BIG BREAKING: ಡಿಸಿಎಂ ನೇತೃತ್ವದಲ್ಲಿ ಜರುಗುತ್ತಿದ್ದ ವೇದಿಕೆಯಲ್ಲೇ ಕುಸಿದು ಬಿದ್ದು ಬಿಜೆಪಿ ಕಾರ್ಯಕರ್ತನ ಸಾವು!

ರಾಮನಗರ: ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದುಬಿದ್ದು ಬಿಜೆಪಿ ಕಾರ್ಯಕರ್ತನೊಬ್ಬ ಮೃತಪಟ್ಟಿರುವ ಘಟನೆ ಮಾಗಡಿಯಲ್ಲಿ ಗುರುವಾರ ನಡೆದಿದೆ. ತಿಪ್ಪಸಂದ್ರ ಹೋಬಳಿಯ ಹೆಬ್ಬೆಳಲು ಗ್ರಾಮದ ನಿವಾಸಿ ಶಿವರಾಜು (55) ಮೃತ ವ್ಯಕ್ತಿ. ಹೃದಯಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬಿಜೆಪಿಗೆ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಮಾಗಡಿಯಲ್ಲಿ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಭಾಗಿಯಾಗಿದ್ದರು. ಕಾರ್ಯಕ್ರಮ ಪೂರ್ಣಗೊಳ್ಳುವ ಸಮಯದಲ್ಲಿ ವೇದಿಕೆ ಮೇಲಿಂದಲ್ಲೇ ಕುಸಿದು‌ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮೊದಲೇ ಶಿವರಾಜು‌ ಸಾವಿಗೀಡಾದ್ದಾರೆ. ಡಿಸಿಎಂ ವೇದಿಕೆ ಇಳಿಯುತ್ತಿದ್ದಂತೆ ಶಿವರಾಜು ಕುಸಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೃತರು ತಿಪ್ಪಸಂದ್ರ ಹೋಬಳಿ ಮಂಡಲದ ಕಾರ್ಯದರ್ಶಿಯಾಗಿದ್ದರು.

ಇದನ್ನೂ ಓದಿ :  ಬ್ರೇಕಿಂಗ್ ನ್ಯೂಸ್ : ಪಾಲ್ಘರ್ ಸಾಧುಗಳ ಹ"ತ್ಯೆ ಗೆ ಕೊನೆಗೂ ಸಿಗಲೇ ಇಲ್ಲ ನ್ಯಾಯ! ಮಹತ್ವದ ತಿರುವು

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/