ಇವರೇ ನೋಡಿ ವೈರಲ್ ಆಗಿರುವ ಫೋಟೋ ಹಿಂದಿನ ಕೈಚಳಕ! ಕರಣ್ ಆಚಾರ್ಯ ಬಿಡಿಸಿರುವ ಎಲ್ಲಾ ಪೆಯಿಂಟಿಂಗ್ಸ್ ಇಲ್ಲಿವೆ ನೋಡಿ!ಕರಣ್ ಆಚಾರ್ಯ… ತನ್ನ ಅದ್ಭುತ ಚಿತ್ರಗಳಿಂದಲೇ ಹೆಸರು ಪಡೆದವರು. ಇವರು ಸಿದ್ಧಪಡಿಸಿದ್ದ ರುದ್ರ ಹನುಮಾನ್ ಚಿತ್ರ ಇಂದಿಗೂ ಸಖತ್ ಫೇಮಸ್. ಐದು ವರ್ಷಗಳ ಹಿಂದೆ ಊರಿನ ದೇವಾಲಯದ ಧ್ವಜಕ್ಕಾಗಿ ವಿಶೇಷವಾದ ಹನುಮನ ಚಿತ್ರ ರಚಿಸಿ ಕೊಡುವಂತೆ ಸ್ನೇಹಿತರು ಕೇಳಿಕೊಂಡಾಗ ಇವರು ಬಿಡಿಸಿದ್ದ ಹನುಮನ ಚಿತ್ರ ಇಡೀ ರಾಷ್ಟ್ರದಾದ್ಯಂತ ಖ್ಯಾತಿ ಗಳಿಸಿತ್ತು.

ದೇಶವ್ಯಾಪಿ ವಾಹನಗಳಲ್ಲಿ ಇಂದಿಗೂ ಈ ಹನುಮನ ಸ್ಟಿಕ್ಕರ್ ಕಾಣಬಹುದು. ಹೀಗೆ ತನ್ನ ಕಲಾಕೌಶಲ್ಯದಿಂದ ಸದಾ ಸುದ್ದಿಯಲ್ಲಿರುವ ಕರಣ್ ಆಚಾರ್ಯರು ಈಗ ಮತ್ತೆ ಇನ್ನೊಂದು ಅದ್ಭುತ ಕಲಾಕೃತಿಯ ಮೂಲಕ ಎಲ್ಲರ ಗಮನ ಸೆಳೆದಿದೆ. ಕರಣ್ ರಚಿಸಿರುವ ಈ ಶ್ರೀಕೃಷ್ಣನ ಚಿತ್ರ ನಿಜಕ್ಕೂ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಇತ್ತೀಚೆಗೆ ಇವರ ಅಭಿಮಾನಿಯಾಗಿರುವ ಕುಟುಂಬವೊಂದು ನಮ್ಮ ಮಗುವನ್ನು ಶ್ರೀಕೃಷ್ಣನಂತೆ ಚಿತ್ರಿಸಿ ಎಂದು ಮನವಿ ಮಾಡಿಕೊಂಡಿದ್ದರು. ಈ ಫೋಟೋದಲ್ಲಿ ಮೂವರು ಇದ್ದರು. ಈ ಫೋಟೋವನ್ನೇ ಕರಣ್ ಅವರು ಅದ್ಭುತ ಕಲಾಕೃತಿಯಾಗಿ ಪರಿವರ್ತಿಸಿದ್ದರು. ಸಾಕ್ಷಾತ್ ಬಾಲಕೃಷ್ಣನೇ ಕಣ್ಣೆದುರಿಗೆ ಇರುವಂತಿದೆ ಈ ಅಪೂರ್ವ ದೃಶ್ಯ. ಅಪೂರ್ವ ಸಿರಿವಂತಿಕೆಯಿಂದ ಕೂಡಿರುವ ಈ ಫೋಟೋವನ್ನು ಕರಣ್ ಅವರು ತಮ್ಮ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇಂತಹ ಅದ್ಭುತ ಚಿತ್ರ ವೈರಲ್ ಆಗದೇ ಇರುವುದೇ…? ಕ್ಷಣಮಾತ್ರದಲ್ಲಿ ಈ ಫೋಟೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಫೋಟೋವನ್ನು ನೋಡಿದ ಎಲ್ಲರೂ ಆಚಾರ್ಯದ ಕಲಾಕೌಶಲ್ಯಕ್ಕೆ ಬೆರಗುಗೊಂಡಿದ್ದಾರೆ. ನಿಜಕ್ಕೂ ಈ ಚಿತ್ರ ಮನಸ್ಸಿಗೆ ಹಿತ ನೀಡುತ್ತದೆ. ಫೋಟೋದಲ್ಲಿ ಕಾಣುತ್ತಿರುವ ಬಾಂಧವ್ಯ, ಪ್ರೀತಿಯ ಸಿರಿವಂತಿಕೆ ಕಣ್ಣಿಗೆ ಕಟ್ಟಿದಂತಿದೆ.

