ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಂಟೆಮತ್ತೆ ಕಿರಿಕ್ ಮಾಡಿಕೊಂಡು 20 ಯುದ್ಧ ವಿಮಾನದಿಂದ ತಾಲೀಮು ಲಡಾಖ್‌ ಗಡಿ ಬಳಿ ಮತೆ ಚೀನಾ ತಾಲೀಮು ನಡೆಸಿ ತಂಟೆ ಮಾಡುತ್ತಿದೆ.

ನವದೆಹಲಿ : ಪೂರ್ವ ಲಡಾಖ್‌ನಿಂದ ಸೇನಾ ಹಿಂತೆಗೆತ ಒಪ್ಪಂದವನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದ ಚೀನಾ, ಮತ್ತೊಂದೆಡೆ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಯುದ್ಧ ವಿಮಾನಗಳ ಮೂಲಕ ಭರ್ಜರಿ ತಾಲೀಮು ನಡೆಸಿದ ವಿಷಯ ಬೆಳಕಿಗೆ ಬಂದಿದೆ. ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ವಾರದ ಹಿಂದೆ ಪೂರ್ವ ಲಡಾಖ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಚೀನಾ ಇಂಥದ್ದೊಂದು ತಾಲೀಮು ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ :  ಆರು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗುತ್ತೆ ಭವಿಷ್ಯ‌ ನುಡಿದ ಕೈ ಶಾಸಕ

ಪೂರ್ವ ಲಡಾಖ್‌ಗೆ ಅಭಿಮುಖವಾಗಿರುವ ಪ್ರದೇಶದಲ್ಲಿ ಚೀನಾ ಸೇನೆ ಇತ್ತೀಚೆಗೆ ಕನಿಷ್ಠ 20-22 ಯುದ್ಧ ವಿಮಾನಗಳನ್ನು ಬಳಸಿತಾಲೀಮು ನಡೆಸಿವೆ. ಈ ತಾಲೀಮಿನವೇಳೆ ಜೆ-11, ಎಸ್ ಜೆ-16 ಯುದ್ಧ ವಿಮಾನಗಳು ಕೂಡ ಭಾಗಿಯಾಗಿದ್ದವು ಎನ್ನಲಾಗಿದೆ. ಹೊಟಾನ್, ಗರ್ ಗುನ್ನಾ, ಕಶ್ಚರ್ ವಾಯುನೆಲೆಗಳ ಮೂಲಕ ಈ ತಾಲೀಮು ನಡೆಸಲಾಗಿದೆ. ಈ ವೇಳೆ ಚೀನಾ ವಿಮಾನಗಳು ಭಾರತದ ವಾಯುಸರಹದ್ದನ್ನು ದಾಟಿ ಬಂದಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮೇಲೆ ಭಾರತ ನಿಗಾ ಇಟ್ಟಿತ್ತು ಎಂದು ಮೂಲಗಳು ತಿಳಿಸಿವೆ.