ವೀಡಿಯೋ ನೋಡಿ ; ಸಾಂಭ ಗಡಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಸುಗಂಗ ಮಾರ್ಗ ಪತ್ತೆ, ಬೆಚ್ಚಿಬಿದ್ದ ಜನ!ನವದೆಹಲಿ: ನ.19ರಂದು ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಬಳಿ ನಡೆದ ಎನ್‌ ಕೌಂಟರ್‌ನಲ್ಲಿ ಭಾರತೀಯ ಯೋಧರ ಗುಂಡಿಗೆ ಬ’ಲಿಯಾದ ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಉ’ಗ್ರರು ಸುಮಾರು 30 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಭಾರತಕ್ಕೆ ಪ್ರವೇಶಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಎ’ನ್ಕೌಂಟರ್‌ ಬಳಿಕ ಉ’ಗ್ರರ ಬಳಿಯಿಂದ ವಶಪಡಿಸಿಕೊಂಡ ಅಪಾರ ಪ್ರಮಾಣದ ಸ್ಫೋ’ಟಕಗಳ ಜೊತೆ ಉ’ಗ್ರರ ಬಳಿ ಲಭ್ಯವಾದ ಮೊಬೈಲ್‌ನ ಸಂದೇಶಗಳು, ಜಿಪಿಎಸ್‌ ಮಾಹಿತಿ ಮತ್ತು ವೈರ್‌ಲೆಸ್‌ ಉಪಕರಣಗಳನ್ನು ಭದ್ರತಾ ಸಂಸ್ಥೆಗಳು ಆಳ ತನಿಖೆಗೆ ಒಳಪಡಿಸಿದ ವೇಳೆ ಉ’ಗ್ರರ ಹಾದಿಯ ಕುರಿತ ಸಾಕಷ್ಟುಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಇನ್ನೊಂದು ವಿಶೇಷವೆಂದರೆ ಹತರಾದ ಎಲ್ಲಾ ನಾಲ್ವರಿಗೂ ಕಮಾಂಡೋ ತರಬೇತಿ ನೀಡಲಾಗಿತ್ತು. ಜೊತೆಗೆ ಎಲ್ಲಾ ನಾಲ್ವರು ಆ’ತ್ಮಾಹುತಿ ದಾ’ಳಿಕೋರರಾಗಿದ್ದರು. ಭದ್ರತಾ ಸಂಸ್ಥೆಗಳ ಪ್ರಕಾರ, ಉ’ಗ್ರರನ್ನು ಭಾರತಕ್ಕೆ ಕಳುಹಿಸುವ ಸಂಚು ರೂಪಿಸಿದ್ದು ಜೈಷ್‌ ಸಂಘಟನೆಯ ನಾಯಕ ಅಜರ್‌ ಮಸೂದ್‌ನ ಸೋದರ ಮುಫ್ತಿ ರೌಫ್‌ ಅಸ್ಗರ್‌. ಯೋಜನೆ ಕಾರ್ಯರೂಪಕ್ಕೆ ತರುವ ಹೊಣೆ ಹೊತ್ತಿದ್ದು ಜೈಷ್‌ನ ಕಮಾಂಡರ್‌ ಕಾಸಿಂ ಜನ್‌. ಈತ 2016ರಲ್ಲಿ ಪಂಜಾಬ್‌ನ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ನಡೆದ ಉ’ಗ್ರ ದಾ’ಳಿಯ ಮುಖ್ಯ ರೂವಾರಿ ಕೂಡಾ ಹೌದು ಭಾರತಕಲಭ್ಯವಾಗಿದೆ. ಅವರರನ್ನು ಒಳನುಸುಳಿಸುವುದೇ ಈತನ ಪ್ರಮುಖ ಕೆಲಸ.