ಯಾರು ಈ ಕರಣ್ ಆಚಾರ್ಯ? ಈಗ ಏನ್ ಮಾಡ್ತಿದ್ದಾರೆ?

ಚಿತ್ರಕಲೆಗಳ ಮೂಲಕ ಅದರಲ್ಲಿಯೂ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ತಮ್ಮ ಕೈಚಳಕದ ಮೂಲಕ ಇಡೀ ಜಗತ್ತನ್ನೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು ಕರಣ್ ಆಚಾರ್ಯ. ಪೇಯಿಂಟಿಂಗ್‌ನಲ್ಲಿ ತರಬೇತಿ ಪಡೆದಿದ್ದಾರೆ. ಕಲೆಯೇ ನನ್ನ ಉಸಿರು, ಕಲೆಯೇ ನನ್ನ ಜೀವ, ಜೀವನ ಎಂದು ಪ್ರೀತಿಸುತ್ತಿರುವ ವ್ಯಕ್ತಿ ಇವರು. ಇವರ ಕೈಚಳಕದಿಂದ ಉಗ್ರ ಸ್ವರೂಪಿ ಆಂಜನೇಯ ಸೇರಿದಂತೆ ಪಾರ್ವತಿ, ಅಯ್ಯಪ್ಪ, ರಾಮ, ಮಹರ್ಷಿ ವಿಶ್ವಕರ್ಮ, ಗಣಪತಿ, ಪ್ರಧಾನಿ ಮೋದಿ, ಅಜಾತಶತ್ರು ವಾಜಪೇಯಿ, ಕಂಬಳಕ್ಕೆ ಪ್ರೋತ್ಸಾಹಿಸುವ ಚಿತ್ರ ಹೀಗೆ ಹಲವು ಚಿತ್ರಗಳು ಮೂಡಿಬಂದಿವೆ. ಮೂಲತಃ ಕಾಸರಗೋಡಿನವರಾದ ಕರಣ್ ಆಚಾರ್ಯ ಅವರ ನಿಜವಾದ ಹೆಸರು ಕಿರಣ್ ಆಚಾರ್. ಕಾಸರಗೋಡಿನಲ್ಲೇ ಪಿಯುಸಿವರೆಗೂ ವ್ಯಾಸಂಗ ಮಾಡಿದ ಇವರು, ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಅನಿಮೇಷನ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿರುವ ಕೆಲವು ಆರ್ಟ್ ಇಲ್ಲಿದೆ ನೋಡಿ.

ಸ್ನೇಹಿತರೇ.. ಕರಣ್ ಆಚಾರ್ಯ ಅವರನ್ನು ಎಲ್ಲರಿಗೂ ಪರಿಚಯಿಸಬೇಕಾದ ಜವಬ್ದಾರಿ ನಮ್ಮದು, ದಯವಿಟ್ಟು ಫೇಸ್ಬುಕ್, ವಾಟ್ಸಾಪ್ ನಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳಿ