ಯಡಿಯೂರಪ್ಪಾ ಜಗ್ಗುವುದಿಲ್ಲ.! ಡಿಕೆಶಿ ಕೊಟ್ಟ ಸುಳಿವೇನು?ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆ ಹೇಳಿಕೆ ಹಿಂದೆ ಬೇರೆಯದೇ ತಂತ್ರ ಇದೆ. ಅವರು ಅಷ್ಟು ಸಲೀಸಾಗಿ ಜಗ್ಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಅಂತಿಮ ದಿನಗಳು ಹತ್ತಿರವಾಗಿವೆ ಎಂದೂ ಅವರು ಹೇಳಿದ್ದಾರೆ. ಯಡಿಯೂರಪ್ಪ ಅವರು ಗಟ್ಟಿ ನಾಯಕ. ಅವರ ನಾಯಕತ್ವದಲ್ಲಿ ಚುನಾವಣೆ ನಡೆದಿದೆ. ಅಷ್ಟು ಸಲೀಸಾಗಿ ಅವರು ಜಗ್ಗಲ್ಲ, ಅವರ ಹೇಳಿಕೆ ನನ್ನನ್ನು ಮುಟ್ಟಿ ನೋಡಿ ಅಂತಾ ಎಚ್ಚರಿಕೆ ಇರಬಹುದು. ನಾನು ಶಿಸ್ತಿನ ಸಿಪಾಯಿ ಅಂತಾನೂ ಇರಬಹುದು. ಏನಾಗುತ್ತದೆಯೋ ನೋಡೋಣ ಎಂದರು. ಆಡಳಿತ ವೈಫಲ್ಯ, ಆಂತರಿಕ ಬಿಕ್ಕಟ್ಟು ಹೆಸರಿನಲ್ಲಿ ಏಳೆಂಟು ನಾಯಕರು ತಾವೇ ಮುಖ್ಯಮಂತ್ರಿ ಆಗಬೇಕು ಅಂತಾ ಸಿದ್ದವಾಗಿದ್ದಾರೆ ಎನ್ನುವ ಪರಿಸ್ಥಿತಿ ಬಂದಿದೆ.

ಮುಂದೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎನ್ನುವವರು, ಹಿಂದೆ ತಾವೇ ಸೂಟ್ ಹೊಲಿಸಿ, ಮುಹೂರ್ತ ಇಟ್ಟುಕೊಂಡು ರೆಡಿಯಾಗಿದ್ದಾರೆ. ದುರ್ದೈವ ಏನೆಂದರೆ, ಬಿಜೆಪಿಯವರು ಶಿಸ್ತು ಕಳೆದುಕೊಂಡಿದ್ದಾರೆ. ಇದರ ಜತೆಗೆ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿಗೆ ಅಂತಿಮ ದಿನಗಳು ಹತ್ತಿರವಾಗಿವೆ ಎಂದರು ರಾಜ್ಯ ಬಿಜೆಪಿಯನ್ನು ಸಹ ಟೀಕಿಸಿದ್ದಾರೆ.

ಇದನ್ನೂ ಓದಿ :  ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲಾಂದ್ರೆ ಯಡಿಯೂರಪ್ಪ ಇಲ್ಲ:ಕಾಂಗ್ರೆಸ್ ಶಾಸಕ

ಬಿಎಸ್‌ವೈ ಗಟ್ಟಿ ಮನುಷ್ಯ, ಸಲೀಸಾಗಿ ಅವರು ಜಗ್ಗಲ್ಲ ಎಂದು ಡಿಕೆಶಿ ಒತ್ತಿ ಒತ್ತಿ ಹೇಳಿದರು.

ನಾಯಕರ ದೆಹಲಿ ಪ್ರವಾಸ, ಸಿಎಂ ಪರ,ವಿರೋಧ ಹೇಳಿಕೆಗಳು ರಾಜ್ಯದ ರಾಜಕಾರಣದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದಾರೆ ಆದರೆ ರಾಜ್ಯ ನಾಯಕರ ಕಸರತ್ತು ಎಲ್ಲಿಗೆ ಹೋಗಿ ತಲುಪಲಿದೆ ಎಂದು ಕಾದು ನೋಡಬೇಕಿದೆ.