ಈಶ್ವರಪ್ಪ ಮತ್ತೆ ಸಿಡಿಮಿಡಿಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಬುದ್ದಿ ಇಲ್ಲ. ಸಿದ್ದರಾಮಯ್ಯ ಅವರು ಸಮರ್ಥ ವಿಪಕ್ಷ ನಾಯಕರಾಗುವಲ್ಲಿಯೂ ವಿಫಲರಾಗಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷ ಟೀಕೆ ಮಾಡುವುದರಲ್ಲಿಯೂ ಕಾಂಗ್ರೆಸ್ಸಿಗರು ವಿಫಲರಾಗಿದ್ದಾರೆ. ಹಾಗಾಗಿ, ದೇಶದಲ್ಲಿ ದಿನೇ ದಿನೇ ಕಾಂಗ್ರೆಸ್ ನಾಶವಾಗುತ್ತಿದೆ ಎಂದರು. ಪ್ರಧಾನಿ ಮೋದಿ ದೇಶಾದ್ಯಂತ ಉಚಿತ ಲಸಿಕೆ ನೀಡುವ ಮೂಲಕ ವಿಶ್ವದಲ್ಲಿಯೇ ಅತ್ಯುತ್ತಮ ಪ್ರಧಾನಿ ಎನಿಸಿದ್ದಾರೆ.

ಅಲ್ಲದೆ, ಇಡೀ ದೇಶದ ಜನಕ್ಕೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದ ಮೊದಲ ಪ್ರಧಾನಿ ಕೂಡಾ. ಇದಲ್ಲದೆ ರೇಷನ್ ನೀಡುವುದಾಗಿಯೂ ಹೇಳಿದ್ದಾರೆ. ಇಂತಹ ಪ್ರಧಾನಿಯನ್ನು ಪಡೆದ ನಾವೇ ಭಾಗ್ಯ ಶಾಲಿಗಳು ಎಂದರು. ಆದರೆ, ಕಾಂಗ್ರೆಸ್ ನಾಯಕರು ಲಸಿಕೆಗೆ ಸಂಬಂಧಿಸಿದಂತೆ ಅರ್ಥವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಲಸಿಕೆ ಬಂದಾಗ ಇದೇ ಕಾಂಗ್ರೆಸ್ ನಾಯಕರು ಲಸಿಕೆ ಹಾಕಿಸಿಕೊಳ್ಳಬೇಡಿ ಅದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲ ಟೀಕೆ ಮಾಡಿದ್ದರು. ಈಗ ಇದೇ ನಾಯಕರು ಲಸಿಕೆ ಬೇಕು ಎನ್ನುತ್ತಿದ್ದಾರೆ.

ಹಾಗಾಗಿ, ಅವರು ಸರ್ಕಾರವನ್ನು ಟೀಕಿಸುವುದರಲ್ಲಿಯೂ ವಿಫಲರಾಗಿದ್ದಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ವಿಫಲವಾಗಿತ್ತು. ಈಗ ಟೀಕಿಸುವುದಕ್ಕೂ ಅವರಿಗೆ ಬರುತ್ತಿಲ್ಲ ಎಂದು ಲೇವಡಿ ತಿಂಗಳವರೆಗೂ ಉಚಿತವಾಗಿ ಪಡಿತರ ಅಪರೂಪದ ಮಾಡಿದರು.