ರಾಜಕಾರಣದ ಗೊಂದಲಕ್ಕೆ ಈ ಇಬ್ಬರ ನಾಯಕರ ಡಬಲ್ ಗೇಮ್ ನೇರ ಕಾರಣ: ಕುಟುಕಿದ ಈಶ್ವರಪ್ಪರಾಯಚೂರು: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ದ್ವಂದ್ವ ಹೇಳಿಕೆ ನೀಡುವ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ಧಿ ಈಶ್ವರಪ್ಪ ಮಾತನಾಡಿ ಕಿಡಿಕಾರಿದರು, ಸಿಎಂ ರಾಜೀನಾಮೆ ಹಾಗೂ ಬದಲಾವಣೆ ವಿಚಾರದಲ್ಲಿ ಯಡಿಯೂರಪ್ಪ ಈಗಾಗಲೇ ಕೇಂದ್ರದ ನಾಯಕರು ಕೇಳಿದರೆ ರಾಜೀನಾಮೆ ಕೊಡಲು ಸಿದ್ದ ಅಂತ ಹೇಳುವ ಮೂಲಕ ಶಿಸ್ತಿನ ಪಕ್ಷದ ಶಿಸ್ತಿನ ನಾಯಕ ಎನ್ನುವುದನ್ನು ಎಲ್ಲರಿಗೂ ತೋರಿಸಿ ಕೊಟ್ಟಿದ್ದಾರೆ. ಬಿಜೆಪಿ ಯಲ್ಲಿ ಬಿಎಸ್‌ವೈ ಬಿಟ್ಟರೆ ಸಿಎಂ ಬೇರೇ ಯಾರು ಸಿಎಂ ಆಗಲು ಅರ್ಹರಿಲ್ಲ ಎನ್ನುವ ಕಾಂಗ್ರೇಸ್ ಹೇಳಿಕೆ ಈಗ ಬದಲಾಗಿದೆ. ಬಿಜೆಪಿಯಲ್ಲಿ ಬಹಳಷ್ಟು ಜನರಿಗೆ ಸಿಎಂ ಗದ್ದುಗೆ ಅಲಂಕರಿಸುವ ಸಾಮರ್ಥ್ಯವಿದೆ. ಡಿಕೆಶಿ ಡಬಲ್ ಗೇಮ್ ಆಡುವುದು ಮೊದಲು ನಿಲ್ಲಿಸಲಿ.

ಸಹಿ ಸಂಗ್ರಹಣೆ ಇಲ್ಲ: ನಮ್ಮ ಶಾಸಕರಲ್ಲಿ ಸಹಿ ಸಂಗ್ರಹ ವಿಚಾರ ಬಗ್ಗೆ ಆತಂಕ ಶುರುವಾಗಿದೆ. ಸಹಿ ಬಗ್ಗೆ ನಾನು ಗಮನಿಸಿಲ್ಲ , ಹಿಂದೆ ಯಾವುದಕ್ಕೂ ಮಾಡಿದ ಸಹಿ ಸಂಗ್ರಹವಾಗಿದೆ. ಸಹಿ ಸಂಗ್ರಹಿಸುವುದು ನಮ್ಮ ಬಿಜೆಪಿಯ ಪದ್ದತಿ ಇಲ್ಲ, ಯಾರು ಪರ, ವಿರುದ್ದ ಸಹಿ ಸಂಗ್ರಹ ಮಾಡಕೂಡದು ಎಂದು ಹೇಳಲಾರೆ.

ಇದನ್ನೂ ಓದಿ :  ಈಶ್ವರಪ್ಪ ಮತ್ತೆ ಸಿಡಿಮಿಡಿ

ಲಸಿಕೆಗಾಗಿ ಸಾಲು ನಿಂತ ಕಾಂಗ್ರೆಸ್ಸಿಗರು: ಮೋದಿ ವ್ಯಾಕ್ಸಿನ್ ಪಡೆಯಬೇಡಿ ಅಂಚೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಯುಟಿ ಖಾದರ್ ಲಸಿಕೆ ಹಾಕಿಸಿ , ಕೊಂಡರೆ ಪುರಷತ್ವ ಹೋಗುತ್ತೆ ಎಂದರು, ವ್ಯಾಕ್ಸಿನ್ ಹಾಕಿಸಿಕೊಳ್ಳಬೇಡಿ ಎಂದಿದ್ದ ಕಾಂಗ್ರೆಸ್ ನಾಯಕರು ಇವತ್ತು ಕ್ಯೂ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆಂದು ಲೇವಡಿ ಮಾಡಿದರು.

ಹಳ್ಳಿಯಲ್ಲಿ ಸೋಂಕು ಕಡಿಮೆ: ಗ್ರಾಮೀಣ ಭಾಗದಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಸೋಂಕಿತರ ಸಂಖ್ಯೆ ಕಡಿಮೆ ಮಾಡಿದ್ದೇವೆ. ಗ್ರಾಮೀಣ ಭಾಗದ ಜನ ಸ್ಪಂದನೆ ನೀಡಿದ್ದರಿಂದ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.