ಆಕ್ಸಿಜನ್ ಕಳ್ಳ ಕೇಜ್ರಿವಾಲ್? ಕೇಂದ್ರ ಸರಕಾರಕ್ಕೆ ಮಸಿ ಬಳಿಯುವ ದೆಹಲಿ ಸಿಎಂ ಪ್ರಯತ್ನ ವಿಫಲ!ಕೊರೋನಾ ಹೆಮ್ಮಾರಿ ಎರಡನೇ ಅಲೆ ಮಿತಿಮೀರಿದ್ದಾಗ ದೆಹಲಿಯ ಕೇಜ್ರಿವಾಲ್ ಸರ್ಕಾರ ಕೇಂದ್ರದಿಂದ ಆಕ್ಸಿಜನ್ ಪೂರೈಕೆಗೆ ಹೆಚ್ಚು ಬೇಡಿಕೆಯಿಟ್ಟಿತ್ತು. ಕೇಂದ್ರ ಸರಕಾರ ಆಕ್ಸಿಜನ್ ಕೊರತೆಯಿಂದ ಸಂಪೂರ್ಣ ಆಕ್ಸಿಜನ್ ಪೂರೈಸಲಿಲ್ಲ.

ಆದರೆ ಕೇಜ್ರಿವಾಲ್ ಕೇಂದ್ರಕ್ಕೆ ಸುಳ್ಳು ಮಾಹಿತಿ ನೀಡಿ ಕೇಂದ್ರ ಸರಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂಬುದು ಸಾಬೀತಾಗಿದೆ.

ಕೊರೋನಾ ಎರಡನೇ ಅಲೆ ಮಿತಿಮೀರಿದ್ದಾಗ ದೆಹಲಿಯ ಕೇಜ್ರಿವಾಲ್ ಸರ್ಕಾರ ಕೇಂದ್ರದಿಂದ ಆಕ್ಸಿಜನ್ ಪೂರೈಕೆಗೆ ಅಗತ್ಯಕ್ಕಿಂತ ಹೆಚ್ಚು ಬೇಡಿಕೆಯಿಟ್ಟಿತ್ತು. ಅಗತ್ಯಕ್ಕಿಂತ ನಾಲ್ಕು ಪಟ್ಟು ಅಧಿಕ ಆಕ್ಸಿಜನ್ ಬೇಕೆಂದು ಕೇಜ್ರಿವಾಲ್ ಸರ್ಕಾರ ಸುಳ್ಳು ಮಾಹಿತಿ ನೀಡಿತ್ತು ಎನ್ನುವುದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯ ತನಿಖೆಯಿಂದ ಬಹಿರಂಗವಾಗಿದೆ.. ಸುಳ್ಳು ಮಾಹಿತಿ ನೀಡಿ, ದೇಶದ ದಿಕ್ಕು ತಪ್ಪಿಸುತ್ತಾ ಸಾವಿರಾರು ಜನರ ಸಂಕಷ್ಟಕ್ಕೆ ಕಾರಣವಾದ ಅರವಿಂದ್ ಕೇಜ್ರೀವಾಲ್ ಎನ್ನುವ ನಾಲಾಯಕನ ಮುಖವಾಡ ಮತ್ತೊಮ್ಮೆ ರಾಷ್ಟ್ರದೆದುರು ಬೆತ್ತಲಾಗಿದೆ… ಕೇಜ್ರಿವಾಲ್ ಎಂದಿಗೂ ಈ ದೇಶಕ್ಕೆ ಅಪಾಯಕಾರಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.