ಕುಮಾರಸ್ವಾಮಿ ಪಲ್ಟಿ ಗಿರಾಕಿ: ಶಾಸಕ ವ್ಯಂಗ್ಯಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯವೇ ಬೇರೆ, ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ರಾಜಕೀಯವೇ ಬೇರೆ. ಅಧಿಕಾರಕ್ಕಾಗಿ ಕುಮಾರಸ್ವಾಮಿ ಏನು ಬೇಕಾದರೂ ಮಾಡುತ್ತಾರೆ. ಪಲ್ಟಿ ಹೊಡೆಯುತ್ತಾರೆ. ಹಣಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿಯುತ್ತಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಬುಧವಾರ ಗಂಭೀರ ಆರೋಪ ಮಾಡಿದರು. ಕುಮಾರಸ್ವಾಮಿ ಯಾವಾಗ ಬೇಕಾದರೂ ಕಾಂಗ್ರೆಸ್‌ಗೆ ಸೇರ್ಪಡೆಯಾಗಬಹುದು ಎಂದೂ ವ್ಯಂಗ್ಯವಾಡಿದ್ದಾರೆ . ನಾನು ಹಿಂದೆ ಜೆಡಿಎಸ್‌ನಲ್ಲೇ ಇದ್ದವನುಯ. ಆದರೆ ಈಗ ಜೆಡಿಎಸ್ ತನ್ನ ನೆಲೆ ಕಳೆದುಕೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸಕ್ಕೆ ಕುಮಾರಸ್ವಾಮಿ ಪದೇ ಪದೇ ಹೋಗುವುದರ ಅರ್ಥವೇನು? ಕುಮಾರಸ್ವಾಮಿ ಪಲ್ಟಿ ಗಿರಾಕಿ. ಯಾವಾಗ ಬೇಕಾದರೂ ಕಾಂಗ್ರೆಸ್‌ಗೆ ಸೇರಬಹುದು ಎಂದರು.

ಇದನ್ನೂ ಓದಿ :  ಅಸಮಾಧಾನ ಹೊರಹಾಕಿದ ಪ್ರಭು ಚವ್ಹಾಣ್? ಕೆಲಸ ಮಾಡಲು ಆಗದಿದ್ದರೆ ಖುರ್ಚಿ ಕಾಲಿ ಮಾಡಿ

ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದಾರಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಯಿಂದ ಬೇಸತ್ತ ಜನರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಸಿಎಂ ಆಗಲಿ: ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕು ಎಂದು ಜನ ಹೇಳುತ್ತಿದ್ದಾರೆ . ಹೈಕಮಾಂಡ್‌ಗೆ ಸಹ ಸಿದ್ದರಾಮಯ್ಯ ಪರ ಒಲವಿದ್ದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಇಂಥ ಸಮಯದಲ್ಲಿ ಸಿಎಂ ಆಗಿದ್ದರೆ ಜನತೆ ಇಷ್ಟು ಕಷ್ಟ ಪಡಬೇಕಿರಲಿಲ್ಲ. ಉಪಚುನಾವಣೆಯಲ್ಲಿ ನಾವು ಪರಾಭವಗೊಂಡಿದ್ದು ಜೆಡಿಎಸ್‌ನಿಂದಲೇ ಎಂದರು.