ಮಲೇರಿಯಾಗೆ ತುತ್ತಾಗಿ ಗುರುತೇ ಸಿಗದಂತಾಗಿದ್ದಾರೆ ಗೂಗ್ಲಿ ಬೆಡಗಿ ಕೃತಿ! ; ಪೋಟೋ ವೈರಲ್ಸದ್ಯಕ್ಕಂತೂ ಕನ್ನಡ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ ನಟಿ ಕೃತಿ ಕರಬಂಧ. ಬಾಲಿವುಡ್‌ನತ್ತಲೇ ಅವರ ಗಮನ ಜಾಸ್ತಿ ಇದೆ. ಕಳೆದ ವರ್ಷ ಅಕ್ಷಯ್‌ ಕುಮಾರ್‌ ಜೊತೆ ನಟಿಸಿದ್ದ ‘ಹೌಸ್‌ಫುಲ್‌ 4’ ಸಿನಿಮಾದಿಂದ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಈ ನಡುವೆ ಅವರ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌ ಕೇಳಿಬಂದಿದೆ. ಹೌದು, ಕೃತಿ ಕರಬಂಧ ಅವರಿಗೆ ಮಲೇರಿಯಾ ಆಗಿದೆ. ಈ ಸುದ್ದಿಯನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆ ಅವರು ಶೇರ್‌ ಮಾಡಿಕೊಂಡಿರುವ ಫೋಟೋ ನೋಡಿದರೆ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅಷ್ಟರಮಟ್ಟಿಗೆ ಅವರು ಬಳಲಿದಂತೆ ಕಾಣುತ್ತಿದ್ದಾರೆ. ‘ಹಾಯ್‌, ಇದು ನನ್ನ ಮಲೇರಿಯಾ ಮುಖ’ ಎಂದು ಹೇಳುತ್ತಲೇ ಆ ಫೋಟೋವನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ.

‘ನನ್ನ ಬಗ್ಗೆ ಅನೇಕರು ಚಿಂತೆ ಮಾಡುತ್ತಿದ್ದೀರಿ. ನಾನು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಇನ್ನಷ್ಟು ಸುಧಾರಿಸಿಕೊಳ್ಳಲಿದ್ದೇನೆ’ ಎಂದು ಕೃತಿ ಹೇಳಿದ್ದಾರೆ. ಕೊರೊನಾ, ಲಾಕ್‌ಡೌನ್‌ ಮುಂತಾದ ಅಡೆತಡೆಗಳಿರುವ ಈ ವರ್ಷದಿಂದಾಗಿ ಅವರು ತಾಳ್ಮೆ ಕಲಿತಿದ್ದಾರಂತೆ. ಮಲೇರಿಯಾದಿಂದ ಗುಣಮುಖರಾಗಲು ಕೃತಿ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರಿಂದಾಗಿ ಅವರಿಗೆ ಬೋರ್‌ ಆಗುತ್ತಿದೆ. ಹಾಗಾಗಿ ಅಭಿಮಾನಿಗಳಲ್ಲಿ ಒಂದು ವಿಚಿತ್ರವಾದ ಮನವಿಯನ್ನು ಮಾಡಿಕೊಂಡಿದ್ದಾರೆ. ‘ದಯವಿಟ್ಟು ತುಂಬ ಫನ್ನಿಯಾಗಿರುವ ಮೀಮ್‌ಗಳನ್ನು ಶೇರ್‌ ಮಾಡಿ. ವಿಶ್ರಾಂತಿ ಪಡೆಯುತ್ತ ಬೇಜಾರಾಗಿದೆ. ಮಾಡಲು ಬೇರೇನೂ ಕೆಲಸ ಇಲ್ಲ’ ಎಂದಿದ್ದಾರೆ  ಗೂಗ್ಲಿ ಬೆಡಗಿ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938