6 ಗಂಟೆ ಪ್ರಯಾಣದ ದಾರಿಯನ್ನು 2 ಗಂಟೆಯಲ್ಲಿ ಕ್ರಮಿಸಿದ ಲಂಬೊರ್ಗಿನಿ! ; ಮೈ ಜಲ್ ಎನಿಸುವ ವೀಡಿಯೋ!



ರೋಮ್: ಒಬ್ಬರ ಕಿಡ್ನಿ ಅಥವಾ ಹೃದಯವನ್ನು ಇನ್ನೊಬ್ಬರಿಗೆ ಕಸಿ ಮಾಡಲು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸುವುದು ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲು. ಜೀರೋ ಟ್ರಾಫಿಕ್ ಮಾಡಿಕೊಂಡು ವೇಗವಾಗಿ ಆಂಬುಲೆನ್ಸ್ ಓಡಿಸಿದ ಎಷ್ಟೋ ಸುದ್ದಿ ಕೇಳಿದ್ದೇವೆ. ಇಟಲಿ ಪೊಲೀಸರು ಲಾಂಬೊರ್ಗಿನಿ ಕಾರ್ ಬಳಸಿ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ವೇಗಕ್ಕೇ ಹೆಸರಾಗಿರುವ ಲಾಂಬೊರ್ಗಿನಿ ಹುರಾಕಾನ್ ಎಲ್‌ಪಿ-610-4 ಕಾರನ್ನು ಗಂಟೆಗೆ 230 ಕಿಮೀ ವೇಗದಲ್ಲಿ ಓಡಿಸಿ 6ತಾಸಿನ ದಾರಿಯನ್ನು 2 ತಾಸಿನಲ್ಲಿ ಕ್ರಮಿಸಿ, ಮೂತ್ರಪಿಂಡವನ್ನು ಸರಿಯಾದ ಸಮಯಕ್ಕೆ ಸಾಗಿಸಿ ಒಂದು ಜೀವ ಉಳಿಸಿದ ಘಟನೆ ಇಟಲಿಯಲ್ಲಿ ನಡೆದಿದೆ. ರ‍್ಯೂಟರ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಕಾರಿನಲ್ಲಿ ಮೂತ್ರಪಿಂಡವನ್ನು ಸಾಗಿಸುವ ವಿಡಿಯೋ ಅಪ್ ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ.

ಇಟಲಿಯ ಉತ್ತರ ಭಾಗದಲ್ಲಿರುವ ಪಾಡೊವಾ ಎಂಬ ಪುಟ್ಟ ನಗರದ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಂದ ತೆಗೆದ ಮೂತ್ರಪಿಂಡವನ್ನು ದೇಶದ ದಕ್ಷಿಣ ಭಾಗದಲ್ಲಿರುವ ರಾಜಧಾನಿ ನಗರ ರೋಮ್‌ನ ಆಸ್ಪತ್ರೆಗೆ ಸಾಗಿಸಬೇಕಿತ್ತು. ಸಾಮಾನ್ಯವಾಗಿ 6 ತಾಸಿನ ದಾರಿ ಇದಾಗಿದೆ. ಆದರೆ, ಇಟಲಿ ಪೊಲೀಸರ ಈ ಕಾರು ಬೆಳಗ್ಗೆ 10.30 ಕ್ಕೆ ಹೊರಟು ವಾಹನ ಸಂಚಾರವಿರುವ ರಸ್ತೆಯಲ್ಲಿ ಕ್ರಮಿಸಿ 12.30 ಕ್ಕೆಲ್ಲ ಗುರಿ ತಲುಪಿತ್ತು. ಇಟಲಿ ಪೊಲೀಸರು ಇಂಥ ತುರ್ತು ವ್ಯವಸ್ಥೆಗಾಗಿಯೇ ಈ ಕಾರನ್ನು ಬಳಸುತ್ತಿದ್ದಾರೆ. ಈ ಕಾರಿನಲ್ಲಿ ಕಂಪ್ಯೂಟರ್ ವ್ಯವಸ್ಥೆ. ಅಂಗಾಂಗಗಳನ್ನು ಇಡಲು ಶೀತಲೀಕರಣ ವ್ಯವಸ್ಥೆಗಳೂ ಇವೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938