಜಾತಿ ರಾಜಕಾರಣವಿಲ್ಲ. ಗೆದ್ದವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ಪಕ್ಷದ ಹೈಕಮಾಂಡ್ ಮತ್ತು ಶಾಸಕರು ನಿರ್ಧರಿಸುತ್ತಾರೆ. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಬಿಜೆಪಿಗೆ ಚಾಟಿ ಬೀಸಿದರು.