ಭಾರತದ ಗಡಿಗೆ ಹೊಂದಿಕೊಂಡಿರುವ ಪಾಕಿಸ್ತಾನ ಶಕರ್‌ಗಢ ಪಟ್ಟಣದ ಹೊರವಲಯದಲ್ಲಿ ಜೈಷ್‌ ಉ’ಗ್ರ ಸಂಘಟನೆಯ ತರಬೇತಿ ಕ್ಯಾಂಪ್‌ ಇದೆ. ಇಲ್ಲಿ ನಾಲ್ವರಿಗೂ ಕಮಾಂಡೋ ತರಬೇತಿ ಕೊಟ್ಟಬಳಿಕ ದೀಪಾವಳಿ ಅಮಾವಾಸ್ಯೆಯ ಸಮಯದಲ್ಲಿ ಕಾಶ್ಮೀರದ ಕಡೆಗೆ ಕಳುಹಿಸಲಾಗಿತ್ತು. ಅಲ್ಲಿಂದ ದುರ್ಗಮ ಅರಣ್ಯವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ ಉ’ಗ್ರರು, ಕಾಶ್ಮೀರದ ಸಾಂಬಾ ವಲಯದಲ್ಲಿ ಬರುವ ಮವಾ ಎಂಬ ಗ್ರಾಮದ ಮೂಲಕ ಭಾರತ ಪ್ರವೇಶಿಸಿದ್ದಾರೆ. ಗಡಿಯಲ್ಲಿ ಭಾರೀ ಕಣ್ಗಾವಲು ಇರುವ ಕಾರಣ ಸುಮಾರು 150 ಮೀಟರ್‌ ಉದ್ದ ಕಳ್ಳ ಸುರಂಗದ ಮೂಲಕ ಇವರೆಲ್ಲಾ ಭಾರತದ ಗಡಿಯೊಳಗೆ ನುಗ್ಗಿಬಂದಿದ್ದಾರೆ. ಹೀಗೆ ಜಮ್ಮುವಿನ ಸಾಂಬಾಕ್ಕೆ ಬಂದ ಉ’ಗ್ರರು ಮುಂದೆ ಅಲ್ಲಿಂದ ತಮ್ಮನ್ನು ಕರೆದೊಯ್ಯಲು ಸಿದ್ಧವಾಗಿದ್ದ ಲಾರಿ ಏರಲು ಜಟ್ವಾಲ್‌ ಎಂಬ ಪಟ್ಟಣಕ್ಕೆ ನಡೆದೇ ಬಂದಿದ್ದಾರೆ. ಅಂದರೆ ಶಕರ್‌ಗಡ ಮತ್ತು ಜಟ್ವಾಲ್‌ ನಡುವಿನ 30 ಕಿ.ಮೀ ದೂರವನ್ನು ಉ’ಗ್ರರು ನಡೆದೇ ಬಂದಿದ್ದಾರೆ. ಹೀಗೆ ಬಂದ ಉ’ಗ್ರರು ಮಧ್ಯರಾತ್ರಿ 2.30ರ ವೇಳೆಗೆ ಜಟ್ವಾಲ್‌ನಲ್ಲಿ ಭಾರೀ ಪ್ರಮಾಣದ ಶ’ಸ್ತ್ರಾಸ್ತ್ರಗಳೊಂದಿಗೆ ಲಾರಿ ಏರಿ ಕಾಶ್ಮೀರದ ಕಡೆಗೆ ಹೊರಟಿದ್ದಾರೆ. ಆದರೆ ಉ’ಗ್ರರ ಆಗಮನದ ಕುರಿತು ಖಚಿತ ಮಾಹಿತಿ ಹೊಂದಿದ್ದ ಭದ್ರತಾ ಪಡೆಗಳು ಮುಂಜಾನೆ 4.45ರ ವೇಳೆಗೆ ಬಾನ್‌ ಟೋಲ್‌ಗೇಟ್‌ ಬಳಿ ಅಡ್ಡಗಟ್ಟಿದ್ದಾರೆ. ಈ ವೇಳೆ ಲಾರಿ ಚಾಲಕ ಇಳಿದು ಪರಾರಿಯಾದರೆ, ಅಪಾಯದ ಅರಿವಾದ ಉ’ಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಶರಣಾಗುವಂತೆ ನೀಡಿದ ಎಚ್ಚರಿಕೆಯನ್ನು ಉ’ಗ್ರರು ತಿರಸ್ಕರಿಸಿದ ಕಾರಣ ತಾವೂ ಪ್ರತಿ ದಾಳಿ ನಡೆಸಿ ನಾಲ್ವರನ್ನೂ ಹತ್ಯೆಗೈದಿದ್ದಾರೆ.

