ವೀಡಿಯೋ ನೋಡಿ ; ಹಿಂದೂ ಸಂಘಟನೆ ಪ್ರತಿಭಟನೆ ವೇಳೆ ರಾಷ್ಟ್ರಗೀತೆ ಹೇಳಿದ ಮಹಿಳಾ ಪೊಲೀಸ್ ಅಧಿಕಾರಿಚಾಮರಾಜನಗರ: ಚಾಮರಾಜನಗರದಲ್ಲಿ ಕ್ರೈಸ್ತ ಮಿಷನರಿಗಳು ಮಾಡುತ್ತಿರುವ  ಮತಾಂತರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಗಳಾದ ಮಾನ್ಯ ಜಗದೀಶ್ ಕಾರಂತ್ ರವರು ದಿಕ್ಸೂಚಿ ಭಾಷಣ ಮಾಡಿದರು. ಸಭಾಕಾರ್ಯಕ್ರಮಕ್ಕೂ ಮೊದಲು ನಗರದ ಮಾರಿಗುಡಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದ ಮೂಲಕ ಜಿಲ್ಲಾಡಳಿತ ಭವನದ ತನಕ ಜಾಗೃತಿ ಜಾಥಾ ಜರುಗಿತು. ಸಾವಿರಾರು ಹಿಂದುಗಳು ಮೆರವಣಿಗೆಯಲ್ಲಿ ಮತಾಂತರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆ’ಕ್ರೋಶ ವ್ಯಕ್ತಪಡಿಸಿದರು. ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಗೇಟ್ ಮುಂಭಾಗದ ಜೋಡಿರಸ್ತೆಯಲ್ಲಿ ಜಮಾಯಿಸಿದರು. ಬಳಿಕ ಗೇಟ್ ಮೂಲಕ ಜಿಲ್ಲಾಡಳಿತ ಭವನದ ಆವರಣಕ್ಕೆ ಪ್ರತಿಭಟನಾಕಾರರು ಪ್ರವೇಶಿಸಿದರು. ನಂತರ ಅವರನ್ನು ಹಿಂಬಾಲಿಸಿ ಮೈಕ್ ಇರುವ ವಾಹನವೂ ಪ್ರವೇಶ ಮಾಡಲು ಯತ್ನಿಸಿತು. ಆದರೆ ಈ ವಾಹನ ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರು ವಾಹನ ಅಡ್ಡಗಟ್ಟಿದರು.

ADVERTISEMENT

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ತಳ್ಳಾಟ ನೂಕಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಅವರು ತಮ್ಮ ವಾಹನದಲ್ಲಿದ್ದ ಮೈಕ್ ಹಿಡಿದು ರಾಷ್ಟ್ರಗೀತೆ ಹಾಡಲು ಶುರು ಮಾಡಿದರು. ರಾಷ್ಟ್ರಗೀತೆ ಕೇಳುತ್ತಿದ್ದಂತೆ ಪ್ರತಿಭಟನಾಕಾರರು ತಾವೂ ಸಹ ರಾಷ್ಟ್ರಗೀತೆ ಹಾಡುತ್ತಾ ವಾಗ್ವಾದ, ತಳ್ಳಾಟ ನೂಕಾಟ, ನಿಲ್ಲಿಸಿದರು. ಈ ವೇಳೆ ಪರಿಸ್ಥಿತಿ ತಣ್ಣಗಾಯ್ತು. ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಮಾಡಿದ ಪ್ಲಾನ್ ಸಕ್ಸಸ್ ಆಯಿತು. ಚಾಮರಾಜನಗರ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ಮತಾಂತರವನ್ನು ವಿರೋಧಿಸಿ ಮತಾಂತರ ವಿರೋಧಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಿಂದೂಪರ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/