ವಿಶ್ವನಾಥ್‍ಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ, ರಾಜ್ಯ ನಾಯಕರ ಕಿಡಿಎಚ್. ವಿಶ್ವನಾಥ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರು ಇತ್ತೀಚೆಗೆ ನಮ್ಮ ಪಾರ್ಟಿಗೆ ಸೇರಿದ್ದಾರೆ. ಅವರನ್ನು ಕರೆದು ನಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ತಿಳಿ ಹೇಳುತ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರಾಯಚೂರಿನಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಹಾಗೂ ಬಿಜೆಪಿ ಕಾರ್ಯಾಲಯ ಉದ್ಘಾಟನೆಗೆ ಆಗಮಿಸಿದ್ದ ಕಟೀಲ್, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಊಹಾಪೋಹಗಳ ಮೂಲಕ ನಾನು ಉತ್ತರ ಕೊಡೋಕೆ ಆಗಲ್ಲ. ಎಲ್ಲರ ಹತ್ತಿರ ನಾನೂ ಮಾತನಾಡಿದ್ದೇನೆ, ಅರುಣ್ ಸಿಂಗ್ ಮಾತನಾಡಿದ್ದಾರೆ ಎಂದರು.

ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ವಿಚಾರ ತನಿಖಾ ಹಂತದಲ್ಲಿದೆ ಸರ್ಕಾರ ಅದನ್ನ ನೋಡಿಕೊಳ್ಳುತ್ತದೆ. ನಾನು ಉತ್ತರ ಕೊಡುವುದು ಸರಿಯಲ್ಲ. ಪ್ರತಿ ಜನಪ್ರತಿನಿಧಿಗೂ ಸ್ವಾತಂತ್ರ್ಯವಿದೆ. ಅವರು ಯಾವ ಮಸೀದಿ, ದೇವಸ್ಥಾನ, ಮಠಕ್ಕೂ ಹೋಗಬಹುದು ಅಂತ ಹೇಳಿದರು. ಫಡ್ನವಿಸ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿದ ಕಟಿಲ್, ಅವರು ನಮ್ಮ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಫಡ್ನವಿಸ್-ರಮೇಶ್ ಜಾರಕಿಹೊಳಿಯದ್ದು ಸಾಮಾನ್ಯ ಭೇಟಿ ಅದಕ್ಕೆ ಬೇರೆ ಅರ್ಥಗಳನ್ನ ಕಲ್ಪಿಸುವ ಅಗತ್ಯವಿಲ್ಲ ಎಂದರು