ಗಡಿಯಲ್ಲಿ ಭಾರತೀಯ ಯೋಧರು ಭಾರೀ ಕಣ್ಗಾವಲು ಇಟ್ಟಿರುವ ಕಾರಣ ದೀಪಾವಳಿ ಅಮಾವಾಸ್ಯೆ ಸಮಯವನ್ನೇ ಉ’ಗ್ರರು ಆಯ್ದುಕೊಂಡು ಭಾರತ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗ ಜೈಷ್‌ ಉ’ಗ್ರರು ಭಾರತ ನುಸುಳಲು ಬಳಸಿದ್ದ ಸುರಂಗವನ್ನು ಭಾರತೀಯ ಭದ್ರತಾ ಪಡೆಗಳು ಶೋಧಿಸುವಲ್ಲಿ ಯಶಸ್ವಿಯಾಗಿವೆ. ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕಾಶ್ಮೀರದ ಸಾಂಬಾ ವಲಯದಲ್ಲಿ ಮೂರು ದಿನಗಳ ಶೋಧ ಕಾರ್ಯಾಚರಣೆ ಬಳಿಕ 150 ಮೀಟರ್‌ ಉದ್ದದ ಈ ಸುರಂಗ ಪತ್ತೆಯಾಗಿದೆ ಎಂದು ಡಿಜಿಪಿ ದಿಲ್ಬಾಂಗ್‌ ಸಿಂಗ್‌ ಹೇಳಿದ್ದಾರೆ. ಪಾಕಿಸ್ತಾನದ ಗಡಿಯಲ್ಲಿ ಭಾರೀ ಬಂದೋಬಸ್‌್ತ ಇರುವ ಕಾರಣ ಇಷ್ಟುಪ್ರಮಾಣದ ಶ’ಸ್ತ್ರಾಸ್ತ್ರಗಳೊಂದಿಗೆ ಪಾಕಿಸ್ತಾನ ಬೆಂಬಲಿತ ಉ’ಗ್ರರು ಭಾರತದ ಗಡಿ ನಸುಳಲು ಸಾಧ್ಯವೇ ಇಲ್ಲ. ಹೀಗಾಗಿ ಪಾಕಿಸ್ತಾನದ ಉ’ಗ್ರರು ಗುಪ್ತ ಸುರಂಗವೊಂದರ ಮೂಲಕ ಭಾರತ ಪ್ರವೇಶಿಸಿರಬಹುದು ಎಂದು ಗುಪ್ತಚರ ಇಲಾಖೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೂ ಬಿಎಸ್‌ಎಫ್‌ ಯೋಧರು ಮತ್ತು ಪೊಲೀಸರ ನಿರಂತರ ಶ್ರಮದ ಪರಿಣಾಮ ಸುರಂಗ ಶೋಧ ಕಾರಾರ‍ಯಚರಣೆ ಯಶಸ್ವಿಯಾಗಿದೆ.

ಇದನ್ನೂ ಓದಿ :  ಕುಮಾರಸ್ವಾಮಿ ಪಲ್ಟಿ ಗಿರಾಕಿ: ಶಾಸಕ ವ್ಯಂಗ್ಯ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/

ಎಲ್‌ಒಸಿ ದಾಟಲು ಭ’ಯೋ’ತ್ಪಾ’ದಕರು ಬಳಸುವ ಸುರಂಗದ ವಿಡಿಯೋ ನೋಡಿ:

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/