ರಾಜ್ಯ ಕಷ್ಟದಲ್ಲಿದೆ – ಕಟ್ಟಾ? ಸಿಎಂ ಬಿಎಸ್‌ವೈ ಬಗ್ಗೆ ಸುಳಿವು ಕೊಟ್ಟ ಮಾಜಿ ಸಚಿವ?ಬೆಂಗಳೂರು:
ಹಲವಾರು ನಾಯಕರು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಯುಡಿಯೂರಪ್ಪನವರ ಜೊತೆ ನಾವಿದ್ದೇವೆ.ನಮ್ಮ ಇಂದಿನ ನಾಯಕ, ಮುಂದಿನ ನಾಯಕ ಯುಡಿಯೂರಪ್ಪನವರೇ, ಹಾಗೂ ಇದೇ ನಮ್ಮ ರಾಜಾಹುಲಿ ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಾಯಕರು ಸುದ್ದಿಗಾರರೊಂದಿಗೆ ತಮ್ಮ-ತಮ್ಮ ಹೇಳಿಕೆಗಳನ್ನು ವ್ಯಕ್ತಪಡಿಸಿ ಯುಡಿಯೂರಪ್ಪನವರಿಗೆ ಬೆಂಬಲ ಸೂಚಿಸಿದರು.

ರಾಜ್ಯ ಕಷ್ಟದಲ್ಲಿದೆ, ಸಿಎಂ ಬಿಎಸ್‌ವೈ ಬದಲಾವಣೆಯೇ ಅವಶ್ಯಕತೆಯೇಯಿಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯಿಂದ ಅಪಾರ ಆಘಾತ ಉಂಟಾಗಿದೆ. ಯಾವ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯ ಸಂಕಷ್ಟದಲ್ಲಿರುವ ಇಂತಹ ಸಂಧರ್ಭದಲ್ಲಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಹೇಳಿದ್ದಾರೆ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುವೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿ ಕ್ರಿಯಿಸಿರುವ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಉತ್ತಮ ವಿಚಾರವಲ್ಲ. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಎರಡಕ್ಕೂ ಅಂತಹ ಬೆಳವಣಿಗೆ ಒಳ್ಳೆಯದಲ್ಲ. ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ಸಮಯದಲ್ಲಿ ಈ ಚರ್ಚೆ ಏಕೆ ಬರುತ್ತೆಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ :  ಬಿಎಸ್ ವೈ ಮೇಲೆ ಮತ್ತೆ ಅಸಮಾಧಾನದ ಹೊಗೆ